ಸನಾತನ ಧರ್ಮದ ಜಾಗೃತಿ ಮೂಡಿಸುತ್ತಿರುವ – ಚಳಗೇರಿ ಶ್ರೀಗಳು.
ಇಲಕಲ್ಲ ಸ.27

ಸಮೀಪದ ಚಳಗೇರಿ ಮಠದ ಸನಾತನ ಧರ್ಮ ಅಸ್ತಿತ್ವಕ್ಕಾಗಿ ತಿರುಪತಿ ವೆಂಕಟೇಶ್ವರನ ಪ್ರಸಾದದ ಕುರಿತು ಸನಾತನ ಧರ್ಮದ ಅವಸಾನದತ್ತ ಸಾಗುತ್ತಿದೆ ಎಂದು ಸನಾತನ ಧರ್ಮದ ಅನೇಕ ಧರ್ಮ ಗುರುಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಧರ್ಮ ಜಾಗೃತಿ ಗೊಳಿಸಲು ಚಳಗೇರಿ ಶ್ರೀಮಠದ ಶ್ರೀ ಷ, ಬ್ರ. ವೀರ ಸಂಗಮೇಶ್ವರ ಶಿವಾಚಾರ್ಯ ಶ್ರೀಗಳು ಶ್ರೀಮಠದ ಭಕ್ತರಿರುವ ಇಳಕಲ್ ಮತ್ತು ಕುಷ್ಟಗಿ ತಾಲೂಕಿನ ಹಳ್ಳಿಗಳಲ್ಲಿ ಧರ್ಮ ಜಾಗೃತಿ ಅಭಿಯಾನ ಕೈಗೊಂಡಿದ್ದು ಸನಾತನ ಧರ್ಮ ಎಚ್ಚೆತ್ತು ಕೊಳ್ಳಲು ಇದು ಸಕಾಲವಾಗಿದೆ. ಎನ್ನುವ ದೃಷ್ಟಿಕೋನ ದಿಂದ ಧರ್ಮ ಜಾಗೃತಿ ಅಸ್ತಿತ್ವದ ಉಳಿವಿಗಾಗಿ ಹಾಗೂ ಸನಾತನ ಧರ್ಮದ ಉಳಿವಿಗಾಗಿ ಶ್ರೀ ಮಠ ಕೈಗೊಂಡಿರುವ ಕಾರ್ಯಕ್ಕೆ ನಾಡಿನಾದ್ಯಂತ ಭಕ್ತರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಪ್ರಸ್ತುತ ದಿನಮಾನದಲ್ಲಿ ಸನಾತನ ಧರ್ಮ ಜಾಗೃತಿ ಕಡಿಮೆಯಾಗಿದ್ದು.

ಯಾವ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಮಾಡದ ಕೆಲಸ ಕಾರ್ಯವನ್ನು ಸನಾತನ ಧರ್ಮದ ಉಳಿವಿಗಾಗಿ ಜಾಗೃತಿ ಮೂಡಿಸುತ್ತ ಧರ್ಮದ ಹುಳುವಿನ ಅಭಿಯಾನವ ಆರಂಭಿಸಿ ಸನಾತನ ಧರ್ಮದ ಭಕ್ತರೆಲ್ಲರೂ ಒಂದೆಡೆ ಸೇರಿಸುವ ಕೆಲಸ ಮಾಡುತ್ತಿರುವ ಚಳಗೇರಿ ಶ್ರೀಗಳವರ ಕಾರ್ಯ ನಾಡಿಗೆ ಮಾದರಿಯದದ್ದು ಚಳಗೇರಿ ಶ್ರೀಗಳ ಮಾರ್ಗದಲ್ಲಿಯೇ ನಾಡಿನಾದ್ಯಂತ ಇರುವ ಮಠಗಳ ಮಠಾಧೀಶರು ಜಾಗೃತಿ ಕೈಗೊಂಡರೆ ಪಾಶ್ಚಿಮಾತ್ಯರಿಗೆ ಹಾಗೂ ಧರ್ಮ ವಿರೋಧಿಗಳಿಗೆ ಬಿಸಿ ಮುಟ್ಟಿಸಿ ದಂತಾಗುವುದರ ಜೊತೆಗೆ ನಮ್ಮ ಧರ್ಮವನ್ನು ನಾವು ಹೇಗೆ ನಮ್ಮ ಧರ್ಮದಿಂದ ನಾವೇನು ಕಲಿಯಬೇಕು ಎನ್ನುವುದನ್ನು ಸಮಾಜಕ್ಕೆ ತೋರಿಸಿ ಕೊಡುತ್ತಿರುವ ಚಳಗೇರಿ ಶ್ರೀಗಳವರ ಕಾರ್ಯಕ್ಕೆ ನಾಡಿನಾದ್ಯಂತ ಭಕ್ತರರ ಮೆಚ್ಚುಗೆಗೆ ಪಾತ್ರರಾಗಿ ಎಲ್ಲಾ ಮಠಗಳು ಚಳಗೇರಿ ಶ್ರೀಗಳಂತೆ ಧರ್ಮ ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಧರ್ಮ ಜಾಗೃತಿಗಾಗಿ ಪ್ರತಿ ದಿವಸ ಒಂದೊಂದು ಹಳ್ಳಿಗೆ ತಲೆ ತೆರಳಿ ತಮ್ಮ ಭಕ್ತರಲ್ಲರನ್ನು ಒಂದೆಡೆ ಸೇರಿಸಿ ಧರ್ಮ ಜಾಗೃತಿ ಮೂಡಿಸುತ್ತ ಸನಾತನ ಧರ್ಮದ ಇತಿಹಾಸವನ್ನು ಮತ್ತು ಸನಾತನ ಧರ್ಮದ ಕೆಲಸ ಕಾರ್ಯವನ್ನು ನಾವೆಲ್ಲರೂ ಸೇರಿಕೊಂಡು ಹೇಗೆ ಮಾಡಬೇಕೆನ್ನುವುದನ್ನು ತೋರಿಸಿ ಕೊಟ್ಟು ಮಾದರಿ ಯಾಗುತ್ತಿದ್ದಾರೆ.