ರಾಷ್ಟ್ರೀಯ ವಿವಿಧ ಆರೋಗ್ಯ – ಕಾರ್ಯಕ್ರಮಗಳ ಜನ ಜಾಗೃತಿ.
ಗುಂಡಿನಪಲ್ಲೆ ಫೆ.06

ಬಾಗಲಕೋಟ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ, ಬೆನಕಟ್ಟಿ ಉಪ ಕೇಂದ್ರ ವ್ಯಾಪ್ತಿಯ ಗುಂಡನಪಲ್ಲೆ ಗ್ರಾಮದ ಚಾವಡಿ ಕಟ್ಟಿಯಲ್ಲಿ “ನಮ್ಮ ನಡೆ ಆರೋಗ್ಯ ಕಡೆ” ಅಸಂಕ್ರಾಮಿಕ ರೋಗಗಳ ನಿಯಂತ್ರಣ ಮುಂಜಾಗ್ರತೆ ಆರೋಗ್ಯ ಅರಿವು ಜನಜಾಗೃತಿ ಆಯೋಜಿಸಲಾಗಿತ್ತು. ಗ್ರಾಮದ ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ಶಿವಮ್ಮ, ರೇಣುಕಾ, ಯಮನವ್ವ ಮಾದರ ದುರ್ಗವ್ವ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿಯವರು ಅಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ಕುಷ್ಠರೋಗ, ಸೊಳ್ಳೆಗಳು ಕಚ್ಚುವಿಕೆಯಿಂದ ಬರುವ ಡೆಂಗ್ಯೂ, ಚಿಕೂನ್ ಗುನ್ಯಾ, ಆನೆಕಾಲು ರೋಗಗಳ ವೈಜ್ಞಾನಿಕ ಮಾಹಿತಿ ಕರ ಪತ್ರ ವಿತರಿಸುವ ಮೂಲಕ ನಮ್ಮ “ನಡೆ ಆರೋಗ್ಯದ ಕಡೆ” ನಿಮ್ಮ ಆರೋಗ್ಯ ನಮ್ಮ ಬದ್ಧತೆ ಘೋಷ ವಾಖ್ಯೆಯೊಂದಿಗೆ ಆಧುನಿಕ ಜೀವನ ಪದ್ಧತಿಯಿಂದ ಅಸಾಂಕ್ರಾಮಿಕ ರೋಗಗಳಾದ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಸ್ಥೂಲಕಾಯ, ಕಣ್ಣಿನ ಪೋರೆ, ಮಾನವನನ್ನು ಆವರಿಸಿ ಜೀವನ ನರಳುವಂತಾಗುವುದು.

ಇವುಗಳ ನಿಯಂತ್ರಣ ತಡೆಗೆ ನಾವೆಲ್ಲರೂ ಉತ್ತಮ ಪೋಷಕಾಂಶ ಯುಕ್ತ ಆಹಾರ ಸೇವನೆಗೆ ಮಹತ್ವ ನೀಡಬೇಕು ವೈಯಕ್ತಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ, ಕಾಪಾಡಬೇಕು, ಕಲಬೆರಿಕೆ ಆಹಾರ ಸೇವನೆ ತಂಬಾಕು ಗುಟ್ಕಾ, ಧೂಮಪಾನ ಸೀಗರೇಟು ಸೇವನೆ ಯಿಂದ ದುಶ್ಚಟಗಳಿಂದ ಮಾನಸಿಕ ಒತ್ತಡ ಭಯ ಆತಂಕ ನರ ದೌರ್ಬಲ್ಯ ಮೂರ್ಚೆರೋಗ ಆವರಿಸುವವು, ಉತ್ತಮ ಆರೋಗ್ಯ ನಮ್ಮೆಲ್ಲರ ಗುರಿಯಾಗಬೇಕು. ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೋಲನೆಗೆ ನೀರಿನ ಸಂಗ್ರಹಗಳ ಮೇಲೆ ಮುಚ್ಚಳಿಕೆ ಹಾಕಬೇಕು ಸೊಳ್ಳೆ ನಿರೋಧಕ ಬಳಸ ಬೇಕು, ಕುಷ್ಠರೋಗ ಭಯ ಬೇಡ ಸ್ಪರ್ಶ ಜ್ಞಾನವಿಲ್ಲದ ತದ್ದು ಮಚ್ಛೆ ದೇಹದ ಮೇಲೆ ಕಂಡು ಬಂದರೆ ವೈದ್ಯರಲ್ಲಿ ಪರೀಕ್ಷಿಸಿ ಕೊಳ್ಳಿ ಬಹು ಔಷಧ ಚಿಕಿತ್ಸೆಯಿಂದ ಕುಷ್ಠರೋಗ ಸಂಪೂರ್ಣ ಗುಣಮುಖವಾಗುವುದು ಹಾಗೂ ಎರಡು ವಾರಕ್ಕಿಂತ ಅಧಿಕ ಕೆಮ್ಮು ಅಶಕ್ತತೆ ಜ್ವರ ಕಾಣಿಸಿದರೆ ಕಫ ಪರೀಕ್ಷೆ ಮಾಡಿಸಬೇಕು ಆರೋಗ್ಯ ಅಧಿಕಾರಿಗಳು ತಮ್ಮ ಗ್ರಾಮಕ್ಕೆ ಬೇಟಿ ನೀಡಿದಾಗ ಸರಿಯಾದ ಮಾಹಿತಿ ನೀಡಿ ಸಹಕರಿಸ ಬೇಕು. ಆರೋಗ್ಯ ಇಲಾಖೆಯ ಸಲಹೆ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಬೇಕು. ಯಾವುದೇ ತರಹ ಆರೋಗ್ಯ ಸಮಸ್ಯೆಗಳಿಗೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಭೇಟಿ ನೀಡಿ ಆರೋಗ್ಯ ಸೌಲಭ್ಯಗಳ ಸದುಪಯೋಗ ಪಡಿಸಿ ಕೊಳ್ಳಲು ಜನ ಜಾಗೃತಿ ಮೂಡಿಸಲಾಯಿತು. ನಮ್ಮ ನಡೆ ಆರೋಗ್ಯದ ಕಡೆ ಜನಜಾಗೃತಿ ಕಾರ್ಯದಲ್ಲಿ ಆರೋಗ್ಯ ಅಧಿಕಾರಿಗಳು, ಅಂಗನವಾಡಿ, ಆಶಾ, ಮುಖಂಡರು, ಯುವಕರು ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಭಾಗವಹಿಸಿದ್ದರು.