“ಯುವಕರೇ’ ಬೈಕ್ ಏರುವ ಮುನ್ನ ತಂದೆ – ತಾಯಿ ನೆನಪಿಸಿ ಕೊಳ್ಳಿರಿ”…..

ರಾಜ್ಯದಲ್ಲಿ ಬೆಳಗಾಗಿ ಸಂಜೆ ಆಗುವದರೊಳಗೆ ಅಪಘಾತಗಳ ಸಂಖ್ಯೆಗೆನು ಕಡಿಮೆ ಇಲ್ಲ ಅಪಘಾತಗಳಾಗಿ ನೂರಾರು ಜನರು ಅದರಲ್ಲಿಯೂ ಯುವಕರು ಹೆಚ್ಚು ತಮ್ಮ ಪ್ರಾಣ ಕಳೆದು ಕೊಳ್ಳುತ್ತಾರೆ ವಾಹನಗಳ ಚಾಲನೆ ಮಾಡುವಾಗ ನಿರ್ಲಕ್ಷ್ಯವೇ ಮೂಲ ಕಾರಣ ಸರ್ಕಾರಗಳು ಸಾರಿಗೆ ಇಲಾಖೆ ಮಾರ್ಗಸೂಚಿ ಅನುಸರಿಸುವಂತೆ ತಿಳಿಸಿದರು ಜನರ ನಿರ್ಲಕ್ಷತನ ದಿಂದ ಆಗುವ ಅಪಘಾತಗಳಿಗೆ ಜೀವ ಕಳೆದು ಕೊಳ್ಳುವ ಸಂಖ್ಯೆ ಹೇಚ್ಚಾಗಿವೆ. ಯುವ ಜನರಲ್ಲಿರುವ ಅಸಡ್ಡೆ ವರ್ತನೆ ಮಿತಿಮೀರಿ ವಾಹನ ಚಲಾವಣೆ, ಸವಾರರು ತೋರುವ ನಿರ್ಲಕ್ಷವೇ ಅಪಘಾತ ಅನಾಹುತಗಳು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದು ಪ್ರಸ್ತುತ ದಿನ ಮಾನದಲ್ಲಿ ಯುವಕರು ಬೈಕ್ ರೈಡಿಂಗ್ ಅಪಘಾತಗಳು ಹೆಚ್ಚಾಗಿ ವಯಸ್ಸಿಗೆ ಬಂದಿರುವ ಯುವಕರು ಪ್ರಾಣ ಕಳೆದು ಕೊಳ್ಳುವರ ಸಂಖ್ಯೆ ಹೆಚ್ಚಾಗುತ್ತಿದೆ.ತಂದೆ-ತಾಯಿ ನನ್ನ ಮಗ ಬೆಳೆದು ದೊಡ್ಡವನಾಗಿದ್ದಾನೆ, ವಯಸ್ಸಿಗೆ ಬಂದಿದ್ದಾನೆ ಮಗನಿಗೆ ಬೇಕಾದ ಎಲ್ಲಾ ಸಕಲ ಸೌಲಭ್ಯ ನೀಡಿ ಉನ್ನತ ಶಿಕ್ಷಣ ಕೊಡಿಸಿ ಶಾಲೆ ಕಲಿಸಿದ್ದೇವೆ ಇನ್ನು ನಮ್ಮ ಜವಾಬ್ದಾರಿ ಮುಗಿಯಿತು ಇನ್ನೇನು ನನ್ನ ಮಗ ತನ್ನ ಕಾಲ ಮೇಲೆ ತಾನು ನಿಂತು ನಮ್ಮನ್ನು ಸಾಕುತ್ತಾನೆ ಎಂದು ನಿರೀಕ್ಷೆಯಲ್ಲಿರುವ ಅದೆಷ್ಟು ತಂದೆ ತಾಯಿಗಳಿಗೆ ಹೆಚ್ಚಾಗುತ್ತಿರುವ ಬೈಕ ಅಪಘಾತಗಳಿಂದ ಕಂಗಾಲಾಗಿದ್ದಾರೆ ಪ್ರಾಣ ಕಳೆದು ಕೊಳ್ಳುವ ಯುವಕರ ಸಂಖ್ಯೆ ಮಿತಿ ಮೀರುತ್ತಿದೆ ನಿರೀಕ್ಷೆ ಇಟ್ಟು ಕೊಂಡಿದ್ದ ತಂದೆ-ತಾಯಿಗಳ ಮುಂದೆಯೇ ಮಕ್ಕಳು ಮಣ್ಣಿನಲ್ಲಿ ಮಣ್ಣಾಗಿ ಹೋದರೆ ತಂದೆ ತಾಯಿಗಳ ಪರಿಸ್ಥಿತಿ ಹೇಗಾಗಬೇಡ ಎನ್ನುವುದು ಒಂದು ಕ್ಷಣ ಯಾವ ಮಕ್ಕಳು ವಿಚಾರ ಮಾಡದಿರುವುದೇ ಈ ಅಪಘಾತಗಳ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ ಯುವಕರೇ ನಿಮ್ಮ ಮೇಲೆ ಬೃಹದಾಕಾರದ ನಿರೀಕ್ಷೆ ಇಟ್ಟುಕೊಂಡ ತಂದೆ-ತಾಯಿ ನಿಮ್ಮನ್ನು ಸಾಕಿ ಸಲುವಿ ಜೋಪಾನ ಮಾಡಿ ಒಂದು ಅಂತಕ್ಕೆ ತಂದು ಇನ್ನೇನು ನಿಮ್ಮನ್ನು ದಾರಿಗಚ್ಚ ಬೇಕು ಎನ್ನುವಷ್ಟರಲ್ಲಿ ಕುಚೇಷ್ಟೆ ಮಾಡಲು ಹೋಗಿ ಎರ್ರಾ ಬಿರ್ರಿ ಕುಡಿದು ಮತ್ತಿನಲ್ಲಿ ಬೈಕ್ ಹೊಡೆದು ಅಪಘಾತವಾಗಿ ಸತ್ತವರ ಸಂಖ್ಯೆಗೇನು ಕಡಿಮೆ ಇಲ್ಲ ಆದರೆ ಯುವಕರು ಸತ್ತ ನಂತರ ತಂದೆ-ತಾಯಿಗಳು ಅನುಭವಿಸುವ ನರಕ ಯಾತನೆ ಯಾರಿಗೂ ಬರಬಾರದು ಎನ್ನುವಷ್ಟು ನೋವಾಗುತ್ತದೆ ಹಾಗಾಗಿ ಯುವಕರೇ ಇವತ್ತಿನ ದಿನ ಮಾನದಲ್ಲಿ ಆಗುತ್ತಿರುವ ಬೈಕ್ ಅಪಘಾತಗಳಿಂದಲೇ ಸಾಕಷ್ಟು ಯುವಕರು ಕ್ಷಣ ಮಾತ್ರದಲ್ಲಿ ಪ್ರಾಣ ಕಳೆದು ಕೊಳ್ಳುತ್ತಾರೆ ಇನ್ನೂ ಕೆಲವರು ಜೀವ ಇದ್ದು ಇಲ್ಲದಂತೆ ಅಂಗವೈಕಲ ರಾಗಿದ್ದಾರೆ ಆದರೆ ಮಕ್ಕಳು ಅನುಭವಿಸುವ ನರಕಯಾತನೆ ಕಣ್ಣಾರೆ ಕಂಡು ನೋಡುವ ತಂದೆ ತಾಯಿಗಳ ಮನಸ್ಸಿಗೆ ಎಷ್ಟು ನೋವಾಗುತ್ತದೆ ಎನ್ನುವುದು ಒಂದು ಕ್ಷಣ ಯುವಕರೂ ವಿಚಾರ ಮಾಡಿದರೆ ಬೈಕ್ ಅಪಘಾತಗಳ ತಡೆಗಟ್ಟುವ ಶಕ್ತಿ ಯುವಕರು ಕೈಯಲ್ಲಿದೆ ಹಾಗಾಗಿ ಯುವಕರು ಈ ರಾಷ್ಟ್ರದ ದೇಶದ ಬೆನ್ನೆಲುಬು ಎಂದು ಎಲ್ಲರೂ ನಂಬಿರುತ್ತಾರೆ. ರಾಷ್ಟ್ರ ದೇಶಕ್ಕಿಂತ ಮುಖ್ಯವಾಗಿ ನಿಮ್ಮ ತಂದೆ ತಾಯಿ ಸಾಕಿ ಸಲುವಿ ಆರೈಕೆ ಮಾಡುವ ಜವಾಬ್ದಾರಿ ಯುವಕರ ಮೇಲಿರುತ್ತದೆ ಆದರೆ ತಂದೆ-ತಾಯಿ ಮುಂದೆಯೇ ಮಕ್ಕಳು ಅಪಘಾತವಾಗಿ ತೀರಿ ಹೋದರೆ ತಂದೆ-ತಾಯಿ ಅಕ್ಕ ತಂಗಿಯರನ್ನು ನೋಡಿ ಕೊಳ್ಳುವವ ರ್ಯಾರು ಎನ್ನುವ ಯೋಚನೆ ಮಾಡದೆ ಅದೆಷ್ಟೋ ಯುವಕರು ಅನಿಯಮಿತ ಎರ್ರಾ ಬಿರ್ರಿ ಬೈಕ್ ಸವಾರಿ ಮಾಡಿ ಸಾಕಷ್ಟು ಅನಾಹುತಗಳಾಗಿ ತಂದೆ ತಾಯಿ ಮುಂದೆ ಮಕ್ಕಳು ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವ ದೃಶ್ಯ ನೋಡಿದರೆ ಎಂತವರು. ಮನವು ಒಂದು ಕ್ಷಣ ಜಲ್ ಎಂದು ಬಿಡುತ್ತದೆ ಹಾಗಾಗಿ ಯುವಕರೇ ಇಂತಹ ಅನಾಹುತ ಅಪಘಾತ ಆಗುವುದಕ್ಕಿಂತ ಎರ್ರಾ ಬಿರ್ರಿ ಬೈಕ್ ಸವಾರಿ ಮಾಡುವುದಕ್ಕಿಂತ ಮುಂಚೆ ನಿಮ್ಮ ತಂದೆ ತಾಯಿ ನಿಮ್ಮ ಕುಟುಂಬ ಒಮ್ಮೆ ನಿಮ್ಮ ಕಣ್ಣು ಮುಂದೆ ತಂದುಕೊಳ್ಳಿ ಇಷ್ಟು ನೆನಪು ಮಾಡಿ ಕೊಂಡರೆ ಸಾಕು ನಿಮ್ಮ ಸವಾರಿಯ ಹುರುಪು ನಿಧಾನವಾಗುತ್ತದೆ ಹಾಗಾಗಿ ಇವತ್ತಿನ ದಿನ ಮಾನದಲ್ಲಿ ಬೈಕ್ ಅಪಘಾತಗಳು ಕಾರ್ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪ್ರಾಣ ಕಳೆದು ಕೊಳ್ಳುತ್ತಿದ್ದು. ನಂಬಿದ ತಂದೆ ತಾಯಿಗಳಿಗೆ ಆಸರೆ ಇಲ್ಲದಂತಾಗುತ್ತಿದೆ ಬದುಕು ದುಸ್ತರವಾಗಿ ಶೂನ್ಯ ವೇನಿಸುತ್ತಿದೆ ಹಾಗಾಗಿ ಇವತ್ತಿನ ಯುವಕರು ನಾಳಿನ ತಮ್ಮ ಕುಟುಂಬದ ಜೊತೆಗೆ ಸಮಾಜವ ಮುನ್ನಡೆಸುವ ಜವಾಬ್ದಾರಿಯು ನಿಮ್ಮ ಮೇಲಿದೆ ಎನ್ನುವುದನ್ನು ಮರೆಯಬಾರದು ಮರೆತು ಬೈಕ್ ಚಲಾವಣೆ ಮಾಡಿದರೆ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನುವುದು ಎಲ್ಲಾ ಯುವಕರು ಅರಿತು ಕೊಳ್ಳಬೇಕು.ಕುಡಿದು ಮತ್ತಿನಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವುದು ಮಿರರ್ ಗಳಿಲ್ಲದೆ ಬೈಕ್ ಓಡಿಸುವುದು ಹುಡುಗರಿಗೆ ಕ್ರೇಜ್ ನೀಡುತ್ತಿದ್ದು ಅನಾಹುತಗಳಾಗಲು ಮುಖ್ಯ ಕಾರಣವೇ ಯುವಕರ ನಿರ್ಲಕ್ಷ್ಯತನ ಎಂದು ಅನೇಕ ವರದಿಗಳು ಹೇಳುತ್ತಿದ್ದು ಆದರೂ ಯುವಕ ರ್ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದಲ್ಲದೆ ಬೈಕ್ ಮೇಲೆ ಫ್ಯಾಶನ್ ಮಾಡಿ ಬೈಕ್ ಓಡಿಸುವುದು ಮತ್ತು ಲಾಂಗ್ ಡ್ರೈವ್ ಬೈಕ್ ಓಡಿಸುವುದು ಯುವಕರಿಗೆ ಟ್ರೆಂಡ್ ಆಗಿದೆ ಆದರೆ ಬೈಕ್ ಓಡಿಸುವಾಗ ಅನುಸರಿಸ ಬೇಕಾದ ಮುಂಜಾಗ್ರತೆ ಕ್ರಮ ಯುವಕರು ಅಳವಡಿಸಿ ಕೊಳ್ಳದಿರುವುದೇ ಯುವಕರ ಬೈಕ್ ಅಪಘಾತಗಳು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 16 ರಿಂದ 30 ವಯಸ್ಸಿನ ಯುವಕರೇ ಹೆಚ್ಚು ಬೈಕ್ ಅಪಘಾತಗಳಿಗೆ ಬಲಿಯಾಗುತ್ತಿರುವುದು ತುಂಬಾ ನೋವಿನ ಸಂಗತಿ ಆದರೂ ಇದರ ಬಗ್ಗೆ ಕ್ರಮ ಕೋರಿ ಕೊಳ್ಳುವ ಗೋಜಿಗೆ ತಂದೆ ತಾಯಿಗಳಾಗಲಿ ಮಕ್ಕಳಾಗಲಿ ಹೋಗದಿರುವುದೇ ಅನಾಹುತಗಳಿಗೆ ಕಾರಣವಾಗುತ್ತಿದೆ.ಕುಡಿದು ಬೈಕ್ ಚಲಾವಣೆ ಮಾಡುವುದು ತಪ್ಪು ಎಂದು ಗೊತ್ತಿದ್ದರೂ ಮತ್ತು ಸರ್ಕಾರ ಈ ನಿಲುವಿನ ಬಗ್ಗೆ ಕಟ್ಟು ನಿಟ್ಟಿನ ಆದೇಶ ಕೊಟ್ಟರು ಕುಡಿದ ಮತ್ತಿನಲ್ಲಿ ಸ್ಟೈಲ್ ಮಾಡಲು ಬೈಕ್ ಹತ್ತಿ ಸ್ಟೈಲ್ ನಲ್ಲಿ ಬೈಕ್ ಓಡಿಸುವಾಗ ಅಪಘಾತಗಳಾಗಿ ಜೀವ ಕಳೆದು ಕೊಂಡಿರುವ ಅದೆಷ್ಟೋ ಯುವಕರ ತಂದೆ ತಾಯಿಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ ದಿನಂಪ್ರತಿ ಕುಟುಂಬಸ್ಥರ ಚಿಂತನೆಗಳು ಹೇಗಾಗಿವೆ ಎಂದರೆ ಮನೆಯಿಂದ ಹೊರ ಹೋಗುವ ಯುವಕ ಸುರಕ್ಷಿತವಾಗಿ ಮನೆಗೆ ಬಂದರೆ ಕುಟುಂಬಸ್ಥರಿಗೆ ಮತ್ತು ತಂದೆ ತಾಯಿಗಳಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗುತ್ತದೆ.

ಏಕೆಂದರೆ ಯಾವ ಯಾವ ಸಂದರ್ಭದಲ್ಲಿ ಯುವಕರು ದುಶ್ಚಟ ಕುಡಿಯುವದು ಕಲಿತು ಯಾರ ಸಂಘ ದೋಷದಿಂದ ನಮ್ಮ ಹುಡುಗ ಈಗಾಗುತ್ತಿದ್ದಾನೆ ಎಂದು ಯೋಚನೆ ಮಾಡುವಷ್ಟರಲ್ಲಿಯೇ ಮಗ ಎಡವಟ್ಟು ಮಾಡಿಕೊಂಡು ಅಪಘಾತ ಮತ್ತು ಅನಾಹುತಗಳಿಗೆ ಬಲೆಯಾದ ಅದೆಷ್ಟೋ ಯುವಕರು ತಮ್ಮ ಪ್ರಾಣ ಕಳೆದು ಕೊಂಡಿದ್ದು ಕೆಲವರು ಅಪಘಾತ ದಿಂದಾದ ನೋವಿನಿಂದ ದಿನಂಪ್ರತಿ ಗೋಳಾಡುವ ಪರಿಸ್ಥಿತಿಗಳು ಇವತ್ತು ನಮ್ಮ ಕಣ್ಮುಂದೆ ಇವೆ… ಬೈಕ್ ಅಪಘಾತಗಳ ಸುದ್ದಿಗಳನ್ನು ನೋಡಿದರೆ ಜೀವ ಜಲ್ಲ್ ಎನ್ನುತ್ತದೆ .”ಬಾಳಿ ಬದುಕಬೇಕಾಗಿದ್ದ ಯುವಕ ಬೈಕ್ ಅಪಘಾತದಲ್ಲಿ ಸಾವು” “ಬೈಕ್ ಸ್ಕಿಡ್ಡಾಗಿ ಬಿದ್ದು ಯುವಕ ಸಾವು” “ಎರಡು ಗಾಡಿಗಳ ಮಧ್ಯೆ ಬೈಕ್ ಚಲಾವಣೆ ಮಾಡಿದ ಯುವಕ ಸಾವು” “ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರ ಸಾವು” “ಎದುರಿಗೆ ಬಂದ ವಾಹನಕ್ಕೆ ಬೈಕ್ ಡಿಕ್ಕಿ ಯುವಕರು ಸ್ಥಳದಲ್ಲಿಯೇ ಸಾವು” “ಮನೆಗೆ ಆಸರೆ ಆಗಿದ್ದ ಯುವಕ ಬೈಕ್ ಅಪಘಾತದಲ್ಲಿ ಸಾವು” “ಬೈಕ್ ಅಪಘಾತದಲ್ಲಿ ಯುವಕ ಸಾವು ” “ನಿಂತಿದ್ದ ವಾಹನಕ್ಕೆ ಬೈಕ್ ಡಿಕ್ಕಿ ಯುವಕ ಸಾವು” ಇಂಥಹ ಅನೇಕ ಸುದ್ದಿಗಳನ್ನು ಪ್ರತಿ ದಿವಸ ಪತ್ರಿಕೆಯಲ್ಲಿ ಓದಿ ಇವತ್ತಿನ ದಿನ ಮಾನದಲ್ಲಿ ಯುವಕರು ಅನವಶ್ಯಕವಾಗಿ ಜೀವ ಕಳೆದು ಕೊಳ್ಳುತ್ತಿದ್ದಾರೆ ಎನ್ನುವ ನೋವು ಸದಾ ಕಾಡುತ್ತಿದೆ…ಎರ್ರಾ ಬಿರ್ರಿಯಾಗಿ ಬೈಕ್ ಚಲಾವಣೆ ಮಾಡಿ ಅನಾಹುತ ಗಳಾಗುತ್ತವೆ ಮತ್ತು ನಿಯಮಗಳನ್ನು ಪಾಲಿಸದೆ ಹೆಲ್ಮೆಟ್ ,ಲೈಸೆನ್ಸ್ ,ಬೈಕ್ ಡಾಕುಮೆಂಟ್ಸ್, ಮಿರರ್, ಇನ್ಸೂರೆನ್ಸ್ , ಇಲ್ಲದೆ ಬೈಕ್ ಓಡಾಡಿಸುವ ಮಕ್ಕಳಿಗೆ ನಾವು ಬುದ್ಧಿ ಕಲಿಸಲು ಸರಿಯಾದ ಸಂದರ್ಭ ಎಂದು ಯೋಚಿಸದೆ ಬುದ್ದಿ ಹೇಳುವುದು ಬಿಟ್ಟು ಅವರ ತಾಳಕ್ಕೆ ತಕ್ಕಂತೆ ಕುಣಿಯಲು ಬಿಡುತ್ತಿರುವುದೇ ಅಪಘಾತ ಅನಾಹುತಕ್ಕೆ ಕಾರಣವಾಗುತ್ತಿದ್ದು ಆಗದಂತೆ ತಡೆಗಟ್ಟಲು ಪೊಲೀಸ್ ಇಲಾಖೆ ಕಠಿಣ ಕ್ರಮ ಜಾರಿಗೆ ತಂದು ಅನುಸರಿಸುವಂತೆ ತಿಳಿಸಿ ಪರಿಶೀಲನೆ ಮಾಡುವ ಸಂದರ್ಭದಲ್ಲಿ ತಮ್ಮ ಮಕ್ಕಳು ಬೈಕ್ ಪೊಲೀಸರು ಹಿಡಿದು ದಂಡ ಕಟ್ಟು ಎಂದು ಹೇಳಿದರೆ ಸ್ವತಃ ತಂದೆ ಹಾಗೂ ಪೋಷಕರು ತಮ್ಮ ಮಗ ಏನು ತಪ್ಪು ಮಾಡಿದ್ದಾನೆ ಎನ್ನುವುದು ವಿಚಾರಿಸದೆ ನೀನು ದಂಡ ಕಟ್ಟಬೇಡ ನಾನು ಫೋನ್ ಮಾಡಿ ಹೇಳುತ್ತೇನೆ ಎನ್ನುವ ಜಂಬ ಕೊಚ್ಚಿ ಕೊಳ್ಳುವ ತಂದೆಯರು ಇದ್ದುದರಿಂದಲೇ ಇಂತಹ ಅನಾಹುತ ಅಪಘಾತಗಳು ಹೆಚ್ಚಾಗುತ್ತಿವೆ ಎನ್ನುವುದು ವರದಿಯಲ್ಲಿ ಸಾಬೀತಾಗುತ್ತದೆ ಬೈಕ್ ರೇಡಿಂಗ್ ಮಾಡುವಾಗ ತಪ್ಪು ಮಾಡಿದವನಿಗೆ ದಂಡ ಕಟ್ಟಿದರೆ ಇನ್ನೊಮ್ಮೆ ಅಂತ ತಪ್ಪು ಮಾಡದೆ ನಿಯಮ ಪಾಲಿಸುತ್ತಾನೆ ಎನ್ನುವ ಉದ್ದೇಶಕ್ಕಾದರೂ ಪೊಲೀಸ್ ಇಲಾಖೆ ದಂಡದ ರೂಪದಲ್ಲಿ ಶಿಕ್ಷೆ ಕೊಟ್ಟರೂ ಅದರಿಂದಾದರೂ ಯುವಕರು ಬುದ್ದಿ ಕಲಿಯುತ್ತಾರೆ ಎಂದು ತಿಳಿಕೋಳ್ಳದ ಪೋಷಕರೇ ಕುಮ್ಮಕ್ಕು ಕೊಡುತ್ತಿರುವುದು ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ.ಯುವಕರೇ ನಿಮ್ಮನ್ನು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಹೆತ್ತವರಿಗೆ ಹೆಗ್ಗಣವೇ ಮುದ್ದು ಎನ್ನುವಂತೆ ಮಗ ಎಷ್ಟೇ ಉಡಾಳವಾಗಿರಲಿ ಕಳ್ಳನಾಗಿರಲಿ ತುಂಟನಾಗಿರಲಿ ಬೇರೆಯವರಿಗೆ ಬೇಸರವಾಗಿ ಎಲ್ಲರಿಗೂ ಬೇಡವಾಗಿದ್ದರು ತಂದೆ ತಾಯಿಗಳು ಮಾತ್ರ ಮಗನನ್ನು ಮುದ್ದಾಗಿಯೇ ಬೆಳೆಸುತ್ತಾರೆ ಹೊರಗಿನವರು ಯಾರು ಏನೇ ಹೇಳಿದರೂ ಯುವಕರ ಮೇಲಿನ ನಂಬಿಕೆ ವಿಶ್ವಾಸದಿಂದ ನಮ್ಮ ಮಗ ಏನು ಮಾಡಲಾರ ಎನ್ನುವ ಅತಿಯಾದ ವಿಶ್ವಾಸ ಭರವಸೆ ಯಿಂದಲೇ ಬದುಕು ಸಾಗಿಸುತ್ತಿರುತ್ತಾರೆ. ಯುವಕರು ಮಾಡ ಬಾರದನ್ನು ಮಾಡಿ ಯಡವಟ್ಟಿನಿಂದಾಗಿ ಅನೇಕರು ತೊಂದರೆ ನೋವು ಅನುಭವಿಸುವಂತ ಪರಿಸ್ಥಿತಿಗಳು ನಿರ್ಮಾಣವಾಗಿವೆ ಮಕ್ಕಳು ಮಾಡಿದ ತಪ್ಪಿಗೆ ನರಕಾಯತನೇ ಅನುಭವಿಸುತ್ತಿರುವ ಸಾಕಷ್ಟು ಪ್ರಕರಣಗಳು ಕಣ್ಮುಂದಿವೆ ಇಷ್ಟಾದಾಗಲೂ ಮಗನ ಮೇಲೆ ಪ್ರೀತಿಗೆ ಮಗನಿಗೆ ಬೈದು ಬುದ್ಧಿ ಹೇಳೋದೆ ಇಂದಲ್ಲ ನಾಳೆ ನಮ್ಮ ಮಗ ಸುಧಾರಿಸಬಹುದು ಎನ್ನುವ ಭರವಸೆಯ ಮೇಲೆ ತಂದೆ ತಾಯಿಗಳು ಸುಮ್ಮನಾಗಿ ಬಿಡುತ್ತಾರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವಂತೆ ಚಿಕ್ಕವನಿದ್ದಾಗಲೇ ಸರಿಯಾಗಿ ಬೆಳೆಸಿದ್ದರೆ ನಮ್ಮ ಮಗ ಹದ್ದು ಮೀರಿ ಈ ಪರಿಸ್ಥಿತಿಗೆ ಬರುತ್ತಿರಲಿಲ್ಲ ಎಂದು ಮಮ್ಮಲ ಮರುಗುತ್ತಾರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು ಎಂಬಂತೆ ಕೆಲವೊಂದು ಸಂದರ್ಭದಲ್ಲಿ ಪೋಷಕರು ತಂದೆ ತಾಯಿಗಳು ಮಾಡುವ ತಪ್ಪಿನಿಂದಾಗಿ ಅವರು ಕೊಡುವ ಸಲುಗೆಯಿಂದ ಯುವಕರು ಎಡವಟ್ಟಾಗಿ ನಡೆದು ಕೊಳ್ಳುವ ಸ್ವಭಾವ ಬೆಳೆಸಿಕೊಂಡು ನಂತರ ತಂದೆ ತಾಯಿಗಳಿಗೆ ಎರವಾಗಿ ನಿಲ್ಲುತ್ತಾರೆ ಅದರಲ್ಲೂ ಇವತ್ತಿನ ದಿನ ಮಾನದಲ್ಲಿ 16 ನೇ ವಯಸ್ಸಿಗೆ ಬಂದ ಯುವಕರು ಕಡ್ಡಾಯವಾಗಿ ಬೈಕು ಬೇಕು ಎನ್ನುವ ಹಠ ಹಿಡಿಯುತ್ತಾರೆ ಮನೆಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಿಂಚಿತ್ತು ಯೋಚಿಸದೇ ನಮಗೆ ಬೈಕ್ ಬೇಕು ಎನ್ನುವ ಹಠದಿಂದಲೇ ಮುಂದೆ ಚಟ್ಟಕ್ಕೆ ಬಿದ್ದ ಚಟ್ಟಕ್ಕೆ ಎರುತ್ತಾರೆ ಅಂತ ಗೊತ್ತಿದ್ದರೂ ತಂದೆ ತಾಯಿಗಳು ಮುಜುಗರ ಒಳಗಾಗಿ ಮಗನ ತಾಳಕ್ಕೆ ತಕ್ಕಂತೆ ಕುಣಿದು ಬೈಕ್ ಕೊಡಿಸುತ್ತಾರೆ ಆದರೆ ಅಪಘಾತವಾಗಿ ಮಗ ತೊಂದರೆಗೆ ಸಿಲುಕಿದಾಗ ಅಯ್ಯೋ ನನ್ನ ಮಗನ ತಾಳಕ್ಕೆ ತಕ್ಕಂತೆ ಕುಣಿಬಾರದಿತ್ತು ಎಂದು ಪಶ್ಚಾತಾಪ ಪಟ್ಟು ನೋವನ್ನು ಅನುಭವಿಸುವುದಕ್ಕಿಂತ ಮುಂಚಿತವಾಗಿ ಇದರ ಬಗ್ಗೆ ಯೋಚನೆ ಮಾಡಿದ್ದರೆ ಅನಾಹುತಗಳು ಆಗುತ್ತಿದಿಲ್ಲ ಎಂದು ಮರುಗುವ ಅದೆಷ್ಟೋ ತಂದೆ-ತಾಯಿಗಳು ಪ್ರಸ್ತುತ ದಿನ ಮಾನದಲ್ಲಿ ಮಕ್ಕಳನ್ನು ನಾವು ಹೇಗೆ ಬೆಳಸುತ್ತಿದ್ದೇವೆ ಮತ್ತು ಸಮಾಜಕ್ಕೆ ಉಪಕಾರಿಯನ್ನಾಗಿ ಬೇಳಸುತ್ತಿದ್ದೇವೆಯೋ, ಇಲ್ಲವೋ ಅಪಕಾರಿಯನ್ನಾಗಿ ಮಾಡುತ್ತಿದ್ದೇವೆಯೋ ಎನ್ನುವ ಯೋಚನೆ ಮಾಡಿ ಮಕ್ಕಳನ್ನು ಯಾವ ರೀತಿ ಬೆಳೆಸಿ ಪೊಷಿಸ ಬೇಕೆನ್ನುವ ಯೋಜನೆ ಮತ್ತು ಯೋಚನೆ ಸರಿಯಾದ ಮಾರ್ಗದಲ್ಲಿ ಹಾಕಿಕೊಂಡು ಮುನ್ನಡೆಸಿದಾಗ ಮಾತ್ರ ಭವಿಷ್ಯದಲ್ಲಿ ನಮ್ಮ ಮಕ್ಕಳು ದಾರಿ ತಪ್ಪದೇ ಸರಿದಾರಿಗೆ ನಡೆಯುತ್ತಾರೆ ಇಲ್ಲದಿದ್ದರೆ ಪೋಷಕರು ತಂದೆ ತಾಯಿಯರು ಸ್ವಲ್ಪ ನಿರ್ಲಕ್ಷ್ಯ ವಹಿಸಿದರು ಸಾಕು ಅನ್ಯ ಮಾರ್ಗ ಹಿಡಿದು ಭವಿಷ್ಯ ಹಾಳು ಮಾಡಿಕೊಂಡು ಜೀವನ ವ್ಯರ್ಥ ಮಾಡಿಕೊಳ್ಳಲು ಮಕ್ಕಳ ಪಾಲಿಗೆ ನಾವೇ ಯಮಧೂತ ರಾದಂತಾಗುತ್ತದೆ ಹಾಗಾಗಿ ಬೈಕ ಮೊಬೈಲ್ ಕೊಡಿಸುವ ಮುನ್ನ ಒಂದು ಬಾರಿ ಯೋಚನೆ ಮಾಡಿ ನನ್ನ ಮಗನಿಗೆ ಬೈಕ್ ಅವಶ್ಯಕತೆ ಇದೆಯೋ ಇಲ್ಲವೋ ಎನ್ನುವುದನ್ನು ಯೋಚಿಸಿ ತಂದೆ ತಾಯಿಗಳು ನಿರ್ಧಾರ ಕೈಗೊಂಡಾಗ ಮಾತ್ರ ಇಂಥಹ ಅಪಘಾತಗಳಿಂದ ನೋವು ನಲಿವು ಸಂಕಟಗಳಿಂದ ದೂರ ಸರಿದು ನೆಮ್ಮದಿಯಿಂದ ಇರಬಹುದು…….ಮನೆಯ ಮೊದಲ ಪಾಠಶಾಲೆ ಎನ್ನುವಂತೆ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಸರಿಯಾದ ಮಾರ್ಗದಲ್ಲಿ ನಡೆಸಿ ಸರಿಯಾಗಿ ಬುದ್ಧಿ ಹೇಳಿ ಬೈಕ್ ಸವಾರಿ ಮಾಡಬೇಕಾದ ಸಂದರ್ಭದಲ್ಲಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಮತ್ತು ಬೈಕ್ ಕ್ರೇಜ್ ಬಗ್ಗೆ ಅಷ್ಟೊಂದು ತಲೆಕೆಡಿಸಿ ಕೊಳ್ಳಬಾರದು ಎನ್ನುವ ಮನೋಭಾವನೆಯನ್ನು ಯುವಕರ ತೆಲೆಯಲ್ಲಿ ಬಿತ್ತಿದಾಗ ಮಾತ್ರ ಆಗುವ ಬೈಕ್ ಅಪಘಾತ ತಡೆಗಟ್ಟಿ ತಂದೆ ತಾಯಿ ಮತ್ತು ಮಕ್ಕಳು ನೆಮ್ಮದಿಯಿಂದ ಬದುಕುಲು ಸಾಧ್ಯವಾಗುವುದು………

ಜಗದೀಶ.ಎಸ್.ಗಿರಡ್ಡಿ

ಇಳಕಲ್.ಲೇಖಕರು.

ಮೋ:-9902470856.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button