ಅಜೀಂ ಪ್ರೇಮ್ ಜಿ ಅವರಿಗೆ ಶಾಲಾ ಆಡಳಿತ ಮಂಡಳಿ ಮತ್ತು ಗಣ್ಯರಿಂದ ಧನ್ಯವಾದ.
ಮಸ್ಕಿ ಸ.29

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಧನಗರವಾಡಿ ಶಾಲೆ ಆವರಣದಲ್ಲಿ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ರವರ ಪ್ರಾಯೋಜಕತ್ವದ ಪೂರಕ ಪೌಷ್ಟಿಕ ಆಹಾರ ಪೂರೈಕೆ ಅಡಿಯಲ್ಲಿ ವಾರದ ನಾಲ್ಕು ದಿನಗಳ ಕಾಲ ಮೊಟ್ಟೆ ಬಾಳೆಹಣ್ಣು ಶೇಂಗಾ ಚಿಕ್ಕಿ ವಿತರಣಾ ಕಾರ್ಯಕ್ರಮವನ್ನು ಡಿಸೆಂಬರ್ 25 ರಂದು ಸರ್ಕಾರ ದೊಂದಿಗೆ ಮೂರು ವರ್ಷಗಳ ಅವಧಿ ರೂ 1,591. ಕೋಟಿ ರೂಪಾಯಿಗಳ ವೆಚ್ಚದ ಒಪ್ಪಂದ ಮಾಡಿ ಕೊಂಡಿದ್ದು, ಈ ಕಾರ್ಯಕ್ರಮದ 2024 -25 ನೇ. ಸಾಲಿನ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳು ಪೂರಕ ಪೌಷ್ಟಿಕ ಆಹಾರವನ್ನು ಉಚಿತವಾಗಿ ವಿತರಿಸುವ ಅವರಿಗೆ ಧನ್ಯವಾದ ತಿಳಿಸುವ ಕಾರ್ಯಕ್ರಮ ಸರಳತೆಯಿಂದ ಜರುಗಿತು. ಪ್ರಧಾನ ಮಂತ್ರಿ ಪೋಷನ್ ಶಕ್ತಿ ನಿರ್ಮಾಣ ಮಧ್ಯಾಹ್ನದ ಉಪಹಾರ ಯೋಜನೆ ಅನ್ವಯ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ರವರ ಪ್ರಾಯೋಜಕತ್ವದ ಪೂರಕ ಪೌಷ್ಟಿಕ ಆಹಾರ ಪೂರೈಕೆ ಅಡಿಯಲ್ಲಿ ವಾರದ ನಾಲ್ಕು ದಿನಗಳ ಕಾಲ ಮೊಟ್ಟೆ ಬಾಳೆಹಣ್ಣು ಶೇಂಗಾ ಚಿಕ್ಕಿ ವಿತರಣಾ ಕಾರ್ಯಕ್ರಮವನ್ನು ಡಿಸೆಂಬರ್ 25 ರಂದು ಸರ್ಕಾರ ದೊಂದಿಗೆ ಮೂರು ವರ್ಷಗಳ ಅವಧಿ ರೂ 1,591. ಕೋಟಿ ರೂಪಾಯಿಗಳ ವೆಚ್ಚದ ಒಪ್ಪಂದ ಮಾಡಿ ಕೊಂಡಿದ್ದು, ಈ ಕಾರ್ಯಕ್ರಮದ 2024 -25 ನೇ. ಸಾಲಿನ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳು ಪೂರಕ ಪೌಷ್ಟಿಕ ಆಹಾರವನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುರಸಭೆಯ ನೂತನ ಅಧ್ಯಕ್ಷರಾದ ಮಲ್ಲಯ್ಯ ಅಂಬಾಡಿ ರವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.

ಮೊಟ್ಟೆ ತಿನ್ನುವಂತಹ ಮಕ್ಕಳಿಗೆ ಮೊಟ್ಟೆ ಹಾಗೂ ಮೊಟ್ಟೆ ತಿನ್ನದೇ ಇರುವಂಥ ಮಕ್ಕಳಿಗೆ ಮೊಟ್ಟೆ ಬದಲಾಗಿ ಬಾಳೆಹಣ್ಣು ವಿತರಣೆ ಮಾಡುವುದ ರೊಂದಿಗೆ ಶಾಲಾ ಮಕ್ಕಳೊಂದಿಗೆ ಶಾಲೆಯಲ್ಲಿ ತಯಾರಿಸಿದ ಬಿಸಿ ಊಟವನ್ನು ಮಕ್ಕಳ ಸಾಲಿನಲ್ಲಿ ಕೂತು ಬಿಸಿಯೂಟ ಸೇವಿಸಿದರು. ಹೌದು ಸರ್ಕಾರಿ ಹಿರಿಯ ಪ್ರಾಥಮಿಕ ಧನಗರವಾಡಿ ಶಾಲೆ ಆವರಣದಲ್ಲಿ ಅಜೀಂ ಪ್ರೇಮ್ ಜಿ ರವರ ಹೆಸರನ್ನು ಶಾಲೆಯ ಆವರಣದಲ್ಲಿ ಬಣ್ಣ ಬಣ್ಣದ ರಂಗೋಲಿಯಲ್ಲಿ ಬರೆದು ಅವರ ಈ ಶಾಲಾ ಮಕ್ಕಳ ಮೇಲಿನ ಪ್ರೀತಿ ಮತ್ತು ಕಾಳಜಿಗೆ ಊರಿನ ಗಣ್ಯರು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ದವರು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಜ್ ಬುಕ್ಕಣ್ಣ,ರವಿ ಡಿ ಚಿಗರಿ, ರಾಮಣ್ಣ ಹರ್ವಾಪುರ ಎಸ್.ಡಿ.ಎಂ.ಸಿ ಅಧ್ಯಕ್ಷರು, ತಿಮ್ಮಣ್ಣ ಗುಡಸಲಿ, ಮಲ್ಲಪ್ಪ ಪೂಜಾರಿ, ರಾರಾಯಪ್ಪ ಭೋತಾರ ಸೇರಿದಂತೆ ಪ್ರಭಾರಿ ಮುಖ್ಯ ಶಿಕ್ಷಕಿ ಶ್ರೀಕಾಂತಮ್ಮ, ಅಥಿತಿ ಶಿಕ್ಷಕರಾದ ಮಲ್ಲಮ್ಮ, ಪವಿತ್ರಾ, ಕಲಾವತಿ, ಶಿವಾನಂದ ಹಾಗೂ ಶಾಲೆಯ ಮುದ್ದು ಮಕ್ಕಳು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಇಲಕಲ್ಲ