ಗಂಗಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಎಚ್ ಶಫಿಉಲ್ಲ ಇವರಿಗೆ – ಚಿನ್ಮೂಲಾದ್ರಿ ಸಿರಿ ಶಿಕ್ಷಕ ಪ್ರಶಸ್ತಿಗೆ ಆಯ್ಕೆ.
ಚಿತ್ರದುರ್ಗ ಸ.27

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಇವರಿಂದ ಕೊಡ ಮಾಡುವ “ಚಿನ್ಮೂಲಾದ್ರಿ ಸಿರಿ ಶಿಕ್ಷಕ” ಪ್ರಶಸ್ತಿಗೆ ನಗರದ ಗಂಗಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಎಚ್ ಶಫಿಉಲ್ಲ ಇವರು ಆಯ್ಕೆಯಾಗಿದ್ದಾರೆ. ಹದಿನೆಂಟು ವರ್ಷಗಳ ಬೋಧಕ ವೃತ್ತಿಯ ಅನುಭವದಲ್ಲಿ ಶಿಕ್ಷಣದ ವಿವಿಧ ಹಂತಗಳಲ್ಲಿ ಪ್ರಮಾಣಿಕವಾಗಿ ಹಾಗೂ ಅರ್ಪಣಾ ಮನೋಭಾವ ದಿಂದ ಸೇವೆ ಸಲ್ಲಿಸುತ್ತಿರುವ ಇವರು ಬೋಧನೆಯ ಜೊತೆಗೆ ಸಾಹಿತ್ಯ ಸಂಘಟನೆ ಮತ್ತು ರಂಗ ಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದು ಬಹುಮುಖ ಪ್ರತಿಭೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗಾಗಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮತ್ತು ಈ ವರ್ಷದ ವೇದಿಕೆಯ ಸಾಧಕರು ಎಂಬ ಪ್ರಶಸ್ತಿಯನ್ನು ಇವರ ಸಾಹಿತ್ಯ ಕನ್ನಡ ನಾಡು ನುಡಿ ಸೇವೆಯನ್ನು ಪರಿಗಣಿಸಿ ಶ್ರೀಮತಿ ಸತ್ಯಪ್ರಭ ವಸಂತ್ ಕುಮಾರ್ ರವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಇವರಿಗೆ ಇದೇ ತಿಂಗಳ ದಿನಾಂಕ ೨೯ ರಂದು ಚಿತ್ರದುರ್ಗದಲ್ಲಿ ನಡೆಯುವ ವೇದಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕರಾದ ದಯಾಪುತ್ತೂರ್ಕರ್ ಇವರು ತಿಳಿಸಿರುತ್ತಾರೆ.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ