“ಜೊತೆಗಿರದ ಜೀವ ಎಂದಿಗೂ ಜೀವಂತ”…..

ಕರುನಾಡ ಕಂದ ವರ ನಟನ ಪುತ್ರನಿವ
ಕನ್ನಡಿಗರ ಹೆಮ್ಮೆ ಸರಳತೆಯ ಪ್ರತೀಕನಿವ
ಪರಮಾತ್ಮ ಕರುನಾಡಿಗೆ ನೀಡಿದ ಕಣ್ಮಣಿ ಇವ
ಕರುಣೆಯಲ್ಲಿ ಪರಮ ಪುನೀತನಿವ.
ಕೋಟ್ಯಾಂತರ ಕನ್ನಡಿಗರ ಹೃದಯದ ಅಧಿಪತಿ
ಅಭಿಮಾನಿಗಳಲ್ಲಿ ಬೆಳಗಿದರು ಕನ್ನಡದ
ಜ್ಯೋತಿ
ಲೀನವಾಯಿತು ವೀರ ಕನ್ನಡಿಗನ ಪ್ರಾಣ ಪ್ರಣತಿ
ಕಾತರಿಸಿ ಹೊರಟಿದೆ ತಂದೆ ತಾಯಿಯ ಮಡಿಲ
ಪ್ರೀತಿ.
ಪುಣ್ಯದ ಕಾರ್ಯ ಸದ್ದಿಲ್ಲದೆ ಮಾಡಿದನು
ನೀತಿವಂತನಾಗಿ ನಗುತ ಬಾಳಿದವನು
ತಂದೆ ಹೆಸರು ಉಳಿಸಿ ಬೆಳೆದವನು
ರಾಜಕುಮಾರನ ಪ್ರಿಯ ತನುಜನು.
ಬಣ್ಣದ ಲೋಕವ ಬೆಳಗಿದ ಬಂಗಾರ
ಅನಾಥ ಬಂಧುವಿಗೆ ಆಸರೆಯ ಸರದಾರ
ವೃದ್ಧರ ಪಾಲಿನ ಒಲವಿನ ಮಂದಾರ
ಹುಟ್ಟಿ ಬಾ ಭುವಿಗೆ ಕನ್ನಡದ ಕುವರ.
ಕು. ಜ್ಯೋತಿ ಆನಂದ
ಚಂದುಕರ ಬಾಗಲಕೋಟ