ಹಂಪಿಯಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಿಂದ ಪ್ರವಾಸ ಗೋಷ್ಟಿ.
ಹಂಪಿ ಜು.15

ಪ್ರಸಿದ್ಧ ಐತಿಹಾಸಿಕ ಸ್ಥಳ ಹಂಪಿಯಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಿಂದ ಪ್ರವಾಸ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ರು. ಈ ಗೋಷ್ಠಿಯನ್ನು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯನ್ನು ಅಧ್ಯಕ್ಷರಾದ ಎಸ್ ಎಚ್ ಶಫಿಉಲ್ಲ ಉದ್ಘಾಟಿಸಿದರು.ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಂಪಿ ವಿಶ್ವದ ಪ್ರಸಿದ್ಧ ಐತಿಹಾಸಿಕ ಹಾಗೂ ಪ್ರವಾಸಿ ತಾಣ, ಇಂತಹ ವಿಶೇಷ ಸ್ಥಳದಲ್ಲಿ ಪ್ರವಾಸ ಗೋಷ್ಠಿ ಏರ್ಪಡಿಸಿ ಹಲವು ವಿಷಯಗಳನ್ನು ಮಂಡಿಸುವುದರಿಂದ ಕರ್ನಾಟಕದ ಇತಿಹಾಸ ಹಾಗೂ ಸಾಹಿತ್ಯದ ವಿಚಾರವಾಗಿ ಒಂದಷ್ಟು ವಿಷಯಗಳ ಅರಿವುಂಟಾಗಲಿದೆ, ಇಂತಹ ಕೆಲಸಗಳು ಶ್ಲಾಘನೀಯ. ಇಲ್ಲಿ ಪ್ರವಾಸ ಜೊತೆ ಗೋಷ್ಠಿಗಳನ್ನು ಮಾಡುವುದು ವಿರಳ. ಈ ಕಾರ್ಯಕ್ರಮ ದೊಂದಿಗೆ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಇಂತಹ ಗೋಷ್ಠಿಗಳನ್ನು ವಿವಿಧ ಪ್ರವಾಸಿ ತಾಣಗಳ ಮುಂದುವರಿಸಿ ಕೊಂಡು ಹೋಗುವುದು ಅತ್ಯಂತ ಉತ್ತಮ ಎಂದರು.ವೇದಿಕೆಯ ಸಂಸ್ಥಾಪಕರಾದ ಶ್ರೀಮತಿ ದಯಾ ಪೂತ್ತೂರ್ಕರ್ ರವರು ಮಾತನಾಡಿ ಯುವ ಸಾಹಿತಿಗಳು ಬೆಳೆಯಲು ಪ್ರವಾಸ ಮತ್ತು ಗೋಷ್ಠಿಗಳು ಅತ್ಯಗತ್ಯ. “ದೇಶ ಸುತ್ತಿ ನೋಡು ಕೋಶ ಓದಿ ನೋಡು” ಎಂಬಂತೆ ಯುವ ಸಾಹಿತಿಗಳು ಬೆಳೆಯಲು ಪುಸ್ತಕ ಓದುವುದರ ಜೊತೆಗೆ ದೇಶ ಸುತ್ತಬೇಕು ಎಂದು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಗಳಾದ ಶಿವರುದ್ರಪ್ಪ ಪಂಡ್ರಹಳ್ಳಿ ಹಾಗೂ ಜಯದೇವ ಮೂರ್ತಿ ಮಾತನಾಡಿದರು, ತಿಪ್ಪೀರಮ್ಮ ಸಕಲಾಪುರದಹಟ್ಟಿ ಪ್ರಾಸ್ತಾವಿಕ ನುಡಿದರು, ಯುವ ಕವಯಿತ್ರಿ ನಾಗರತ್ನ ಅಮ್ಮನನ್ನು ಕುರಿತು ತಾನು ಬರೆದ ಸ್ವ ರಚಿತ ಕವನವನ್ನು ತಾನೇ ರಾಗ ಸಂಯೋಜಿಸಿ ಹಾಡಿದರು. ಉಪಾಧ್ಯಕ್ಷರಾದ ಶ್ರೀಮತಿ ಶೋಭಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ಪ್ರವಾಸ ಗೋಷ್ಠಿಗಳು ಶಾಲಾ ಪ್ರವಾಸದ ಜೊತೆಗೆ ಈ ರೀತಿಯ ಸಾಹಿತ್ಯದ ಗೋಷ್ಠಿಗಳನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಮ್ಮಿ ಕೊಳ್ಳುವುದರಿಂದ ಮಕ್ಕಳಲ್ಲಿರುವ ಪ್ರತಿಭೆ, ಕಲೆ ಮತ್ತು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕ ವಾಗಿರುತ್ತದೆ ಎಂದು ತಿಳಿಸಿದರು, ಹರ್ತಿ, ತಿಪ್ಪಮ್ಮ, ಸತೀಶ್ ಕುಮಾರ್ ಪ್ರಾರ್ಥಿಸಿದರು, ವಿನಾಯಕ ಸ್ವಾಗತಿಸಿದರು. ನಿರ್ಮಲ ಮಂಜುನಾಥ್ ನಿರೂಪಿಸಿದರು. ರಾಜೇಶ್ವರಿ ಶ್ರೀಧರ್ ಗೋಪಾಲ್ ವೆಂಕಟೇಶ್ ಇದ್ದರು ಎಲ್ಲರೂ ಸಹಕಾರ ದೊಂದಿಗೆ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ:ಕೋಡಿಹಳ್ಳಿ.ಶಿವಮೂರ್ತಿ.ಟಿ.ಚಿತ್ರದುರ್ಗ.