ಸಿಂಗಾರ ಗೊಂಡ ಕುದುರೆ ಯಾತ್ರೆ, ಹೂಡೇಂ ಗ್ರಾಮದಿಂದ – ಬಾಂಧವ್ಯದ ಬೆಸುಗೆ.
ಹೂಡೇಂ ಫೆ.09

ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದಿಂದ ತೆರಳುವ ಕುದುರೆಯನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮಸ್ಥರು ಪ್ರತಿ ವರ್ಷ ಶೂನ್ಯ ಮಾಸದ ಕೊನೆ ಅಮಾವಾಸ್ಯೆ ನಂತರ ಬರುವ ಶುಕ್ರವಾರ ದಂದು ಈ ಜಾತ್ರೆ ನಡೆಯುತ್ತದೆ. ಫೆ.7 ರಿಂದ 9 ರ ವರೆಗೆ ನಡೆಯುತ್ತದೆ. ಮ್ಯಾಸ ಮಂಡಲ ಸಂಸ್ಕೃತಿಯ ಹಿನ್ನೆಲೆಯಲ್ಲಿ ಸಂಪ್ರದಾಯ ಬದ್ಧವಾಗಿ ಸ್ವಾಗತಿಸುವ ಮೂಲಕ ಹೂಡೇಂ ಗ್ರಾಮದಿಂದ ಸಿಂಗಾರ ಗೊಂಡ ಇನ್ನೂ ಕುದುರೆಗೆ ಅಲಂಕಾರ ಮಾಡಿಕೊಂಡು ಚಿಕ್ಕುಂತಿ ಗ್ರಾಮಕ್ಕೆ ತೆರಳುತ್ತಾರೆ. ನಂತರ ಕಂಪಳ ರಂಗಸ್ವಾಮಿ, ಸೂರ್ಯ ಪಾಪನಾಯಕ ಸ್ವಾಮಿ ಹಾಗೂ ಜೋಗೇಶ್ವರ ಪೆಟ್ಟಿಗೆ ದೇವರ ಮೂರ್ತಿಗಳನ್ನು ದೇವಸ್ಥಾನದಿಂದ ಹೊರತಂದು ತಾತ್ಕಾಲಿಕ ಪದಿಗಳಲ್ಲಿ ಪ್ರತಿಷ್ಠಾಪಿಸಿ ಜಾತ್ರೆಗೆ ಚಾಲನೆ ನೀಡಲಾಗಿತ್ತು.ಸಿಂಗಾರ ಗೊಂಡ ಕುದುರೆ ಹೆಣ್ಣು ಕುದುರೆಯನ್ನು ಸಾಕ್ಷತ್ ಲಕ್ಷ್ಮಿಯಂತೆ ಪ್ರತಿ ರೂಪವೆಂದು ಭಾವಿಸಿರುವ ಮ್ಯಾಸ ಮಂಡಲದ ಜನತೆ, ಈ ವಿಶೇಷ ದಿನಗಳ ಜಾತ್ರೆಯಲ್ಲಿ ಹಣೆಗೆ ಕಾಸಗಲ ಕುಂಕಮ, ಕಿವಿಗೆ ಬಂಗಾರದ ಓಲೆ, ಕಾಲಿಗೆ ಗೆಜ್ಜೆ ಕಟ್ಟುವುದರ ಮೂಲಕ ಕುದುರೆಯನ್ನು ಅಲಂಕರಿಸ ಲಾಗುತ್ತದೆ. ಹೀಗೆ, ಶೃಂಗಾರ ಗೊಂಡ ಕುದುರೆಯನ್ನು ಜಾತಿ, ಮತ, ಪಂಥ, ಭೇದಗಳಿಲ್ಲದೆ, ಭಕ್ತಿ, ಭಾವಗಳೊಡನೆ ಪೂಜಿಸಲಾಗುತ್ತದೆ. ಹೂಡೇಂ ಗ್ರಾಮದ ಈಶ್ವರಗೌಡ್ರು ಮನೆಯಿಂದ ಶೃಂಗರಿಸಿದ ಕುದುರೆಯನ್ನು ಮೆರವಣಿಗೆಯ ಮೂಲಕ ನೆರೆಯ ಚಿಕ್ಕುಂತಿ ಗ್ರಾಮಕ್ಕೆ ಕರೆದೊಯ್ಯುವ ಸಂಪ್ರದಾಯಕ್ಕೆ ಶುಕ್ರವಾರ ಅದ್ಧೂರಿಯಾಗಿ ನೆರವೇರಿಸುವ ಮೂಲಕ ವಿಶೇಷ ಮ್ಯಾಸ ಮಂಡಲ ಜಾತ್ರೆಗೆ ನಾಂದಿ ಹಾಡಲಾಯಿತು. ಮುಗಿಲು ಮುಟ್ಟಿದ ಹರ್ಷ: ಲಕ್ಷ್ಮಿಯ ಕಳೆಯನ್ನು ಹೊತ್ತು ಬಂದ ಹೆಣ್ಣು ಕುದುರೆಯನ್ನು ಚಿಕ್ಕುಂತಿ ಗ್ರಾಮಸ್ಥರು ಸಂಪ್ರದಾಯ ಬದ್ಧವಾಗಿ ಅದ್ಧೂರಿಯಾಗಿ ಸ್ವಾಗತಿಸಿದರು. ಹಟ್ಟಿಗಳಲ್ಲಿ ಪ್ರತಿ ಷ್ಠಾಪಿಸಿರುವ ಕಂಪಳ ರಂಗಸ್ವಾಮಿ, ಜಗಳೂರು ಪಾಪನಾಯಕ, ಗಾದ್ರಿ ಪಾಲನಾಯಕ ಹಾಗೂ ಜೋಗೇಶ್ವರ ಪೆಟ್ಟಿಗೆ ದೇವರಿಗೆ ಕುದುರೆ ದರ್ಶನ ಮಾಡಿಸುವುದು ವಾಡಿಕೆ. ಇಲ್ಲಿಂದ ಅದ್ಧೂರಿ ಜಾತ್ರೆಗೆ ಚಾಲನೆ ಗೊಂಡು ನಿರಂತರ ಮೂರು ದಿನಗಳ ಕಾಲ ನಡೆಯುತ್ತದೆ. ಪೆಟ್ಟಿಗೆ ದೇವರನ್ನು ಪ್ರತಿ ಷ್ಠಾಪಿಸಿರುವ ಪದಿಗಳ (ಹಟ್ಟಿಗಳ) ಸುತ್ತಲೂ ಕಿಲಾರಿಗಳು ದೇವರ ಎತ್ತುಗಳನ್ನು ಮೂರು ಸುತ್ತ ಓಡಿಸುತ್ತಾರೆ. ಈ ಎರಡು ದಿನಗಳ ಕಾಲ ಪೂಜಾರಿಗಳು, ದಾಸರಯ್ಯಗಳಿಂದ ಪೂಜೆ, ಮಣೇವು ಸೇರಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗುತ್ತವೆ. ಮಾಂಸ ಆಹಾರವೆಂದರೇ, ಪಂಚ ಪ್ರಾಣವಾದ ಮ್ಯಾಸರಿಗೆ ಈ ಜಾತ್ರೆಯಲ್ಲಿ ಮಾತ್ರ ಸಂಪೂರ್ಣ ನಿಷಿದ್ದವಾಗಿರುವುದು ಅತ್ಯಂತ ವಿಶೇಷವಾಗಿದೆ. ಬುಡಕಟ್ಟು ಆಚರಣೆಯ ಶ್ರೀ ಕಂಪಳ ರಂಗಸ್ವಾಮಿ ಜಾತ್ರೋತ್ಸವ ಪ್ರಾಣಿಗಳನ್ನು ಆರಾಧಿಸುವ, ಪಶುಪಾಲನಾ ಸಂಸ್ಕೃತಿಯ ಹಿನ್ನೆಲೆ ಯಾಗಿರುವುದರಿಂದ ಮಾಂಸ ತ್ಯೆಜಿಸಿರುವುದು ಕಂಡುಬರುತ್ತದೆ. ಜಿಲ್ಲೆಗಳ ನಂಟು: ಚಿನ್ನಹಗರಿ ದಂಡೆಯಲ್ಲಿರುವ ಗಡಿ ಗ್ರಾಮ ಹೂಡೇಂ ಕುದುರೆ ತೆರಳಿದರೆ ಮಾತ್ರ ಚಿಕ್ಕುಂತಿಯಲ್ಲಿ ಮ್ಯಾಸ ಮಂಡಲ ಸಂಸ್ಕೃತಿಯ ಶ್ರೀ ಕಂಪಳ ರಂಗಸ್ವಾಮಿ ಜಾತ್ರಾ ಮಹೋತ್ಸವ ವಾಗುವುದು ಇಲ್ಲಿ ಕಾಣಬಹುದಾಗಿದೆ. ಪ್ರತಿ ವರ್ಷ ಹೂಡೇಂ ಗಾಮದ ಗೌಡರ ಮನೆಯಿಂದ ಶೃಂಗಾರ ಗೊಂಡ ಹೆಣ್ಣು ಕುದುರೆಯೊಂದು ಮೆರವಣಿಗೆಯ ಮೂಲಕ ಕರೆದೊಯ್ಯುವ ಪದ್ಧತಿ ಅನುಚಾನವಾಗಿ ನಡೆದು ಬಂದಿದೆ. ತಾಯಕನಹಳ್ಳಿ, ಚಿಕ್ಕೋಬನಹಳ್ಳಿ ಗ್ರಾಮಸ್ಥರು ನೆರದಿರುತ್ತಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ