ಗೆದ್ದಲಗಟ್ಟಿ ಸರ್ಕಾರಿ ಶಾಲೆಯು ರಾಜ್ಯದಲ್ಲಿ ಒಂದು ಮಾದರಿ ಶಾಲೆಗಳಂತಗಬೇಕು – ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರ ಗುರಿಯಾಗಿದೆ.
ಗೆದ್ದಲಗಟ್ಟಿ ಅಕ್ಟೋಬರ್.6

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಗೆದ್ದಲಗಟ್ಟೆ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಒಂದು ಮಾದರಿ ಶಾಲೆಯಾಗಿ ಬೆಳೆಯುತ್ತಿದೆ, ಈ ಗ್ರಾಮದಲ್ಲಿ ಅತಿ ಹೆಚ್ಚು ಹಿಂದುಳಿದ ಹಾಗೂ ಕಡು ಬಡತನದ ಮಕ್ಕಳು ಈ ಶಾಲೆಯಲ್ಲಿ ಓದುತ್ತಿರುವುದರಿಂದ ಶಾಲೆಯ ಎಲ್ಲಾ ಶಿಕ್ಷಕರು ತಮ್ಮ ಕಠಿಣ ಪರಿಶ್ರಮದಿಂದ ಉತ್ತಮ ಗುಣಮಟ್ಟದ ಕಲಿಕೆಯನ್ನು ವೈಜ್ಞಾನಿಕವಾಗಿ ಹಾಗೂ ವೈಚಾರಿಕವಾಗಿ ಮಕ್ಕಳ ತಿಳುವಳಿಕೆ ಮಟ್ಟವನ್ನು ಶಿಕ್ಷಕರು ಅರ್ಥ ಮಾಡಿಕೊಂಡು ಈ ಶಾಲೆಯ ಶಿಕ್ಷಕರು ಮಕ್ಕಳಿಗೆ ಹಂತ ಹಂತವಾಗಿ ವಿದ್ಯಾರ್ಥಿಗಳಿಗೆ ಅವರವರ ಆಸಕ್ತಿಯ ಕಲಿಕೆಯ ಪಠ್ಯಗಳ ವಿಷಯವಾಗಿ ಕಲಿಕೆ ಕಲಿಸುವುದರಲ್ಲಿ ಮುಂದಾಗಿರುವ ಪರಿಣಾಮ ನಮ್ಮ ಶಾಲೆಯ ಮಕ್ಕಳು ಆಟೋಟ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿ ಜಿಲ್ಲಾ ಹಾಗೂ ರಾಜ್ಯ ಮಟ್ಟದವರೆಗೂ ನಮ್ಮ ಶಾಲೆಯ ಹೆಸರು ಬರುವಂತೆ ಮಕ್ಕಳು ತೆಗೆದುಕೊಂಡು ಹೋಗಿ ಪ್ರದರ್ಶನ ನೀಡಿದ್ದಾರೆ.

ಈ ಶಾಲೆಯ ವಿದ್ಯಾರ್ಥಿಗಳು ಕಲಿಕೆಯಲ್ಲು, ವಿವಿಧ ಸ್ಪರ್ಧೆಗಳಲ್ಲಿ,ವಿಜ್ಞಾನದ ಪ್ರಯೋಗದಲ್ಲೂ, ಹೀಗೆ ಅನೇಕ ಬದಲಾವಣೆಯ ಪರಿವರ್ತನೆಯಾಗಿ ವಿದ್ಯಾಭ್ಯಾಸದಲ್ಲೂ ಸಹ ಉತ್ತಮ ಕಲಿಕೆಯೊಂದಿಗೆ ಹಾಗೂ ಗೆದ್ದಲಗಟ್ಟೆ ಸರ್ಕಾರಿ ಶಾಲೆಯನ್ನು ಒಂದು ಮಾದರಿ ಶಾಲೆಯಾಗಿ ಎಲ್ಲಾ ರಂಗದಲ್ಲೂ ಬೆಳೆಸುವುದರಲ್ಲಿ ಮುಂದಾಗಿದ್ದೇವೆ , ಈ ರೀತಿಯಾಗಿ ಬೆಳೆಯಲಿಕ್ಕೆ ಕಾರಣ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರುಗಳು, ಮತ್ತು ಗ್ರಾಮದ ಗ್ರಾ.ಪಂ. ಸದಸ್ಯರು ಎಲ್ಲಾ ಸಾರ್ವಜನಿಕರು ಹಾಗೂ ಮುಖಂಡರುಗಳು ಎಂದು ಈ ಶಾಲೆಯ ಮುಖ್ಯ ಗುರುಗಳು ಜಿ. ಜಗದೀಶ ಇವರು ಈ ಶಾಲೆಯ ಮಕ್ಕಳ ಬಗ್ಗೆ ಬಹಳ ಸಂತೋಷದಿಂದ ಮನದಾಳದ ಮಾತನ್ನು ತಿಳಿಸಿದ್ದಾರೆ.ಹಾಗೆ ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ, ಶಾಲಾ ಮುಖ್ಯ ಗುರುಗಳಾದ ಜಿ ಜಗದೀಶ್, ಪಿ ಎಚ್ ಎಂ ಶೇಖರಯ್ಯ ಕೆ ಎಸ್ ಪಿ ಎಸ್ ಟಿ ಎ, ಪ್ರಧಾನ ಕಾರ್ಯದರ್ಶಿಗಳು, ಹೆಚ್ ಮಂಜಪ್ಪ ಶಿಕ್ಷಕರು, ಎಂ ಅಬ್ದುಲ್ ಆಫೀಸ್, ಡಿ ರಾಜು, ಡಿ ಕೃಷ್ಣ ನಾಯಕ್, ಜಿ ಮಂಜುನಾಥ್, ಹೆಚ್. ದುರ್ಗಪ್ಪ ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ ಕೂಡ್ಲಿಗಿ