ಪೊಲೀಸ್ ಠಾಣೆಯಲ್ಲಿ ಕಾನೂನು ಅರಿವು ಪಡೆದು ಕೊಂಡ – ಧರ್ಮಸ್ಥಳದ ಸಂಘದ ಮಹಿಳೆಯರು.
ಕೊಟ್ಟೂರು ಸ.17

ಪೊಲೀಸ್ ಠಾಣೆಯಲ್ಲಿ ಧರ್ಮಸ್ಥಳ ಸಂಘದ ಮಹಿಳೆಯರಿಗೆ ಪಿ.ಎಸ್.ಐ ಗೀತಾಂಜಲಿ ಸಿಂಧೆ ರವರು ಮಾರ್ಗ ದರ್ಶನದ ಮೂಲಕ ಕಾನೂನು ಅರಿವು. ಕಾರಟಗಿ ತಾಲೂಕಿನ ಸಮನ್ವಯ ಅಧಿಕಾರಿ ಶಿಕ್ಷೇತರ ಧರ್ಮಸ್ಥಳ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಕ್ಷೇತ್ರ ಅಧ್ಯಯನದ ಪ್ರವಾಸ ಗೊಂಡ ಮಹಿಳೆಯರಿಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಕಾನೂನು ಅರಿವು ಕೆ. ವಿಷ್ಣುವರ್ಧನ್ ತಿಳಿಸಿದರು. ಮತ್ತು ಸ್ವಾಗತ ಅಧಿಕಾರಿಯಾಗಿ ಜಿ. ಚಂದ್ರಶೇಖರ್ ಕೆಲ ಮಾಹಿತಿ ನೀಡಿ ಭಯಪಡುವ ಅವಶ್ಯಕತೆ ಇಲ್ಲ ಹಾಗೇನೆ ಮಹಿಳೆಯರು ನಿರ್ಭೀತಿ ಇಲ್ಲದೆ ಯಾವುದೇ ವಿಷಯದ ಬಗ್ಗೆ ದೂರನ್ನು ಸಲ್ಲಿಸಬಹುದು ಮತ್ತು ಮನೆಯಲ್ಲಿ ಗಾಡಿ ಇರುವ ಬೈಕ್ ಸವಾರರಿಗೆ ಹೆಲ್ಮೆಟ್ ಬಳಸಿ ಎಂದು ಹೇಳಬೇಕು ಮತ್ತಿತರ ವಿಷಯದ ಬಗ್ಗೆ ತಿಳಿಸಿ ಕೊಟ್ಟರು. ಈ ಸಂದರ್ಭದಲ್ಲಿ ರೇವಣ ಸಿದ್ದಪ್ಪ ಪೊಲೀಸರು ಧರ್ಮಸ್ಥಳದ ಸಂಘದ ಮಹಿಳೆಯರು ಸೇರಿದ್ದರು. ಮತ್ತು ಧರ್ಮಸ್ಥಳ ಸಂಘದ ಸಮನ್ವಯ ಅಧಿಕಾರಿಯಾದ ಮಂಜುಳಾ ಮತ್ತು ಸುನಿತಾರವರು ಪ್ರವಾಸ ಕುರಿತು ಅಗ್ನಿಶಾಮಕ ಠಾಣೆ ಪೊಲೀಸ್ ಠಾಣೆ ನಂತರ ಶ್ರೀ ಕ್ಷೇತ್ರ ಕೊಟ್ಟೂರೇಶ್ವರ ದೇವಸ್ಥಾನದ ದರ್ಶನ ಪಡೆದೆವು ಎಂದು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು