ಪೋಲಿಸ್ ಠಾಣೆಯಲ್ಲಿ ವಿಜಯದಶಮಿ ಪ್ರಯುಕ್ತ ಆಯುಧ ಪೂಜೆ ನೆರವೇರಿಸಿ – ಪಟ್ಟಣದಾದ್ಯಂತ ಮೆರವಣಿಗೆ ಕೈ ಗೊಂಡರು.
ಮಾನ್ವಿ ಅ.11

ಪೊಲೀಸ್ ಇಲಾಖೆ ಎಂದರೆ ಸಾಕು ಒತ್ತಡದ ಜೀವನ. ಆದರೆ ಮಾನ್ವಿ ಪೊಲೀಸ್ ಇಲಾಖೆ ಸಿಬ್ಬಂದಿಯವರು ವಿಜಯದಶಮಿ ಹಬ್ಬದ ನಿಮಿತ್ತ ಆಯುಧಗಳನ್ನು ಪೂಜೆ ಮಾಡಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆ ನಡೆಸಿದರು.

ಮಾನ್ವಿ ಪೊಲೀಸ್ ಸಿಬ್ಬಂದಿ ಖಾಕಿ ತೊಡುವರು, ಆದರೆ ಆಯುಧ ಪೂಜೆಯ ನಿಮಿತ್ತ ಒಂದೇ ಕಲರ್ ಹೊಂದಿದ ಉಡುಪಿನಲ್ಲಿ ಮಿಂಚಿ ಸಿಬ್ಬಂದಿಗಳೆಲ್ಲರು ಬೈಕ್ ಗಳಲ್ಲಿ ಖುಷಿ ಹಂಚಿ ಕೊಳ್ಳುತ್ತ ಮೆರವಣಿಗೆ ಮಾಡುತ್ತಿರುವುದು ನೋಡಿದರೆ ಒಂದು ರೀತಿಯಲ್ಲಿ ಮೆರಗು ತಂದು ಕೊಟ್ಟಂತಾಗಿತ್ತು.

ಮಾನ್ವಿ ಪಿ.ಎಸ್.ಐ ವೀರಭದ್ರಯ್ಯ ಹಿರೇಮಠ ಅವರ ವಿನೂತನ ಪ್ರಯೋಗದಿಂದ ಸಿಬ್ಬಂದಿಗಳೆಲ್ಲರು ಉಡುಗೆ ತೊಟ್ಟು ಮಿಂಚಲು ಕಾರಣ ಎಂದು ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್. ಭಾಷಾ.ನಕ್ಕುಂದಿ.ಮಾನ್ವಿ.