ಗಮನ ಸೆಳೆದ ಕುದುರೆ ಕುಣಿತ ಡೊಳ್ಳಿನ ಮೇಳ – ಸಂಗೊಳ್ಳಿ ರಾಯಣ್ಣ ಮೂರ್ತಿ ಅದ್ದೂರಿ ಮೆರವಣಿಗೆ.
ಮುದ್ದೇಬಿಹಾಳ ಆ.11





ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಷ್ಠಾಪಿಸಲು ಸಿದ್ಧಗೊಳಿಸಿರುವ ರಾಯಣ್ಣನವರ ಕಂಚಿನ ಪುತ್ತಳಿಯನ್ನು. ಪಟ್ಟಣದಲ್ಲಿ ಭಾನುವಾರ ಭವ್ಯ ಮೆರವಣಿಗೆ ಮೂಲಕ ಕರೆ ತರಲಾಯಿತು. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿ.ಎಲ್ ಬಿರಾದಾರ್ ಕಲ್ಯಾಣ ಮಂಟಪದಿಂದ ವಿವಿಧ ಊರುಗಳಿಂದ ಆಗಮಿಸಿದ್ದ ಡೊಳ್ಳಿನ ಮೇಳದವರು ವಿಶೇಷವಾಗಿ ಕುದುರೆ ಕುಣಿತದ ತಂಡ ಅಲಂಕಾರಿಕ ಗೊಂಬೆಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ಬಸವೇಶ್ವರ ವೃತ್ತ. ಬಸ್ಸ ನಿಲ್ದಾಣ. ರಾಯಣ್ಣ ವೃತ್ತ. ಅಂಬೇಡ್ಕರ್ ವೃತ್ತಕ್ಕೆ ತೆರಳಿ. ಮೆರವಣಿಗೆ ಸಮಾಪ್ತಿ ಗೊಂಡಿತು. ಅದೇ ವೇಳೆಯಲ್ಲಿ ಕುರುಬರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್ ಮಾದರಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಬಿರಾದಾರ್. ಕಾಂಗ್ರೆಸ್ ಮುಖಂಡ ಸಿ.ಬಿ ಅಕ್ಕಿ. ಪುರಸಭೆ ಅಧ್ಯಕ್ಷ ಮಹಿಬೂಬ್ ಕೊಳಸಂಗಿ. ನಿವೃತ್ತ ಡಿವೈಎಸ್ಪಿ ಎಸ್.ಎಸ್ ಹುಲ್ಲೂರ್. ಕಸಾಪ. ಅಧ್ಯಕ್ಷ ಕಾಮರಾಜ ಬಿರಾದಾರ್. ವಾಯ್.ಎಚ್ ವಿಜಯಕರ್. ಸೋಮನಗೌಡ ಪಾಟೀಲ್ ನಡಹಳ್ಳಿ. ಸಂಗಣ್ಣ ಮೇಲಿನಮನಿ. ಮುತ್ತಣ್ಣ. ಮುತ್ತಣ್ಣವರ್. ಲಕ್ಷ್ಮಣ ಬಿಜುರ್. ಸಾಯಬಣ್ಣ ವಾಲಿಕಾರ್. ಸಂತೋಷ್ ನಾಯ್ಕೋಡ್. ಬಿ.ಎಸ್ ಮೇಟಿ. ನಾಗಪ್ಪ ರೂಡಿಗಿ. ಸಂತೋಷ್ ನಡಿಗೇರಿ. ಪುರಸಭೆ ಸದಸ್ಯರು. ಮಹಿಳಾ ಮುಖಂಡರು. ಏರಿದಂತೆ ಹಾಲುಮತ ಸಮಾಜದ ನೂರಾರು ಜನರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ