ಎಮ್.ಬಿ ಪಾಟೀಲ ಜನ್ಮ ದಿನದಂದು ಸಾಧಕರಿಗೆ ಸನ್ಮಾನ.

ಸಿಂದಗಿ ಅ. 09

ಅಧಿಕಾರ ಶಾಶ್ವತವಲ್ಲ ನಾವು ಮಾಡುವ ಕೆಲಸಗಳು ಶಾಶ್ವತ ಶ್ರೀಮಂತಿಕೆಯಿದ್ದಾಗ ದಾನ ಮಾಡಬೇಕು ವಯಸ್ಸ ಇದ್ದಾಗ ದುಡಿಬೇಕು ಅಧಿಕಾರ ಇದ್ದಾಗ ಜನ ಸೇವೆ ಮಾಡಬೇಕು ಎಂದು ಶಾಸಕರಾದ ಅಶೋಕ ಮನಗೂಳಿ ಹೇಳಿದರು,ಬೃಹತ್‌ ಕೈಗಾರಿಕಾ ಸಚಿವರು ಹಾಗೂ ಮೂಲಭೂತ ಸೌಕರ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ, ಎಮ್.ಬಿ ಪಾಟೀಲ ಅವರ ಜನ್ಮದಿನದ ಹಿನ್ನೆಲೆಯಲ್ಲಿ ತಾಲ್ಲೂಕಿನ ಗೋಲಗೇರಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವು, ಹತ್ತಿ ಅವರ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿದ್ದ, ಮಾಜಿ ಸೈನಿಕರಿಗೆ, ರೈತರಿಗೆ ಆಶಾ ಕಾರ್ಯಕರ್ತೆಯಾರಿಗೆ ವಿದ್ಯಾರ್ಥಿಗಳಿಗೆ, ನಿವೃತ್ತಿ ಶಿಕ್ಷಕರಿಗೆ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಡಾ, ಎಮ್.ಬಿ ಪಾಟೀಲರು ೩೫ ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದಾಗ ನೀರಾವರಿ ಕ್ರಾಂತಿ ಮಾಡಿ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ನೀರಾವರಿ ಮಾಡಿದ ಮಹಾ ನಾಯಕರು,

ಈ ಸದ್ಯ ಕೈಗಾರಿಕಾ ಕ್ರಾಂತಿ ಮಾಡುತ್ತಿದ್ದಾರೆ ಎಂದರು, ಆಲಮೇಲ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಸಾಧಿಕ್, ಸುಂಬಡ,ಜಿ ಪಿ ಪೋರವಾಲ ಕಲಾ ವಾಣಿಜ್ಯ ಸಿಂದಗಿ, ವಿ.ವಿ ಸಾಲಿಮಠ ವಿಜ್ಞಾನ ಪದವಿ ಪೂರ್ವ ಮಹಾ ವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕರು ಡಾ, ರವಿ ಗೂಲಾ, ಕಾಂಗ್ರೆಸ್ ಮುಖಂಡರು ಶಿವು ಹತ್ತಿ, ಗೋಲ್ಲಾಳಪ್ಪಗೌಡ ಪಾಟೀಲ ನಾಗಾವಿ, ಅವರು ಮಾತನಾಡಿದರು, ಈ ಹುಟ್ಟು ಹಬ್ಬದ, ದಿವ್ಯ ಸಾನಿಧ್ಯ, ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿಯವರು ಗ್ರಾಮದ ವಿರಕುಮಠದ ಸಿದ್ಧಲಿಂಗ ಸ್ವಾಮೀಜಿಯವರು, ಢವಳಾರದ ಧರ್ಮರಾಯ ಒಡೆಯರ ಮುತ್ಯಾರು ವಹಿಸಿದ್ದರು.

ಮುಖಂಡರಾದ ಮಲ್ಲಣ್ಣ ಸಾಲಿ ಗುರಣ್ಣಗೌಡ ಪಾಟೀಲ ನಾಗಾವಿ ಪ್ರಭಗೌಡ ಬಿರಾದಾರ ಹಿರೀ ಅಲ್ಲಾಪುರ, ವಿಜುಗೌಡ, ಬಿರಾದಾರ, ಕರವಿನಾಳ, ರವಿರಾಜ ದೇವರಮನಿ, ಬಸವರಾಜ ಮಾರಲಭಾವಿ, ಬಾಬುಗೌಡ ಬಿರಾದಾರ, ಆರ್.ಬಿ ಬಿರಾದಾರ, ವಿಠ್ಠಲ ಸಿಂದಗಿ, ಶಿವಯೋಗಿಪ್ಪ ಹತರಕ್ಕಿ, ಬಹುಜನ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ, ಜಯಶ್ರೀ ಬ್ಯಾಕೋಡ ಹಾಗೂ ದಲಿತ ಮುಖಂಡರಾದ ಶ್ರೀಶೈಲ ಜಾಲವಾದ,ಹಾಗೂ ಮಡಿವಾಳ ಪ್ಪ ನ್ಯಾಕೋಡಿ, ಬಸನಗೌಡ ಉಳ್ಳೆಸೊರ,ಮಶಾಕಸಾಬ ಚೌಧರಿ,ಹಾಗೂ ಈ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಶಿವು ಹತ್ತಿ ಸಾಹುಕಾರ ಇವರ ನೇತೃತ್ವದಲ್ಲಿ ನಡೆಯಿತು, ಇದೆ ಸಂದರ್ಭದಲ್ಲಿ, ಗ್ರಾಮದ, ಅಂಬಿಗರ ಚೌಡಯ್ಯ ವೃತ್ತದಿಂದ, ದ್ಯಾವಮ್ಮದೇವಿ ಗುಡಿಯ ವರಿಗೆ ಸಿ.ಸಿ ರಸ್ತೆ ನಿರ್ಮಾಣ, ಹಾಗೂ ವೀರೇಶ್ವರ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ ತಾಲ್ಲೂಕಿನ ಶಾಸಕರಾದ ಅಶೋಕ ಮನಗೂಳಿ ಯವರು ನೆರವೇರಿಸಿದರು, ಈ ಸಂದರ್ಭದಲ್ಲಿ ಕಾಮಗಾರಿಗೆ ಸಂಭಂದಪಟ್ಟ ಅಧಿಕಾರಗಳು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button