ನಿವೃತ್ತಿಗೊಂಡ ಮಾನಪ್ಪ ಕಂಬಾರ ಅವರಿಗೆ ಉಪ ನೋಂದಣಿ ಅಧಿಕಾರಿಗಳಿಂದ ಪ್ರೀತಿಯ ಸನ್ಮಾನ.
ಹುನಗುಂದ ಅಕ್ಟೋಬರ್.19

ಪಟ್ಟಣದ ಉಪ ನೋಂದಣಿ ಕಾರ್ಯಾಲಯದಲ್ಲಿ ಕಳೆದ ೨೪ ವರ್ಷಗಳಿಂದ ಜವಾನರಾಗಿ ಜನಮುಖಿ ಮತ್ತು ಸಾರ್ಥಕ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ಮಾನಪ್ಪ ಮಲ್ಲಪ್ಪ ಕಂಬಾರ ಅವರಿಗೆ ಉಪ ನೋಂದಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸನ್ಮಾನಿಸಿ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.ಈ ವೇಳೆ ಉಪ ನೋಂದಣಿ ಅಧಿಕಾರಿ ಎಚ್.ಡಿ ನಾಗಠಾಣ ಮಾತನಾಡಿ ಮಾನಪ್ಪ ಕಂಬಾರ ಅವರ ಸೇವಾ ಅವಧಿಯಲ್ಲಿ ಕಚೇರಿಯ ಕೆಲಸದೊಂದಿಗೆ ಕಚೇರಿಗೆ ಬರುವ ಸಾರ್ವಜನಿಕರರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟಕೊಂಡು ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿ ನಿವೃತ್ತಗೊಂಡಿದ್ದು ಅವರ ವಿಶ್ರಾಂತ ಜೀವನ ಸುಖವಾಗಿರಲಿ ಎಂದರು.ಇಳಕಲ್ಲ ಉಪ ನೋಂದಣಿ ಅಧಿಕಾರಿ ಪ್ರವೀಣ ಮ್ಯಾಗೇರಿ ಮಾತನಾಡಿ ಮಾನಪ್ಪ ಕಂಬಾರ ಅವರು 1999 ರಿಂದ ಇಲ್ಲಿವರಗೆ ಹುನಗುಂದ ಉಪ ನೋಂದಣಿ ಇಲಾಖೆಯಲ್ಲಿ ಅತ್ಯಂತ ಪಾರದರ್ಶಕವಾಗಿ ಸೇವೆಯನ್ನು ಸಲ್ಲಿಸಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರ ಅಚ್ಚುಮೆಚ್ಚಿನ ಪ್ರೀತಿ ವ್ಯಕ್ತಿಯಾಗಿದ್ದರು.ಅವರ ನಿವೃತ್ತಿ ನಂತರದ ಜೀವನ ಸದಾ ಆನಂದಮಯವಾಗಿರಲಿ ಎಂದರು.ಈ ಸಂದರ್ಭದಲ್ಲಿ ಉಪ ನೋಂದಣಿ ಪ್ರ.ದ,ಸ ಎಸ್.ಡಿ ಮರಿಸ್ವಾಮಿ,ಸಿಬ್ಬಂದಿಗಳಾದ ರಮೇಶ ಮೀಸೆ,ಶೇಖಣ್ಣ ಬಳಗೋಡದ,ಸಿದ್ದು ಬಿಜಾಪೂರ,ವಿಜಯ ಸೇಬನಕಟ್ಟಿ,ಮುಖಂಡರಾದ ಇಮಾಮ ಗಡೇದ,ಬಸವರಾಜ ಬಣ್ಣಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ