“ಸನಾತನ ಧರ್ಮ ಸಂಸ್ಕೃತಿ ಜಾಗೃತಿ – ಸ್ವಾಮೀಜಿಯಿಂದ ವಿಶಿಷ್ಟ ಅಭಿಯಾನ”…..

ಭಾರತದ ದೇಶಾದ್ಯಂತ ಸನಾತನ ಹಿಂದೂ ಧರ್ಮ ಅವಸಾನದ ಅಂಚಿಗೆ ಸರಿಯುತ್ತಿದೆ ವಕ್ಛ್ ಬೋರ್ಡ್ ಮಾದರಿಯಲ್ಲಿ ಸನಾತನ ಧರ್ಮದ ಬೋರ್ಡ್ ಸ್ಥಾಪನೆ ಆಗಬೇಕೆನ್ನುವ ಕೂಗು ದೇಶಾದ್ಯಂತ ಪ್ರತಿಧ್ವನಿಸುತ್ತಿದೆ ಸನಾತನ ಧರ್ಮ ಉಳಿಯಬೇಕೆಂದರೆ ಸನಾತನ ಧರ್ಮ ಬೋರ್ಡ ರಚನೆ ಮಾಡಬೇಕೆನ್ನುವುದು ಅನೇಕ ಮಠಾಧೀಶರ ಧರ್ಮ ಗುರುಗಳ ಕೂಗು ದೇಶಾದ್ಯಂತ ಕೇಳಿ ಬರುತ್ತಿದ್ದು ಈ ಮೊದಲು ಆಯಾ ರಾಜ್ಯಗಳಲ್ಲಿ ಆಗಾಗ ಮುನ್ನಲಗೆ ಬರುತ್ತಿದ್ದ ಸನಾತನ ಧರ್ಮದ ಬೋರ್ಡ್ ಬೇಕೆಂಬ ಕೂಗು ಕೇಳಿ ಬರುತ್ತಿತ್ತು .ತಿರುಪತಿ ಶ್ರೀ ವೆಂಕಟೇಶ್ವರ ಪ್ರಸಾದದ ಲಾಡುವಿನಲ್ಲಿ ಧನದ ಮಾಂಸದ ಕೊಬ್ಬನ್ನು ಉಪಯೋಗಿಸುತ್ತಿದ್ದಾರೆ ಎನ್ನುವುದು ಸನಾತನ ಧರ್ಮದ ಎಲ್ಲರೂ ತಲೆತಗ್ಗಿಸುವಂತೆ ಮಾಡಿದೆ ಹೀಗಾದರೆ ಸನಾತನ ಧರ್ಮ ಕಾಯ್ದುಕೊಳ್ಳುವುದು ಮುಂದಿನ ದಿನಮಾನದಲ್ಲಿ ಬಹಳ ಕಷ್ಟವಾಗುತ್ತದೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸನಾತನ ಧರ್ಮಕ್ಕೆ ಭವಿಷ್ಯದಲ್ಲಿ ನೆಲೆ ಇಲ್ಲದಂತೆ ಆಗುತ್ತದೆ ಎನ್ನುವ ಆಲೋಚನೆಯೊಂದಿಗೆ ಅನೇಕ ಮಠಾಧೀಶರು ನಾಗ-ಸಾಧುಗಳು ಸಾಧು-ಸಂತರು ಶರಣರು ಸನಾತನ ಧರ್ಮ ಉಳಿಸಬೇಕು ಎನ್ನುವ ಕೂಗು ದೇಶಾದ್ಯಂತ ಹೆಚ್ಚಾಗುತ್ತಿದ್ದು ಅದರ ಬಗ್ಗೆ ರಾಜಕೀಯ ನಾಯಕರುಗಳು ಎಲ್ಲಿ ತಮ್ಮ ವೋಟ್ ಬ್ಯಾಂಕು ಹೊಡೆದು ಹೋಗುತ್ತದವೆ ಎನ್ನುವ ಭಯದಿಂದ ಯಾರೂ ಚಕಾರ ಎತ್ತುತ್ತಿಲ್ಲ ಆದರೆ ವೈಯಕ್ತಿಕ ಲಾಭಕ್ಕಾಗಿ ಸಾವಿರಾರು ವರ್ಷಗಳ ಪ್ರಾಚೀನ ಕಾಲದ ಇತಿಹಾಸ ಇರುವ ಸನಾತನ ಧರ್ಮ ಅವಸಾನದ ಅಂಚಿಗೆ ತಳ್ಳುತ್ತಿದೆ ಮತ್ತು ದಿಕ್ಕು ತಪ್ಪುತ್ತಿದೆ ಎನ್ನುವುದು ಯಾರು ಚರ್ಚೆ ವಿಚಾರ ಮಾಡಲು ಮುಂದೆ ಬರುತ್ತಿಲ್ಲ ಎನ್ನುವುದೇ ಸನಾತನ ಧರ್ಮದ ದುರ್ದೈವ ಎಂದು ಜನರು ನಂಬಿದ್ದಾರೆ.ಅನೇಕ ಮಠಾಧೀಶರು ಹೇಳುವ ಪ್ರಕಾರ ಸನಾತನ ಧರ್ಮ ಇವತ್ತಿನ ಪ್ರಸ್ತುತ ದಿನಮಾನದಲ್ಲಿ ನಾವು ರಕ್ಷಣೆ ಮಾಡದಿದ್ದರೆ ನಾಳೆ ನಮಗೆ ದೇಶದಲ್ಲಿ ವಾಸಿಸುವ ಕಷ್ಟವಾಗಿ ನಾವು ಅಸ್ತಿತ್ವ ಕಳೆದು ಕೊಳ್ಳಲಿದ್ದೇವೆ.

ಸನಾತನ ಧರ್ಮದ ಜಾಗೃತಿ ಮೂಡಿಸಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಭವಿಷ್ಯದಲ್ಲಿ ನಮ್ಮ ಜನರು ಬದುಕಲು ಸಾಧ್ಯ ಇಲ್ಲದಿದ್ದರೆ ಕಷ್ಟವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಬೆನ್ನಲ್ಲಿಯೇ ದೇಶಾದ್ಯಂತ ಸ್ವಲ್ಪಮಟ್ಟಿಗೆ ಈಗ ಅಲ್ಲಲ್ಲಿ ಸನಾತನ ಧರ್ಮದ ಬಗ್ಗೆ ಪ್ರವಚನ ಜಾಗೃತಿ ಮೂಡುತ್ತಿದ್ದು ಸನಾತನ ಧರ್ಮದ ಬೋರ್ಡ್ ರಚನೆಯಾಗಬೇಕೆನ್ನುವ ಕೂಗು ಬರಿ ಕೂಗಾಗದೆ ಅದಕ್ಕೆ ತಕ್ಕಂತೆ ಹೋರಾಟಗಳಾದಾಗ ಮಾತ್ರ ಸನಾತನ ಧರ್ಮ ಉಳಿಸಲು ಸಾಧ್ಯ ಎಂದು ಅನೇಕ ಸಾಧು-ಸಂತರು ನಾಗ-ಸಾಧುಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಇದರ ಬಗ್ಗೆ ಜನರು ಕೂಡ ಜಾಗೃತ ರಾಗದಿದ್ದರೆ ಭವಿಷ್ಯದಲ್ಲಿ ನಾವು ಮತ್ತು ನಮ್ಮ ಮಕ್ಕಳು ಬದುಕುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ನಮ್ಮ ದೇಶದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಲಿದೆ ಎನ್ನುವುದು ನಾವೆಲ್ಲರೂ ಮನನ ಮಾಡಿಕೊಳ್ಳಬೇಕು.ಇದೆಲ್ಲವನ್ನು ಅರಿತ ಉತ್ತರ ಕರ್ನಾಟಕದ ಕುಷ್ಟಗಿ ತಾಲೂಕಿನ ಚಳಗೇರಿ ಶ್ರೀಮಠದ ಶ್ರೀ ಷಡಕ್ಷರಿ ಬ್ರಹ್ಮ ವೀರ ಸಂಗಮೇಶ್ವರ ಶಿವಾಚಾರ್ಯ ಶ್ರೀಗಳವರು ತಮ್ಮ ಮಠದ ಸುತ್ತಮುತ್ತಲಿರುವ ಇಳಕಲ್ ಕುಷ್ಟಗಿ ಹುನಗುಂದ ಗಜೇಂದ್ರಗಡ ಬದಾಮಿ ರೋಣ ಲಿಂಗಸುರ್ ತಾಲೂಕಿನ ಹಳ್ಳಿಗಳಲ್ಲಿ ಸನಾತನ ಹಿಂದೂ ಧರ್ಮದ ಜಾಗೃತಿ ಗಾಗಿ ಪ್ರತಿ ದಿವಸ ಒಂದೊಂದು ಹಳ್ಳಿ ಆಯ್ಕೆ ಮಾಡಿಕೊಂಡು ಸನಾತನ ಧರ್ಮದ ಜಾಗೃತಿ ಮೂಡಿಸುವುದರ ಜೊತೆಗೆ ಧರ್ಮ ಎಂದರೇನು? ಧರ್ಮದ ಉದ್ದೇಶಗಳೇನು ? ಮತ್ತು ಧರ್ಮದ ಜೊತೆಗೆ ನಾವು ಹೇಗೆ ಬದುಕಬೇಕು ಧರ್ಮ ನಮ್ಮ ಜೀವಮಾನದ ಬದುಕಿನಲ್ಲಿ ಯಾವ ರೀತಿ ಅಳವಡಿಸಿಕೊಳ್ಳಬೇಕು ಮತ್ತು ಅನುಸರಿಸಬೇಕು ಎನ್ನುವುದನ್ನು ಪ್ರತಿ ಭಕ್ತರ ಮನೆ ಮನೆಗೆ ತೆರಳಿ ಪ್ರತಿಯೊಂದು ಹಳ್ಳಿಯಲ್ಲಿ ಸಾವಿರಾರು ಭಕ್ತರನ್ನು ಕೂಡಿಸಿ ಹರಿವು ಮೂಡಿಸುತ್ತ ಅನೇಕ ಜಾಗೃತಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡು ಸನಾತನ ಧರ್ಮದ ಜಾಗೃತಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ.ದೇಶಾದ್ಯಂತ ಸನಾತನ ಧರ್ಮದ ಉಳುವಿನ ಜಾಗೃತಿಗಾಗಿ ಈಗಾಗಲೇ ಅನೇಕ ಬಾರಿ ಸಂಘಟನೆ ಮಾಡಿ ಜಾಗೃತ ಮೂಡಿಸುವ ಪ್ರಯತ್ನ ನಡೆಯುತ್ತಾ ಬಂದರೂ ಜನರು ಅದರ ಬಗ್ಗೆ ಯಾರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ ಜನರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕಾಗಿಯೇ ಸನಾತನ ಧರ್ಮದ ಮೇಲೆ ದಬ್ಬಾಳಿಕೆ ಹೀಯಾಳಿಸುವಿಕೆ ಏಕಮುಖವಾಗಿ ವಿಚಾರ ಮಾಡುವ ಮನಸ್ಥಿತಿಗಳೆಲ್ಲರೂ ಸೇರಿಕೊಂಡು ಹೀನಾಯ ಸ್ಥಿತಿಗೆ ತಳ್ಳುವ ಹಂತಕ್ಕೆ ಬಂದು ತಲುಪಿದೆ ಹೀಗಾಗಿ ಈಗಲಾದರೂ ಜನರು ಎಚ್ಚೆತ್ತುಕೊಂಡು ಸನಾತನ ಧರ್ಮದ ಉಳುವಿಗಾಗಿ ಶ್ರಮ ವಹಿಸದಿದ್ದರೆ ಭವಿಷ್ಯದಲ್ಲಿ ನಮ್ಮ ಮಕ್ಕಳು ತೊಂದರೆ ಅನುಭವಿಸುದಂತು ಕಟ್ಟಿಟ್ಟ ಬುತ್ತಿ ಅಂತ ಮಹೇಶ್ವರಿ ಸಮಾಜದ ಧರ್ಮ ಗುರುಗಳು ಈಗಾಗಲೇ ಇಂದೋರನ್ ಬಹಿರಂಗ ಸಭೆಯಲ್ಲಿ ಹೇಳಿರುತ್ತಾರೆ. ಅನೇಕ ಧರ್ಮ ಗುರುಗಳು ಸನಾತನ ಧರ್ಮದ ಉಳುವಿಗಾಗಿ ನಾವೆಲ್ಲರೂ ಒಂದಾಗೋಣ ಎಂದು ಹೇಳಿದ ನಂತರ ಎಲ್ಲರೂ ಎಚ್ಚೆತ್ತುಗೊಂಡಿದ್ದು ನಾವೆಲ್ಲರೂ ಜಾಗೃತಾಗಬೇಕೆನ್ನುವ ಮನೋಭಾವ ಎಲ್ಲ ಧರ್ಮದ ಗುರುಗಳಲ್ಲಿ ಬಂದಿದ್ದು ಎಲ್ಲರೂ ಒಗ್ಗಟ್ಟಾಗಿ ಸನಾತನ ಧರ್ಮ ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದ್ದು ನಾವು ಜನರನ್ನು ಸನಾತನ ಧರ್ಮದ ತಳಹದಿಗೆ ತಂದು ಧರ್ಮದ ರಕ್ಷಣೆಗಾಗಿ ಅವರನ್ನು ಸಿದ್ಧಪಡಿಸಬೇಕಾದ ಜವಾಬ್ದಾರಿ ಎಲ್ಲಾ ಸಮಾಜದ ಧರ್ಮ ಗುರುಗಳು ಹಾಗೂ ಮಠಾಧೀಶರು ಸಾಧು-ಸಂತರು ಶರಣರು ನಾಗ-ಸಾಧುಗಳ ಮೇಲೆ ಇದೆ ಎನ್ನುವ ಕೂಗು ಕೇಳಿ ಬರುತ್ತಿದ್ದು ಸನಾತನ ಧರ್ಮದ ಜಾಗೃತಿಗಾಗಿ ಜಾಗೃರಾಗಿ ಎಲ್ಲರೂ ಎಚ್ಚೆತ್ತು ಗೊಂಡಂತಾಗಿದೆ.

ತಿರುಪತಿ ಶ್ರೀ ವೆಂಕಟೇಶ್ವರನ ಪ್ರಸಾದ ಲಾಡಿನಲ್ಲಿ ಮೋಸ ಮಾಡಿ ಜನರಿಗೆ ಪ್ರಾಣಿಗಳ ಕೊಬ್ಬಿನ ತುಪ್ಪ ತಿನ್ನಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದಾರೆಂದರೆ ಮುಂದಿನ ದಿನಮಾನದಲ್ಲಿ ಸನಾತನ ಧರ್ಮದ ಸರ್ವನಾಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎನ್ನುವುದು ಈಗಾಗಲೇ ಸಾಬೀತಾಗಿದೆ ಇದರಿಂದಾಗಿಯೇ ಜನರು ಎಚ್ಚೆತ್ತುಕೊಂಡು ಎಲ್ಲಾ ಮಠಾಧೀಶರು ಸಾಧು ಸಂತರು ಸನಾತನ ಧರ್ಮ ಉಳಿವಿಗಾಗಿ ಹೋರಾಟ ಮಾಡಿ ಶ್ರಮಪಟ್ಟರೆ ಮಾತ್ರ ಸನಾತನ ಧರ್ಮ ಮುಂದಿನ ದಿನಮಾನದಲ್ಲಿ ಜೀವಂತವಾಗಿರಲು ಸಾಧ್ಯ ವಾಗುವುದು.ಚಳಗೇರಿ ಶ್ರೀ ಕೈಗೊಂಡಿರುವ ಧರ್ಮ ಜಾಗೃತಿ ಮಾದರಿಯಲ್ಲಿಯೇ ದೇಶಾದ್ಯಂತ ಎಲ್ಲಾ ಸಾಧು ಸಂತರು ಶರಣರು ಮಠಾಧೀಶರು ಜಾಗೃತಿ ಮತ್ತು ಧರ್ಮ ಪ್ರಚಾರ ಕೈಗೊಂಡರೆ ಭಾರತೀಯ ಸನಾತನ ಧರ್ಮ ಜಾಗೃತಿ ಪ್ರತಿಯೊಬ್ಬರಲ್ಲಿ ಮೂಡಿ ಎಲ್ಲರೂ ಎಚ್ಚರಗೊಳ್ಳಲಿದ್ದಾರೆ.ಅನ್ಯ ಧರ್ಮೀಯರು ತಮ್ಮ ತಮ್ಮ ಧರ್ಮಕ್ಕಾಗಿ ಏನು ಬೇಕಾದರೂ ಹೋರಾಟ ಮಾಡಿ ತಮಗೆ ಬೇಕಾದ ಹಕ್ಕನ್ನು ಪಡೆಯುತ್ತಾರೆ. ಆದರೆ ಸನಾತನ ಧರ್ಮದ ಹೋರಾಟಗಳು ಧರ್ಮ ಜಾಗೃತಿ ಪ್ರವಚನ ಮೊಟಕುಗೊಳಿಸುವ ಪ್ರಯತ್ನ ಸದಾ ಕಾಲವು ನಡೆಯುತ್ತಾ ಬಂದಿರುತ್ತವೆ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಲೇ ಬಂದಿದ್ದು ಸನಾತನ ಧರ್ಮದ ಹೀನಾಯ ಸ್ಥಿತಿಗೆ ತಳ್ಳುವ ಕೆಲವು ಮನಸ್ಥಿತಿಗಳು ದೇಶಾದ್ಯಂತ ಇವೆ ಇಂಥವುಗಳನ್ನು ಹತ್ತಿಕ್ಕಲು ದೇಶಾದ್ಯಂತ ಮಠಾಧೀಶರು ಸಾಧು-ಸಂತರು ಶರಣರು ಚಳಗೇರಿಯ ವೀರ ಶ್ರೀ ಸಂಗಮೇಶ್ವರ ಶಿವಾಚಾರ್ಯ ಶ್ರೀಗಳು ಟೊಂಕಕಟ್ಟಿ ನಿಂತಂತೆ ಎಲ್ಲರೂ ನಿಂತಾಗ ಮಾತ್ರ ಸನಾತನ ಧರ್ಮಕ್ಕೆ ಜಯವಾಗಲಿದೆ.ದೇಶವೇ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಚೆ ಎಲ್ಲ ಮಠಾಧೀಶರಿಗೆ ಮಾದರಿಯನ್ನುವಂತೆ ಚಳಗೇರಿ ಶ್ರೀಗಳು ಎಚ್ಚೆತ್ತುಕೊಂಡು ಶ್ರೀಮಠದ ಸುತ್ತಮುತ್ತಲಿರುವ ಹಳ್ಳಿಗಳಲ್ಲಿ ದಿನಂಪ್ರತಿ ಒಂದೊಂದು ಹಳ್ಳಿಗೆ ಹೋಗಿ ಧರ್ಮದ ಜಾಗೃತಿ ಮೂಡಿಸಿ ಭಕ್ತರನ್ನು ದೇಶಭಕ್ತರನ್ನಾಗಿ ಮಾಡುತ್ತಿದ್ದಾರೆ ಮುಂಬರುವ ದಿನಮಾನದಲ್ಲಿ ನಗರ ಪ್ರದೇಶಗಳಲ್ಲಿ ಇಂತಹ ಜಾಗೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಹಾಕಿಕೊಂಡಿದ್ದು ಅದಕ್ಕೆ ಬೆಂಬಲ ಕೋರಿ ಭಕ್ತರಲ್ಲಿ ಮನವಿ ಮಾಡುತ್ತಾ ಧರ್ಮ ಜಾಗೃತಿಯ ಪಣ ತೊಟ್ಟು ನಿಂತಿದ್ದಾರೆ.ಇಡೀ ಅಖಂಡ ಭಾರತದಲ್ಲಿ ಒಬ್ಬರು ಇಬ್ಬರು ಮಠಾಧೀಶರು ಮಾತ್ರ ಒಗ್ಗೂಡಿಸುವ ಕಾರ್ಯ ಕೈಗೊಂಡರೆ ಅಖಂಡ ಭಾರತ ಸನಾತನ ಧರ್ಮ ಒಗ್ಗೂಡಿಸುವುದು ತುಂಬಾ ಕಷ್ಟವಿದೆ ಹಾಗಾಗಿ ಆಯಾಯ ರಾಜ್ಯಗಳ ಮಠಾಧೀಶರು ಸಂತರು ಶರಣರು ಎಚ್ಚೆತ್ತುಕೊಂಡು ಸನಾತನ ಧರ್ಮದ ಉಳಿವಿಗಾಗಿ ಧರ್ಮ ಜಾಗೃತಿ ಅಭಿಯಾನ ಮತ್ತು ಧರ್ಮ ಪ್ರಚಾರಕ ಸಮಿತಿ ರಚಿಸಿ ಸನಾತನ ಧರ್ಮದ ಇತಿಹಾಸ ಉದ್ದೇಶ ಕೆಲಸ ಕಾರ್ಯ ಏನು ಎನ್ನುವುದು ಸನಾತನಿ ಧರ್ಮಕ್ಕೆ ಸಮರ್ಪಣೆ ಮಾಡಿದಾಗ ಮಾತ್ರ ಧರ್ಮ ಜಾಗೃತಿ ಜನರಲ್ಲಿ ಮೂಡಿದಾಗ ಮಾತ್ರ ಪಾಚಿಮಾತ್ಯ ರಾಷ್ಟ್ರಗಳನ್ನು ಬಗ್ಗು ಬಡೆಯಲು ಸಾಧ್ಯವಾಗುತ್ತದೆ ಇಲ್ಲದಿದ್ದರೆ ಅತಿ ಹೆಚ್ಚು ಹಿಂದುಗಳು ಇರುವ ಭಾರತ ದೇಶದಲ್ಲಿಯೂ ಸನಾತನ ಧರ್ಮ ಹೀನಾಯ ಸ್ಥಿತಿ ತಲುಪುತ್ತದೆ ಎನ್ನುವುದು ತಪ್ಪಲ್ಲ ಹಾಗಾಗಿ ಯಾವ ರಾಜಕಾರಣಿಗಳಿಂದಲೂ ಸನಾತನ ಧರ್ಮ ಉಳಿವಿಗಾಗಿ ನಿರೀಕ್ಷಿಸದೆ ಮಠಾಧೀಶರು ಸಾಧು-ಸಂತರು ಶರಣರು ಚಳಗೇರಿಯ ಶ್ರೀಗಳು ಧರ್ಮ ಜಾಗೃತಿಗಾಗಿ ಕೈಗೊಂಡ ಅಭಿಯಾನದ ಮಾದರಿಯನ್ನೇ ಅನುಸರಿಸಿದರೆ ಸನಾತನ ಧರ್ಮ ಜಾಗೃತಗೊಂಡು ಬೇರು ಬಿಟ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗುವುದು ಇಲ್ಲದಿದ್ದರೆ ಸನಾತನ ಧರ್ಮದ ಅವಶೇಷಗಳು ಮುಂದಿನ ದಿನಮಾನದಲ್ಲಿ ಕಾಣಸಿಗುವುದು ಕಷ್ಟ ಸಾಧ್ಯವಾಗಬಹುದು ಹಾಗಾಗಿ ಸನಾತನ ಧರ್ಮದ ಜಾಗೃತಿಗಾಗಿ ಎಲ್ಲರೂ ಒಗ್ಗೂಡಿ ಎಲ್ಲರೂ ಕೈಜೋಡಿಸಿ ನಡೆದಾಗ ಮಾತ್ರ ಸನಾತನ ಧರ್ಮ ಅಖಂಡ ಭಾರತದಲ್ಲಿ ನಾವು ಕಾಣಲು ಸಾಧ್ಯ…ರಂಭಾಪುರಿ ಪೀಠದ ವೀರ ಗಂಗಾಧರ ಜಗದ್ಗುರುಗಳವರ ಮೊದಲನೆಯ ಘೋಷವಾಕ್ಯ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಸಂದೇಶ ಕೊಟ್ಟ ಹಣತೆಯಂತೆ ನಡೆದುಕೊಂಡರೆ ಸನಾತನ ಧರ್ಮಕ್ಕೆ ಶ್ರೀರಕ್ಷೆಯಾಗಲಿದೆ ಎನ್ನುವ ಉದ್ದೇಶದಿಂದಾಗಿ ಪರಮ ತಪಸ್ವಿ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಶ್ರೀಗಳವರ ಪುಣ್ಯ ಸ್ಮರಣೋತ್ಸವದ ಪ್ರಯುಕ್ತ ಹಾಗೂ ಜನರಲ್ಲಿ ಧರ್ಮ ಪ್ರಚಾರ ಮತ್ತು ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಸುಮಾರು 50-60 ದಿನಗಳಿಂದ ಧರ್ಮ ಜಾಗೃತಿ ಅಭಿಯಾನ ಆರಂಭಿಸಿರುವ ಶ್ರೀಗಳು ನಾಡಿನಾದ್ಯಂತ ಪ್ರವಚನ ಮತ್ತು ಜಾಗೃತಿ ಇನ್ನು ಹೆಚ್ಚಿನ ಊರುಗಳಲ್ಲಿ ಮಾಡಬೇಕೆನ್ನುವ ಉದ್ದೇಶ ಹೊಂದಿ ಮಾದರಿಯಾಗಿದ್ದಾರೆ.

ಅಖಂಡ ಭಾರತದ ಕನಸು ಕಾಣುತ್ತಿರುವ ನಾವೆಲ್ಲರೂ ಸನಾತನ ಧರ್ಮ ಜಾಗೃತಿಗಾಗಿ ಮಠಾಧೀಶರು ಸಾಧು-ಸಂತರ ಶರಣರ ಜೊತೆ ಕೈಜೋಡಿಸಿ ಧರ್ಮ ಜಾಗೃತಿ ಮೂಡಿಸಿ ಧರ್ಮ ಪ್ರಚಾರ ಮಾಡಿ ಧರ್ಮದಿಂದ ವಿಶ್ವಕ್ಕೆ ಶಾಂತಿ ಎನ್ನುವ ಸಂದೇಶ ಮುಟ್ಟಿಸಿ ಆಗುವ ಉಪಯೋಗ ಮತ್ತು ಸನಾತನ ಧರ್ಮಕ್ಕೆ ಆಗುವ ಲಾಭಗಳು ಏನೆನ್ನುವುದನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸ ಮಾಡಿದಾಗ ಮಾತ್ರ ಸನಾತನ ಧರ್ಮ ಕಾಪಾಡಿ ಉಳಿಸಿಕೊಳ್ಳಲು ಸಾಧ್ಯವಾಗಬಹುದು. ಕುಷ್ಟಗಿ ತಾಲೂಕಿನ ಚಳಗೇರಿ ಶ್ರೀಗಳು ಕೈಗೊಂಡ ಧರ್ಮ ಜಾಗೃತಿ ಪ್ರವಚನಗಳ ಕಾರ್ಯಕ್ರಮದ ಮಾದರಿಯಲ್ಲಿಯೇ ನಾಡಿನ ಎಲ್ಲ ಮಠಾಧೀಶರು ಸಾಧು ಸಂತರು ಒಮ್ಮತದಿಂದ ಜಾಗೃತಿ ಮೂಡಿಸಿದಾಗ ಮಾತ್ರ ಸನಾತನ ಧರ್ಮ ಕಾಯ್ದುಕೊಂಡು ಉಳಿಸಿ ಮುನ್ನಡೆಸಲು ಸಾಧ್ಯವಾಗುವದು ಎಂದು ಸನಾತನಿ ಧರ್ಮಿಯರ ಆಶಯವಾಗಿದೆ….
•••• ಜಗದೀಶ.ಎಸ್.ಗಿರಡ್ಡಿ.
ಇಳಕಲ್. ಲೇಖಕರು
ಮೋ, ನಂ-9902470856.