ಶ್ರೀ ಸಮಾದೇಮ್ಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಹಿರೇಹೆಗ್ಡಾಳ್ ಫೆಬ್ರುವರಿ.7

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದಲ್ಲಿ ಶ್ರೀ ಸಮಾದೇಮ್ಮ ದೇವಿ ರಥೋತ್ಸವ ಅದ್ದೂರಿಯಾಗಿ ಜರುಗಿದ್ದು ಬೆಳಗಿನ ಜಾವದಿಂದಲೇ ಪ್ರಾರಂಭವಾದ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ಸಹ ರಥೋತ್ಸವ ಅಗ್ನಿಕೊಂಡ ತುಳಿಯುವ ಕಾರ್ಯಕ್ರಮವಿದು ಭಕ್ತಾದಿಗಳು ತಮ್ಮಹುರುಮೆ ಹಲಗೆ ಮೇಳ ವಾದ್ಯಗಳೊಂದಿಗೆ ವಿಜ್ರಮಿಸಿ ದೇವಿಯನ್ನು ಆರಾಧಿಸುತ್ತಾ ಜಾತಿ ಭೇದ ಎನ್ನದೆ ಪ್ರತಿಯೊಬ್ಬರ ಮನೆಯಿಂದ ಹಣ್ಣುಹೂ ಕಾಯಿ ಶ್ರೀ ಸಮಾದೇಮ್ಮ ದೇವಿಗೆ ಅರ್ಪಣೆ ಮಾಡಿ ವಿಶೇಷವಾಗಿ ಎತ್ತಿನ ಮೆರವಣಿಗೆ ಟಗರಿನ ಕಾಳಗ ಪ್ರತಿ ವರ್ಷವೂ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳು ಈ ವರ್ಷವೂ ಸಹ ಸಾಮಾಜಿಕ ನಾಟಕ ಸೇಡಿಗಾಗಿ ಸಿಡಿದೆದ್ದ ಶಿವ ನಾಗ ಎಂಬ ರೌದ್ರಮಯ ನಾಟಕವನ್ನು ಹಿರೇ ಹೆಗ್ಡಾಳ್ ಕಲಾವಿದರಿಂದ ರೂಪಗೊಳ್ಳಲಿದ್ದು ಬುಧವಾರ ಸಂಜೆ 5:00 ಗಂಟೆಗೆ ಶ್ರೀ ಸಮಾದೇಮ್ಮ ರಥೋತ್ಸವ ಎಳೆಯುತ್ತಾ ಭಕ್ತಾದಿಗಳು ರಥೋತ್ಸವಕ್ಕೆ ಬಾಳೆಹಣ್ಣು ತಳಿರು ತೋರಣಗಳಿಂದ ಸಿಂಗಾರ ಮಾಡಿ ಶ್ರೀದೇವಿಗೆ ಜೈ ಜೈ ಎಂದು ಜೈಕಾರ ಹಾಕುತ್ತ ರಥೋತ್ಸವವನ್ನು ಎಳೆದು ಶ್ರೀ ಸಮಾದೇಮ್ಮ ದೇವಿಗೆ ಭಕ್ತಿ ಅರ್ಪಿಸಿದರು ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಗ್ರಾಮಸ್ಥರು ಹಿರೇ ಹೆಗ್ಡಾಳ್ ಗ್ರಾಮಸ್ಥರು ರೈತಾಪಿ ವರ್ಗದವರು ಯುವಕರು ಮಹಿಳೆಯರು ಭಾಗವಹಿಸಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ