ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ – ನೀಡಿದ ಹನುಮಂತರಾಯ ಕುಲಕರ್ಣಿ.
ಮಾನ್ವಿ ಸ.28

ಸರಕಾರಿ ನೌಕರರು ಕಚೇರಿಯಲ್ಲಿ ಕೆಲಸ ಮಾಡುವುದರ ಜೊತೆಗೆ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದಾಗ ಮಾನಸಿಕ ಒತ್ತಡ ನಿವಾರಣೆ ಯಾಗಲಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಾನ್ವಿ ಅಧ್ಯಕ್ಷ ಹನುಮಂತರಾಯ ಕುಲಕರ್ಣಿ ತಿಳಿಸಿದರು.ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ನಾನಾ ಇಲಾಖೆಯ ಸರಕಾರಿ ನೌಕರರು ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಸರಕಾರಿ ನೌಕರರು ಕುಟುಂಬ ಹಾಗು ಕಚೇರಿಯ ಒತ್ತಡದ ನಡುವೆ ಕೆಲಸ ಮಾಡುವಂತ ಪರಿಸ್ಥಿತಿ ಇದ್ದು, ಹೀಗಾಗಿ ನಿತ್ಯ ವ್ಯಾಯಾಮ ಹಾಗು ಆಟಗಳನ್ನು ಆಡಿದಾಗ ಮಾತ್ರ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದರು.ಸರಕಾರಿ ಅಧಿಕಾರಿಗಳು ಕ್ರಿಕೆಟ್ ಹಮ್ಮಿಕೊಂಡಿರುವುದು ಶ್ಲಾಘನೀಯ, ಇದೆ ರೀತಿಯಲ್ಲಿ ಸರಕಾರಿ ನೌಕರರು ಸಹ ಬೇರೆ ಬೇರೆ ರೀತಿಯ ಆಟಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾನಕ್ಕುಕದಿ.ಮಾನ್ವಿ