ಹಡಲಸಂಗ ತಾಂಡಾದಲ್ಲಿ ಸಂಭ್ರಮದ ನವರಾತ್ರಿ ಉತ್ಸವ.
ಹಡಲಸಂಗ ಅ.09

ಇಂಡಿ ತಾಲೂಕಿನ ಹಡಲಸಂಗ ನಂ 4 ತಾಂಡಾದಲ್ಲಿ ನವರಾತ್ರಿ ಉತ್ಸವ ಜರುಗಿತು. ಸುಹಾಸ ನಾಯಕರವರು ತಮ್ಮ ತಾಯಿಯಾದ ದಿವಂಗತ ಶ್ರೀ ಗಮಲಾತಾಯಿ ಸ್ಮರಣಾರ್ಥ ಪ್ರತಿ ವರ್ಷ ಹಡಲಸಂಗ ತಾಂಡಾದಲ್ಲಿ ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆಯನ್ನು ತಾಂಡಾದ ಹಿರಿಯರು ಹಾಗೂ ಮುಖಂಡರ ಜೊತೆಗೂಡಿ ಆಚರಿಸುತ್ತಾರೆ. ದೇವಿ ಪುರಾಣ ಹಾಗೂ ಭಜನೆ ಕಿರ್ತನೆ ನಡೆಯಿತು. ಧರ್ಮ ಸಭೆಯನ್ನು ಜೆಡಿಎಸ್ ಮುಖಂಡರಾದ ಬ.ಡಿ ಪಾಟೀಲರು ಉದ್ಘಾಟನೆಯನ್ನು ನೇರವೇರಿಸಿ ಮಾತನಾಡುತ್ತಾ ನವರಾತ್ರಿ ಉತ್ಸವ ಶ್ರೀ ಆದಿಶಕ್ತಿಯ ಆರಾಧನೆಯನ್ನು ಭಕ್ತಿ ಭಾವದಿಂದ ಆಚರಿಸುವ ಮುಖಾಂತರ ದುಷ್ಟ ಶಕ್ತಿಗಳ ಸಂಹಾರ ಮಾಡುವ ದೇವಿಯು ನಮ್ಮ ನಾಡಿನ ಬಡವರ, ರೈತರ. ಅಸಹಾಯಕರ ರಕ್ಷಣೆ ಮಾಡಲೇಂದು ಆದಿಶಕ್ತಿಯನ್ನು ಪ್ರಾರ್ಥೀಸಿದರು. ಸಾನಿದ್ಯವನ್ನು ಶ್ರೀ ಸಂತೋಷ ಮಹಾರಾಜ ವಹಿಸಿದರು. ಅತಿಥಿಗಳಾಗಿ ಗೋಪಾಲ ನಾಯಕ, ವಿನೋದ್ ನಾಯಕ, ಸುಹಾಸ ನಾಯಕ, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ. ಹರಿಜನ.ಇಂಡಿ.ವಿಜಯಪುರ