ಶಾರದಾ ಪಿ.ಯು ಕಾಲೇಜಿನ ಸ್ನೇಹಾ ಸಿಂಗ್ ಭೂಮಿಕಾ ರಾಜ್ಯ ಮಟ್ಟಕ್ಕೆ ಆಯ್ಕೆ.
ಮಸ್ಕಿ ಸ.29

ಪಟ್ಟಣದ ಸಂಕಲ್ಪ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಂಚಾಲಿತ ಶಾರದಾ ವಿದ್ಯಾ ಮಂದಿರ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಾದ ಕು. ಸ್ನೇಹಾ ಸಿಂಗ್ (ಶೆಟ್ಟಲ್ ಬ್ಯಾಡ್ಮಿಂಟನ್) ಕು. ಭೂಮಿಕಾ ಚೆಸ್ (ಚದುರಂಗ) ಆಟದಲ್ಲಿ ಸಿಂಧನೂರುನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಂದು ಸಂಸ್ಥೆಯ ಪ್ರಾಚಾರ್ಯರಾದ ಮಹೇಶ ತೋಟದ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿದ್ಯಾರ್ಥಿಗಳ ಈ ಅಪೂರ್ವ ಸಾಧನಗೆ ಹರ್ಷ ವ್ಯಕ್ತಪಡಿಸಿರುವ ಸಂಸ್ಥೆಯ ಅಧ್ಯಕ್ಷ ಹನುಮಂತಗೌಡ ಪಾಟೀಲ, ರಾಜಾ ವಾಸುದೇವ ನಾಯಕ, ಕ್ರೀಡಾ ಸಂಯೋಜಕ ವೇಣುಗೋಪಾಲ, ವಿರೇಶ, ಹಾಗೂ ಕಂದಗಲ್ಲದ ಪತ್ರಕರ್ತರಾದ ವೀರೇಶ ಶಿಂಪಿ ಸೇರಿದಂತೆ ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿ, ಶುಭ ಕೋರಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಇಲಕಲ್ಲ