ಮೂರನೇ ಬಾರಿ ಪ್ರಧಾನಿ ಗದ್ದಿಗೇರಿದ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ.
ಎಸ್ ಇಮಡಾಪುರ ಜೂನ್.11

ಕಾನಾ ಹೊಸಹಳ್ಳಿ ಸಮೀಪದ ಎಸ್ ಇಮಡಾಪುರ ಗ್ರಾಮದ ಹೊರವಲಯದಲ್ಲಿ ಇರುವ ಶ್ರೀ ಸಂಗಮೇಶ್ವರ ಬೆಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿರುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿನ ಶ್ರೀ ಸಂಗಮೇಶ್ವರ ಬೆಟ್ಟದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು ದೇಶವನ್ನು ಎರಡು ಅವಧಿಗೆ ಸಮರ್ಥವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ದೇಶದ ಮತದಾರರು ಮೂರನೇ ಅವಧಿಗೂ ಎನ್‍ಡಿಎಗೆ ಬಹುಮತ ನೀಡಿದ್ದಾರೆ. ಈ ಭಾರಿ ದೇಶದ ಅಭಿವೃದ್ಧಿ ಸೇರಿದಂತೆ ಆರ್ಥಿಕ ಸದೃಢತೆಯನ್ನು ಕಾಪಾಡುತ್ತಾ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕನಿಗೆ ದೇಶದಲ್ಲಿ ಅಧಿಕಾರ ಸಿಕ್ಕಿದೆ ಅವರಿಗೆ ಶಕ್ತಿ ತುಂಬುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಬಂಗಾರು ಹನುಮಂತು, ಸೂರ್ಯ ಪಾಪಣ್ಣ, ಹೊಂಬಾಳೆ ರೇವಣ್ಣ, ತಾಲೂಕು ಅಧ್ಯಕ್ಷ ಬಣವಿಕಲ್ಲು ನಾಗರಾಜು, ನಿಕಟ ಪೂರ್ವ ತಾಲೂಕಾ ಅಧ್ಯಕ್ಷ ಚನ್ನಪ್ಪ, ಸಣ್ಣಬಾಲಪ್ಪ, ನಾಗಭೂಷಣ್ಣ, ಶಾರದಾ ಕುಂಬಾರ್, ಹೊಸಹಳ್ಳಿ ಗ್ರಾ.ಪಂ ಉಪಾಧ್ಯಕ್ಷೆ ನೇತ್ರಾವತಿ ಮಂಜುನಾಥ್, ಕಲ್ಲೇಶ ಗೌಡ್ರು, ವಕೀಲರಾದ ಗಿರೀಶ, ಮಾರುತಿ ನಾಯಕ ಸಿ.ಎಸ್ ಪುರ, ಭಾರತ್, ರಾಮ್, ಸೋಲದಹಳ್ಳಿ ಮಾರೇಶ್, ಬಸವರಾಜ್ ಸೇರಿದಂತೆ ಬಿಜೆಪಿಯ ಮುಖಂಡರು, ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.