ಸಿದ್ದಾಪುರ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ.
ಖಾನಹೊಸಹಳ್ಳಿ ಆಗಷ್ಟ.16

ಸಮೀಪದ ಗುಂಡು ಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿದ್ದಾಪುರ ಗ್ರಾಮದ ಸ. ಹಿ.ಪ್ರಾ ಶಾಲೆಯಲ್ಲಿ 77ನನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ ನೂತನ ಅಧ್ಯಕ್ಷ ಡಿ.ಎಂ ವಾಗೀ ರವರು ನೆರವೇರಿಸಿದರು ಮುಖ್ಯ ಗುರುಗಳಾದ ಹೆಚ್.ಎಂ ಬಸವರಾಜ್ ರವರು ಸ್ವಾತಂತ್ರ ದಿನಾಚರಣೆಯ ಕುರಿತು ಮಾತನಾಡಿ 1947 ಆಗಸ್ಟ್ 15ರಂದು ನಮಗೆ ಸ್ವಾತಂತ್ರ್ಯ ಲಭಿಸಿತು ಈ ದಿನವನ್ನು ನಮ್ಮ ದೇಶಾದ್ಯಂತ ಎಲ್ಲಾ ಹಬ್ಬಕ್ಕಿಂತ ದೊಡ್ಡ ಹಬ್ಬವನ್ನಾಗಿ ಸ್ವಾತಂತ್ರ್ಯ ದಿನಾಚರಣೆ ಹಬ್ಬವನ್ನು ಆಚರಿಸುತ್ತೇವೆ . ಪರಕೀರ ಆಳ್ವಿಕೆಯಿಂದ ನಮಗೆ ಸ್ವಾತಂತ್ರ್ಯವು ತ್ಯಾಗ ಬಲಿದಾನದ ಮೂಲಕ ಲಭಿಸಿತು. ಸ್ವಾತಂತ್ರ್ಯಕ್ಕಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿ. ಜವಾಹರ್ ಲಾಲ್ ನೆಹರು. ಸುಭಾಷ್ ಚಂದ್ರ ಬೋಸ್. ಇನ್ನೂ ಕಿತ್ತೂರು ರಾಣಿ ಚೆನ್ನಮ್ಮ. ಜಾನ್ಸಿ ರಾಣಿ ಲಕ್ಷ್ಮೀಬಾಯಿ. ಸರೋಜಿ ನಾಯ್ಡು ಇಮ್ಮು ಮುಂತಾದ ನಾಯಕರುಗಳು ಸ್ವಾತಂತ್ರಕ್ಕಾಗಿ ಹೋರಾಡಿ ಬ್ರಿಟಿಷರನ್ನು ನಮ್ಮ ದೇಶದಿಂದ ಓಡಿಸಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಇನ್ನೂ ಅನೇಕ ದೇಶಭಕ್ತರು ದೇಶಾಭಿಮಾನಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂದು ಈ ಸಂದರ್ಭದಲ್ಲಿ ಮಕ್ಕಳಿಗೆ ಹೇಳಿದರು. ಶಾಲೆ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ ಮಾಡಿದರು. ಈ ಕಾರ್ಯಕ್ರಮ ಕುರಿತು ಸಹ ಶಿಕ್ಷಕರುಗಳು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷ ಮಮತಮ್ಮ ಲಿಂಗರಾಜು,ಗ್ರಾಮ ಪಂಚಾಯತಿ ಸದಸ್ಯರಾದ ಡಿ ಎಂ ಜೀವ ಪ್ರಕಾಶ್. ಮಾಜಿ ಉಪಾಧ್ಯಕ್ಷ ರವಿಕುಮಾರ್. ಮುಖಂಡರಾದ ಜೆ. ಎಸ್ ಶಿವಪ್ರಸಾದ್.ಹನುಮಂತಪ್ಪ. ಬಸವರಾಜ. ಶ್ರೀನಿವಾಸ್. ಲೋಕೇಶಪ್ಪ. ಸಿದ್ದ ಬಸಪ್ಪ. ಸಿದ್ದಲಿಂಗಪ್ಪ. ಶಾಲೆಯ ಶಿಕ್ಷಕರು. ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು. ಶಾಲೆಯ ಎಸ್ ಡಿ ಎಂ ಸಿ ಸದಸ್ಯರು ಮಕ್ಕಳ ಪೋಷಕರು ಸಾರ್ವಜನಿಕರು ಇತರರು ಇದ್ದರು. ಕಾರ್ಯಕ್ರಮದಕ್ಕಿಂತ ಮುಂಚಿತವಾಗಿ ಶಾಲೆಯ ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇಶಕ್ಕಾಗಿ ಹೋರಾಡಿದ ದೇಶಭಕ್ತರ ವಿವಿಧ ವೇಷ ಭೂಷಣಗಳನ್ನು ಧರಿಸಿ. ತಮ್ಮ ಶಾಲೆಯ ಶಿಕ್ಷಕರೊಂದಿಗೆ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಗ್ರಾಮದಲ್ಲಿ ಸಂಚರಿಸಿ ಶಾಲೆಯ ಆವರಣಕ್ಕೆ ಬಂದರು ನಂತರ. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ