ಮಾಜಿ ಸೈನಿಕರ ಭವನಕ್ಕೆ 10 ಲಕ್ಷ ಅನುದಾನ ನೀಡುವ ಭರವಸೆ ವ್ಯಕ್ತಪಡಿಸಿದ ಡಾll ವಿಜಯಾನಂದ ಕಾಶಪ್ಪನವರ.
ಹುನಗುಂದ ಜುಲೈ.26

ಕಾರ್ಗಿಲ್ ವಿಜಯೋತ್ಸವ ಭಾರತ ದೇಶಕ್ಕೆ ಹೆಮ್ಮ ದಿನ.ನಮ್ಮ ಹೆಮ್ಮೆಯ ಸೈನಿಕರ ಧೈರ್ಯ ಮತ್ತು ಶೌರ್ಯವನ್ನು ನೆನಪಿಸುವುದರ ಜೊತೆಗೆ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ವೀರ ಸೈನಿಕರನ್ನು ಸ್ಮರಿಸುವ ದಿನವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಬುಧವಾರ ಪಟ್ಟಣದ ಬಸವ ಮಂಟಪದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಮತ್ತು ವೀರ ನಾರಿಯರು ಹಾಗೂ ಹಾಲಿ ಸೈನಿಕರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 24 ನೆಯ ಕಾರ್ಗಿಲ್ ವಿಜಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಗಡಿಯ ವಿಷಯಕ್ಕಾಗಿ ಆಗಾಗ ಕ್ಯಾತಿ ತಗೆಯುತ್ತಿರುವ ಪಾಕಿಸ್ತಾನ ಮತ್ತು ಚೀನಾಕ್ಕೆ ನಮ್ಮ ಯೋಧರು ತಕ್ಕ ಪಾಠ ಕಲಿಸುತ್ತಾ ಬಂದಿದ್ದಾರೆ ಅದರಲ್ಲಿ 1999 ರಲ್ಲಿ ಪಾಕಿಸ್ತಾನ ಭಾರತದ ಮಧ್ಯೆ ಕಾರ್ಗಿಲ್ ಯುದ್ದ ನಡೆದು ಭಾರತೀಯ 527 ಜನ ವೀರ ಸೈನಿಕರು ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿ ದೇಶದ ರಕ್ಷಣೆ ಮಾಡುವ ಮೂಲಕ ದೇಶದ ಜನರಿಗೆ ಜೀವದಾನ ಮಾಡಿದ್ದಾರೆ.
1971 ಮತ್ತು 1999 ರಲ್ಲಿ ದೇಶಕ್ಕೆ ಪಾಕಿಸ್ತಾನದಿಂದ ಗಂಡಾಂತರ ಬಂದೊದಗಿದಾಗ ಅಂದಿನ ಪ್ರಧಾನಮಂತ್ರಿಗಳಾದ ಇಂದಿರಾಗಾಂಧಿ ಮತ್ತು ಅಟಲ ಬಿಹಾರಿ ವಾಜಪೇಯಿ ಅವರು ದೇಶವನ್ನು ರಕ್ಷಣೆಗೆ ದಿಟ್ಟ ನಿರ್ಧಾರವನ್ನು ತಗೆದುಕೊಳ್ಳುವುದನ್ನು ಸ್ಮರಿಸಬೇಕಾಗುತ್ತೆ.ಹುನಗುಂದ ಮಾಜಿ ಸೈನಿಕರ ಭವನಕ್ಕೆ ಶಾಸಕ ಪ್ರದೇಶ ಅಭಿವೃದ್ದಿ ನಿಧಿಯಿಂದ 10 ಲಕ್ಷ ರೂ ಅನುದಾನವನ್ನು ನೀಡುತ್ತೇನೆ ಮತ್ತು ತಾಲೂಕಿನ ಎಲ್ಲ ಸರ್ಕಾರಿ ಕಚೇರಿಯಲ್ಲಿ ಮಾಜಿ ಸೈನಿಕರಿಗೆ ಗೌರವದಿಂದ ಮಾತನಾಡಿಸುವಂತೆ ಅಧಿಕಾರಿಗಳಿಗೆ ಪತ್ರದ ಮೂಲಕ ಸೂಚಿಸುತ್ತೇನೆ ಎಂದರು.ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳು ಮಾತನಾಡಿ ಭಾರತದ ಇತಿಹಾಸದಲ್ಲಿ ಕಾರ್ಗಿಲ್ ವಿಜಯೋತ್ಸವವು ಒಂದು ಐತಿಹಾಸಿಕ ದಾಖಲೆಯಾಗಿದೆ.ಭಾರತೀಯ ಸೈನಿಕರು ಕಾರ್ಗಿಲ್ ಯುದ್ದವನ್ನು ಗೆದ್ದಾಗ ಇಡೀ ಜಗತ್ತಿನ ಬಹುದೊಡ್ಡ ನಾಯಕರು ಹೆಮ್ಮೆಯಿಂದ ಭಾರತೀಯ ಯೋಧರಿಗೆ ಸೆಲ್ಯೂಟ್ ಮಾಡಿದ್ದು ನಿಜಕ್ಕೂ ಸೈನಿಕರ ತ್ಯಾಗ ಬಲಿದಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಸೈನ್ಯದಲ್ಲಿ ನಿತ್ಯ ವಿವಿಧ ತರಹದ ಸವಾಲುಗಳಿದ್ದು ಅವುಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿ ನಮ್ಮ ಸೈನಿಕರಲ್ಲಿದೆ ಅದಕ್ಕಾಗಿ ಸಮಾಜದಲ್ಲಿ ಸೈನಿಕ ಮತ್ತು ರೈತರಿಗೆ ಗೌರವ ನೀಡುವುದ್ದನ್ನು ಮೊದಲು ಕಲಿಯಬೇಕಿದೆ ಎಂದರು.ಈ ಸಂದರ್ಭದಲ್ಲಿ ಬಸವರಾಜ ಸುಣಗಾರ ಅವರು ಬರೆದ ಭಾರತೀಯ ವೀರ ಯೋಧರ ಜೀವನ ಚರಿತ್ರೆಯುಳ್ಳ ವೀರ ಯೋಧ ಯರನಾಳ ಪಾಪಣ್ಣ ಎನ್ನುವ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಬಾಗಲಕೋಟಿ ಸರ್ಕರಿ ಬಾಲಕಿಯರ ಪ.ಪೂ ಕಾಲೇಜು ಶಿಕ್ಷಕ ಅಂದಾನೆಪ್ಪ ಪಲ್ಲೇದ ಉಪನ್ಯಾಸವನ್ನು ನೀಡಿದರು.ಪರಪ್ಪ ಅಗ್ನಿ ಇಡೀ ಕಾರ್ಗಿಲ್ ಯುದ್ದದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಾಲಪ್ಪ ಕಿರಸೂರ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.ಬೆಳಗ್ಗೆ 9 ಗಂಟೆಗೆ ಪಟ್ಟಣದ ತಹಶೀಲ್ದಾರ ಕಚೇರಿಯಿಂದ ಬಸವ ಮಂಟಪದವರಗೆ ತೆರದ ವಾಹನದಲ್ಲಿ 24ನೆಯ ಕಾರ್ಗಿಲ್ ವಿಜಯೋತ್ಸವ ಮತ್ತು ಹುತಾತ್ಮ ಯೋಧರ ಪೋಟೋ ಮತ್ತು ರಾಷ್ಟ್ರ ಧ್ವಜವನ್ನು ಮಾಜಿ ಸೈನಿಕರು,ಮಕ್ಕಳು ಹಿಡಿದು ಮೆರವಣೆಗೆ ಮಾಡುವ ಮೂಲಕ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದರು.ವೇದಿಕೆಯಲ್ಲಿ ಬ್ರಹ್ಮಾಂಡ ವಿಜಯ ಮಹಾಂತ ಶ್ರೀಗಳು,ತಾ.ಪಂ ಇ. ಓ. ಸಂಜೀವ ಜಿನ್ನೂರ,ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟೇಶ ಕೊಂಕಲ್,ರೈತ ಬಸನಗೌಡ ಪೈಲ್,ರಾಘವೇಂದ್ರ ಓಬಳಪ್ಪನವರ,ಶಿವಪ್ಪ ಯಡಹಳ್ಳಿ,ವಿಜಯ ದಳವಾಯಿ,ಮಾಜಿ ಸೈನಿಕರಾದ ನದಾಫ್,ಮಲ್ಲಪ್ಪ ಸಿರಬಡಗಿ,ಯಮನಪ್ಪ ವಾಲೀಕಾರ ಸೇರಿದಂತೆ ಅನೇಕರು ಇದ್ದರು.ಮಾಜಿ ಸೈನಿಕ ಸಂಗನಬಸಪ್ಪ ಹುಲ್ಯಾಳ ಸ್ವಾಗತಿಸಿದರು,ಶಿಕ್ಷಕಿ ಗೀತಾ ತಾರಿವಾಳ ನಿರೂಪಿಸಿದರು.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ