ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆ – ಅಭಿಯಾನಕ್ಕೆ ಚಾಲನೆ.

ಬೈಲಹೊಂಗಲ ಅ 18

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಡಿಯಲ್ಲಿ “ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನ ಕಾರ್ಯಕ್ರಮ ಹಾಗೂ ನರೇಗಾ ರಥೋತ್ಸವಕ್ಕೆ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು ಶ್ರೀ ರವಿ ಬಂಗಾರೆಪ್ಪನ್ನವರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಅಕ್ಟೋಬರ-2024 ರಿಂದ ನವ್ಹೆಂಬರ -2024 ರವರೆಗೆ ರಾಜ್ಯಾದ್ಯಂತ ನರೇಗಾ ಯೋಜನೆಯ ಸನ್‌ 2025-26 ನೇ ಸಾಲಿಗೆ ಕಾರ್ಮಿಕ ಆಯವ್ಯಯವನ್ನು ಸಿದ್ದಪಡಿಸುವ ಸಲುವಾಗಿ ಕ್ರಿಯಾ ಯೋಜನೆಯನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗವುದು.

ಆದುದರಿಂದ ಪಂಚಾಯತ ರಾಜ್‌ ಇಲಾಖೆಯಲ್ಲಿ ನರೇಗಾ ಬೇಡಿಕೆಗಳನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆಗಳನ್ನು ಹಾಕಲು ಅವಕಾಶ ಮಾಡಿ ಕೊಡಲಾಗಿದೆ ಇದರ ಸದುಪಯೋಗವನ್ನು ತಪ್ಪದೇ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಸಹಾಯಕ ನಿರ್ದೇಶಕರು ವಿಜಯ ಪಾಟೀಲ ಮಾತನಾಡಿ, ನರೇಗಾ ಯೋಜನೆಯಲ್ಲಿ ಗ್ರಾಮ ಸಭೆಗಳ ಮೂಲಕ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಕೊಳ್ಳಲಾಗುತ್ತದೆ ಆದ್ದರಿಂದ ತಾಲೂಕಿನ ಎಲ್ಲಾ ನರೇಗಾ ಕಾಯಕ ಬಂಧು (ಮೇಟ್) ಗಳು ಹಾಗೂ ಕೂಲಿಕಾರರು ಬೇಡಿಕೆಗಳನ್ನು ಇ-ಡಿಮ್ಯಾಂಡ ಮೂಲಕ ಹಾಕುವ ಸಲುವಾಗಿ ಕ್ಯೂ-ಆರ್‌ ಕೊಡನ್ನು ಬಳಸಿ ಕೊಂಡು ಅರ್ಜಿಗಳನ್ನು ಹಾಕುವುದು ಮತ್ತು ಕಾಮಗಾರಿ ಸ್ಥಳಗಳಲ್ಲಿ ಎನ್‌.ಎಮ್‌.ಎಮ್‌.ಎಸ್‌ ಹಾಜರಾತಿಯಲ್ಲಿ ಹಲವಾರು ಸುಧಾರಣೆಗಳನ್ನು ತರಲಾಗಿದ್ದು ಮೇಟಗಳು ತಪ್ಪದೇ ಹಾಜರಾತಿಯನ್ನು ಎರಡು ಸಮಯದಲ್ಲಿ ಪಡೆದು ಕೊಳ್ಳಿ ಪ್ರತಿ ಕುಟುಂಬ 100 ದಿವಸ್‌ ಪೂರೈಸುವಲ್ಲಿ ಮೇಟಗಳು ಶ್ರಮಿಸಬೇಕು ಎಂದರು.

ನರೇಗಾ ರಥೋತ್ಸವ ತಾಲೂಕಿನ ಎಲ್ಲಾ ಗ್ರಾಮ ಹಾಗೂ ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಬೇಡಿಕೆಗಳನ್ನು ಪಡೆದು ಕೊಳ್ಳಲಾಗುವುದು ಮತ್ತು ನರೇಗಾ ಯೋಜನೆಯ ಕುರಿತು ವ್ಯಾಪಕವಾದ ಪ್ರಚಾರವನ್ನು ಮಾಡುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಬರುವಂತೆ ಜನ ಸಾಮಾನ್ಯರಿಗೆ ತಿಳಿಸಲಾಗುವುದು ಎಂದು ಕರೆ ನೀಡಿದರು. ಉಪಸ್ಥಿತಿ, ಸಹಾಯಕ ನಿರ್ದೇಶಕರು (ಪಂ ರಾಜ್‌) ರಘು ಬಿ.ಎನ್‌ ತಾಪಂ ಸಹಾಯಕ ಲೆಕ್ಕಾಧಿಕಾರಿಗಳು ಪ್ರಶಾಂತ ಹಿರೇಮಠ ತಾಪಂ ಯೋಜನಾಧಿಕಾರಿಗಳು ರಾಜಶೇಖರ ಕಡೆಮನಿ ತಾಪಂ ವಿಷಯ ನಿರ್ವಾಹಕ ರಮೇಶ ನಂದಿಹಳ್ಳಿ, ನರೇಗಾ ಸಿಬ್ಬಂದಿಗಳು ಎಸ್‌.ವ್ಹಿ ಹಿರೇಮಠ ಎಮ್‌.ಬಿ ಶಿವಾಪೂರ, ನಾಗರಾಜ್‌ ಯರಗುದ್ದಿ, ಭಾರತಿ ದೊಡಗೌಡರ, ನರೇಗಾ ಬೇರಪೂಟ ಟೆಕ್ನಿಷಿಯನ್ ಗಳು, ಗ್ರಾಮ ಕಾಯಕ ಮಿತ್ರರು ಮತ್ತು ನರೇಗಾ ಕಾಯಕ ಬಂಧುಗಳು ಹಾಜರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button