ಹಂಗಳ ಗ್ರಾಮದ ಮಣಿಕಂಠ ಅವರಿಗೆ ಹಂಪಿ ವಿಶ್ವವಿದ್ಯಾಲಯ ದಿಂದ – ಪಿ.ಎಚ್.ಡಿ ಪದವಿ ಘೋಷಣೆ.
ಹೊಸಪೇಟೆ ನ.10

(ವಿಜಯನಗರ ಜಿಲ್ಲೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯ) ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದ ದಿ. ಕುಳ್ಳಯ್ಯ ಮತ್ತು ಗಂಗಮ್ಮ ಉರ್ಫ್ ಕೊಂತಮ್ಮ ಬಡ ದಂಪತಿಗಳ ಮಗನಾದ ಮಣಿಕಂಠ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್. ಡಿ.(ಡಾಕ್ಟರೇಟ್) ಪದವಿ ಘೋಷಿಸಿದೆ. ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎನ್.ಚಿನ್ನಸ್ವಾಮಿ ಸೋಸಲೆ ಅವರ ಮಾರ್ಗದರ್ಶನದಲ್ಲಿ ‘ಚಾಮರಾಜನಗರ ಜಿಲ್ಲೆಯ ತಳ ಸಮುದಾಯಗಳು:- ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಸ್ಥಿತ್ಯಂತರಗಳ ಅಧ್ಯಯನ(ಕ್ರಿ.ಶ.1799 ರಿಂದ ಸಮಕಾಲೀನದ ವರೆಗೆ)’ ಎಂಬ ಮಹಾ ಪ್ರಬಂಧವನ್ನು ಮಂಡಿಸಿದ್ದರು.

ಮಣಿಕಂಠ ಅವರಿಗೆ ಪಿ.ಎಚ್.ಡಿ ಪದವಿಯನ್ನು ಮಾನ್ಯ ಕುಲಪತಿಗಳಾದ ಡಾ, ಡಿ.ವಿ ಪರಮಶಿವಮೂರ್ತಿ ಅವರು ಘೋಷಿಸಿದ್ದಾರೆ. ಮುಂದಿನ ನುಡಿ ಹಬ್ಬದಲ್ಲಿ ಪಿಎಚ್.ಡಿ ಪದವಿ ಪ್ರಧಾನ ಮಾನ್ಯ ರಾಜ್ಯಪಾಲರು ಮಾಡಲಿದ್ದಾರೆ ಎಂದು ಮಾನ್ಯ ಕುಲ ಸಚಿವರಾದ ಡಾ, ವಿಜಯ್ ಪೂಣಚ್ಚ ತಂಬಂಡ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ