ಸ್ವತಂತ್ರರಾಗೋಣ.

ಭಾರತೀಯರು ನಾವೆಲ್ಲರೂ ಒಂದೆ
ಭಾರತ ಮಾತೆಯ ಮಕ್ಕಳು ಎಂದು
ಮಾತೆಯ ಮಡಿಲ ಮಗುವಾಗೋಣ
ಜಾತಿ ನೀತಿ ಕೀಳುವ ಭೇದವ ಮರೆತ
ನಾನು ನನ್ನದು ನಂದೆನ್ನುವ ಈ ಪ್ರೇತ
ನೀ ಬೀಡುವರೆಗು ನೇಲೆಸೋಲ್ಲ ಪ್ರೀತಿ
ಸಾವಿರ ಬಲಿದಾನಗಳ ಕೂಗು ಕೇಳು
ಸ್ವಾತಂತ್ರ್ಯ ಸುಮ್ಮನೆ ಕೊಟ್ಟಿಲ್ಲ ಕೇಳು
ಬಡಿದಾಡದೆ ನಾವೆಲ್ಲ ಒಂದೆಂದು ಬಾಳು
ನಾವು ಯಾರ ಹಂಗಿಲ್ಲದೆ ಬದುಕೋಣ
ತಂತ್ರಗಾರಿಕೆ ಮರೆತ ಸ್ವತಂತ್ರರಾಗೋಣ
ಬಾಂಧವರೆ ಇಂದಾದರೂ ಜಾಣರಾಗೋಣ
ರಚನೆ : ಎನ್.ಎಸ್. ಹಾಲವಾರ