ನವಿಲು ಗರಿ ನವೀನ್ ಗೆ ‘ಭರ್ಜರಿ’ – ಚೇತನ್ ಕುಮಾರ್ ಸಾಥ್.
ಬೆಂಗಳೂರು ಸ.04

ವಿಭಿನ್ನ ಮತ್ತು ವಿಶಿಷ್ಟ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ಹಾಗೂ ನ್ಯಾಷನಲ್, ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಗಳನ್ನು ಮಾಡಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನಿರ್ದೇಶಕ ನವಿಲುಗರಿ ನವೀನ್ ಪಿ.ಬಿ ಗೆ ಹಲವಾರು ಹಿಟ್ ಹಾಡುಗಳಿಗೆ ಸಾಹಿತ್ಯ ಬರೆದಿರುವ ಚೇತನ್ ಕುಮಾರ್ ಈಗ ಸಾಥ್ ನೀಡಿದ್ದಾರೆ.
ಸದ್ಯ “ಜನರಿಂದ ನಾನು ಮೇಲೆ ಬಂದೆ” ಎಂಬ ಸಿನಿಮಾ ನಿರ್ದೇಶನದಲ್ಲಿ ಬಿಜಿಯಾಗಿರುವ ನವೀನ್ ಈ ಬಿಜಿಯ ನಡುವೆ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗುತ್ತಿದ್ದಾರೆ. ಈ ನೂತನ ಚಲನ ಚಿತ್ರಕ್ಕೆ ಬಹದ್ದೂರ್, ಭರ್ಜರಿ, ಭರಾಟೆ, ಜೇಮ್ಸ್, ಸಿನಿಮಾಗಳ ನಿರ್ದೇಶಕ ಹಾಗೂ ಏನಮ್ಮೀ ಏನಮ್ಮೀ, ಶಾನೇ ಟಾಪ್ ಆಗವ್ಳೆ, ಪಸಂದಾಗವ್ನೆ ಇನ್ನೂ ಮುಂತಾದ ಹಿಟ್ ಹಾಡುಗಳಿಗೆ ಸಾಹಿತ್ಯ ಬರೆದಿರುವ ಚೇತನ್ ಕುಮಾರ್ ನವಿಲುಗರಿ ನವೀನ್ ಪಿ.ಬಿ ಅವರಿಗೆ ಸಾಥ್ ನೀಡಿದ್ದಾರೆ. ಈ ಹೊಸ ಚಿತ್ರದಲ್ಲಿರುವ ಒಂದು ರೋಮ್ಯಾಂಟಿಕ್ ಗೀತೆಗೆ ಸಾಹಿತ್ಯವನ್ನು ಬರೆಯುತ್ತಿದ್ದು ಈ ಹಾಡು ಕೂಡ ಭರ್ಜರಿ ಚೇತನ್ ಕುಮಾರ್ ಅವರ ಹಿಟ್ ಹಾಡುಗಳ ಸಾಲಿಗೆ ಸೇರಲಿದೆ. ಈ ಚಿತ್ರಕ್ಕೆ ಯುವ ಸಂಗೀತ ನಿರ್ದೇಶಕ ಪ್ರಣವ್ ಸತೀಶ್ ಅವರ ಸಂಗೀತ ನಿರ್ದೇಶನ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ಅವರ ಪತ್ರಿಕಾ ಸಂಪರ್ಕವಿದೆ.
“ಜನರಿಂದ ನಾನು ಮೇಲೆ ಬಂದೆ” ಸಿನಿಮಾದ ಕೆಲಸ ಕಾರ್ಯಗಳು ಕೊನೆಯ ಹಂತದಲ್ಲಿದ್ದು ಕೆಲಸ ಮುಗಿದೊಡನೆ ಹೊಸ ಸಿನಿಮಾದ ಟೈಟಲ್ ಅನ್ನು ನಾಡಿನ ಗಣ್ಯರ ಅಮೃತ ಹಸ್ತದಿಂದ ಬಿಡುಗಡೆ ಮಾಡಿಸಲಾಗುವುದು ಎಂದು ನವೀನ್ ಪಿ.ಬಿ ತಿಳಿಸಿದ್ದಾರೆ.
*****
– ಡಾ, ಪ್ರಭು ಗಂಜಿಹಾಳ
ಮೊ-೯೪೪೮೭೭೫೩೪೬