ಪ್ರಶಸ್ತಿ ನಡಿಗೆ ಸಾಧಕರ ಕಡೆ ಅಭಿಯಾನದಡಿ ಇಂದು ಸದಾಶಿವ ಶೆಟ್ಟಿ ಅವರಿಗೆ ಸಮಾಜ ಸೇವಾ ರತ್ನಾ.ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಮಡಗಾಂವ ಏ.18
ಇಂದು ಮಡಗಾಂವ ನ ಲಕ್ಷ್ಮೀ ಎಂಪಾಯರ್l ಹೋಟೆಲ್ ಮಾಲೀಕರಾದ ಶ್ರೀ ಸದಾಶಿವ ಹಿರಿಯಣ್ಣ ಶಟ್ಟಿ ಅವರಿಗೆ ಇಂಡಿಯನ್ ಜರ್ನಲಿಸ್ಟ ಯುನಿಯನ್ ದೆಹಲಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಮತ್ತು ಬಿಬಿ ನ್ಯೂಜ್ ವೆಬ್ ಚಾನಲ್ ಬೆಂಗಳೂರು ಇವರ ಪ್ರಶಸ್ತಿ ನಡಿಗೆ ಸಾಧಕರ ಕಡೆ ಅಭಿಯಾನದಡಿ ಇಂದು ಸದಾಶಿವ ಶಟ್ಟಿ ಅವರಿಗೆ ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರಾದ ಶ್ರೀ ದಿಗಂಬರ ಕಾಮತ್ ಅವರು ಹಾಗೂ ಸರೋಲಿಯಂ ಶಾಸಕರಾದ ಉಲ್ಲಾಸ್ ತುರವೇಕರ್ ಹಾಗೂ ನೂತನ ಗೋವಾ ರಾಜ್ಯದ IJU ಉಪಾಧ್ಯಕ್ಷರಾದ ಶ್ರೀ ವಿಠ್ಠಲ ಜಕ್ಕಾ ಈ ಅಭಿಯಾನದ ಮುಖ್ಯಸ್ಥರು ಹಾಗೂ IJU ರಾಷ್ಟ್ರೀಯ ಮಂಡಳಿ ನಿರ್ದೇಶಕರು ಮತ್ತು ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ ಬಿ ವಿಜಯಶಂಕರ್ ಮತ್ತು IJU ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಮೇಶ ಭಜಂತ್ರಿ ,ಉಧ್ಯಮಿ ರಾಘವ ಶಟ್ಟಿ, ಸೇರಿದಂತೆ ಅನೇಕ ಗಣ್ಯರು ಸದಾಶಿವ ಶಟ್ಟಿ ಅವರಿಗೆ ” ಸಮಾಜ ಸೇವಾ ರತ್ನಾ , ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪೂರ ತಾಲೂಕಿನ ಕೊಕ್ಕರಣೆ ಗ್ರಾಮದಲ್ಲಿ ಜನಿಸಿ ,ತಿಳುವಳಿಕೆ ಬರುವಷ್ಟರಲ್ಲಿ ಎಲ್ಲಾ ಆಸ್ತಿ ಕಳೆದುಕೊಂಡು ಬಾಲ್ಯದಲ್ಲೇ ಜೀವನದ ಉದ್ದಕ್ಕೂ ಬದುಕಿನೊಂದಿಗೆ ಹೋರಾಟ ಮಾಡುತ್ತಾ ಉತ್ತಮ ಅಡುಗೆ ಕುಕ್ಕರ್ ಆಗಿ ಹೊರಹೊಮ್ಮಿ ಇಂದು 4,- 5 ಹೋಟೆಲ್ ಗಳ ಮಾಲೀಕರಾಗಿ ನೂರಾರು ಬಡ ಯುವಕರಿಗೆ ಕೆಲಸ ಕೊಟ್ಟು ಇದರೊಂದಿಗೆ ಬಡ ಮಕ್ಕಳ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಹಾಯ ಮಾಡುತ್ತಾ ,ಧಾರ್ಮಿಕ ಮಂದಿರಗಳ ಜಿರ್ನೋದ್ದಾರಕ್ಕೆ ನಿರಂತರವಾಗಿ ಸಹಾಯ ಮಾಡುತ್ತಾ ಸಮಾಜ ಸೇವೆ ಮಾಡುತ್ತಿದ್ದಾರೆ. ಇದರೊಂದಿಗೆ ಗೋವಾದ ಕನ್ನಡ ಸಂಘಟನೆಗೆ ಬೆನ್ನೆಲುಬಾಗಿ ಅವರಿಗೆ ಸಹಾಯ ಸಹಕಾರ ಮಾಡುತ್ತಾ ಕನ್ನಡ ಭವನದ ಹೋರಾಟಕ್ಕೆ ಎಲ್ಲರನ್ನೂ ಒಗ್ಗುಡಿಸುತ್ತಿದ್ದಾರೆ. ಇಂತಹ ಅಪರೂಪದ ಸರಳ ವ್ಯಕ್ತಿತ್ವದ ಮನುಷ್ಯ ಸದಾಶಿವ ಶಟ್ಟಿ ಎಂದರೆ ತಪ್ಪಾಗಲಾರದು. ಸದಾ ಸ್ನೇಹಜೀವಿ,ಭಾವ ಜೀವಿಯಾಗಿರುವ ಇವರು ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಮುಂದೆ ಬಂದವರು ಇಂತಹ ಸೇವಕರು ಈ ಸಮಾಜಕ್ಕೆ ದಾರಿ ದೀಪ ಇಂತಹ ಎಲೆ ಮರೆಯ ಕಾಯಿಯಂತೆ ಸೇವೆ ಮಾಡುತ್ತಿರುವ ಸದಾಶಿವ ಶೆಟ್ಟಿ ಅವರ ಪ್ರಾಮಾಣಿಕ ಸೇವೆ ಮೆಚ್ವಿ BB News Channel ನಡೆಸಿದ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಸದಾಶಿವ ಶಟ್ಟಿ ಅವರಿಗೆ ಸಮಾಜ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕನಿಷ್ಠ ಸಾಹಿತ್ಯ ಪರಿಷತ್ತು ಕಲಾ ತಂಡದಿಂದ ಮಧುರ ಮಧುರವಿ ಮಂಜುಳ ಗಾನ ಕಾರ್ಯಕ್ರಮ ನಡೆಸಲಾಯಿತು. ಅನೇಕ ಕಲಾವಿದರು ಹಾಡಿ ರಂಜಿಸಿದರು. ಈ ಸರಳ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಶಾಸಕರು ಹಾಗೂ ಮುಖ್ಯ ಅಥೀತಿಗಳಾದ ಸುನೀಲ ಶಟ್ಟಿ, ನವೀನ್ ಶಟ್ಟಿ , ಶಶಿಧರ್ ನಾಯಕ್, ಆನಂದ ಕಾಂಬಳೆ,ಪರಶುರಾಮ ಕಾಲೀವಾಲ,ಬಸವರಾಜ್ ಬನ್ನಿಕೊಪ್ಪ,ಶಿವಾನಂದ ಗಾಣಿಗೆರ, ಹಾಜಿಮಸ್ತಾನ್ ಬದಾಮಿ, ಸೇರಿದಂತೆ ಅನೇಕ ಕಲಾವಿದರು, ಸಾಕ್ಷಿಯಾದರು, ಈ ಸಂದರ್ಭದಲ್ಲಿ ಖ್ಯಾತ ಗಾಯಕಿ ಶ್ರೀಮತಿ ಮಮತಾ ಅಧಿಕಾರಿ ಅವರಿಗೆ ಕನ್ನಡ ಸಾಹಿತ್ಯ ಪರಿಷ್ಯತ್ತು ವೇದಿಕೆಯಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.