ವಿಜೃಂಭಣೆ ಯಿಂದ ಜರುಗಿದ ಮುತ್ತಗಿ ಗೌರಿ ಶಂಕರ ಶಾಲೆಯ – ವಾರ್ಷಿಕ ಸ್ನೇಹ ಸಮ್ಮೇಳನ.
ಮುತ್ತಗಿ ಫೆ.22

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದ ಶ್ರೀ ಗೌರಿ ಶಂಕರ ವಿದ್ಯಾ ವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಗೌರಿ ಶಂಕರ ಕನ್ನಡ ಕಾನ್ವೆಂಟ್ ಪ್ರಾಥಮಿಕ ಶಾಲೆ ಮುತ್ತಗಿ ಮತ್ತು ಶ್ರೀ ಗೌರಿ ಶಂಕರ ಪ್ರೌಢ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಏಳನೇಯ ಮತ್ತು ಹತ್ತನೇಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಇಂದು ಶಾಲಾ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಆರ್.ಎನ್ ಸೂಳಿಭಾವಿ ಅವರು ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳೇ ಮುಂದಿನ ಭವಿಷ್ಯದ ಆಸ್ತಿ, ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರುಗಿದವು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪಿ.ಎಲ್ ಹಿರೇಮಠ್, ವಿಠ್ಠಲ್ ದೇವಣಗಾಂವಿ ನಿವೃತ್ತ ಉಪನ್ಯಾಸಕರುಗಳು ಹಾಗೂ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಚ್ ಮುಲ್ಲಾ , ಕಾನ್ವೆಂಟ್ ಶಾಲೆಯ ಮುಖ್ಯ ಗುರುಗಳಾದ ಶ್ರೀ ಹೆಚ್.ಎ ಕುಂದರಗಿ, ಗೌರಿ ಶಂಕರ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯ ಗುರು ಮಾತೆಯರು ಯಾದ ಶ್ರೀಮತಿ ಸುನಿತಾ ಯರನಾಳ, ಶ್ರೀ ಗೌರಿ ಶಂಕರ ವಿದ್ಯಾ ಸಂಸ್ಥೆಯ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಮುತ್ತಗಿ ಗ್ರಾಮದ ಗುರು ಹಿರಿಯರು, ಪಾಲಕ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಸಂಸ್ಥೆಯ ಅಧ್ಯಕ್ಷರಿಗೆ ಹಾಗೂ ಶಿಕ್ಷಕ ವೃಂದಕ್ಕೆ ವಿದ್ಯಾರ್ಥಿಗಳ ಪಾಲಕರು ಪ್ರಶಂಸೆಯನ್ನು ವ್ಯಕ್ತಪಡಿಸಿದರು, ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಬಸವರಾಜ್ ಕಳ್ಳಿಗುಡ್ಡದ ನಿರ್ವಹಿಸಿದರು, ಸ್ವಾಗತವನ್ನು ಶ್ರೀ ಎ.ಎಚ್ ಮುಲ್ಲಾ ಗುರುಗಳು ನೆರವೇರಿಸಿದರು ಹಾಗೂ ಮಾಲಾರ್ಪಣೆಯನ್ನು ಶ್ರೀ ಶಿವಯೋಗಿಮಠ ಸರ್ ಮಾಡಿದರು, ಮತ್ತು ವರದಿ ವಾಚನವನ್ನು ಶ್ರೀ ಬಿ.ಎಮ್, ಗೊಳಸಂಗಿ ವಾಚಿಸಿದರು ಹಾಗೂ ಸನ್ಮಾನ ಕಾರ್ಯಕ್ರಮವನ್ನು ಶ್ರೀ ಪಿ.ಬಿ ಪಾಟೀಲ್ ಶಿಕ್ಷಕರು ನಿರ್ವಹಿಸಿದರು. ಶ್ರೀ ಎಂ.ಎಸ್ ಪ್ರಭಾಕರ್ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಸಂಗಪ್ಪ. ಚಲವಾದಿ.ಬಸವನ ಬಾಗೇವಾಡಿ