ಕಲ್ಯಾಣ ಕಲಬುರಗಿ ಸಿರಿ ಪ್ರಶಸ್ತಿಗೆ – ಅಂಬರೀಶ್.ಬಿ ಲಿಂಗಸೂರು ಆಯ್ಕೆ.
ಇಜೇರಿ ಜ.04

ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ ಶೆಟ್ಟಿ ಬಣ) ಸಂಘಟನೆಯ ವತಿಯಿಂದ ದಿನಾಂಕ 05-01-2024 ರಂದು ಕಲಬುರಗಿ ಜಿಲ್ಲೆಯಲ್ಲಿ 19 ನೇ. ವರ್ಷದ ಕಲ್ಯಾಣ ಕಲಬುರಗಿ ಉತ್ಸವ ಅದ್ದೂರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಕಲ್ಯಾಣ ಕಲಬುರಗಿ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅಂಬರೀಶ್.ಬಿ ಲಿಂಗಸೂರ ರವರಿಗೆ ಕಲ್ಯಾಣ ಕಲಬುರಗಿ ಸಿರಿ ಪ್ರಶಸ್ತಿಗೆ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ನನ್ನ ನಿಸ್ವಾರ್ಥ ಸೇವೆಯನ್ನು ಗುರುತಿಸಿ ನನಗೆ ಕಲ್ಯಾಣ ಕಲಬುರಗಿ ಸಿರಿ ಪ್ರಶಸ್ತಿಗೆ ಆಯ್ಕೆ ಮಾಡಿದಂತಹ ಕ.ರ.ವೇ ರಾಜ್ಯಾಧ್ಯಕ್ಷರಾದ ಶ್ರೀ ಪ್ರವೀಣಕುಮಾರ ಶೆಟ್ಟಿ ಸರ್ ಮತ್ತು ಉತ್ತರ ಕರ್ನಾಟಕ ಅಧ್ಯಕ್ಷರಾದ ಶ್ರೀ ಡಾ, ಶರಣು.ಬಿ ಗದ್ದುಗೆ ಸರ್ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷರಾದ ಶ್ರೀ ವಿಶ್ವನಾಥ ಪಾಟೀಲ ಸರ್ ಮತ್ತು ಸರ್ವ ಸಂಘಟನೆಯ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ ಎಂದು ಅಂಬರೀಶ್.ಬಿ ಲಿಂಗಸೂರ್ ರವರು ತಿಳಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಭೀಮಾಶಂಕರ್.ಎನ್.ನೀಲಕೋಡ.ಇಜೇರಿ