“ಯುವಕರ ಸ್ಪೂರ್ತಿ ಸ್ವಾಮಿ ವಿವೇಕಾನಂದರು”…..

ಸ್ವಾಮಿ ವಿವೇಕಾನಂದ ಮಹಾನ್ ದೇಶಭಕ್ತ ನಾಯಕ ಮತ್ತು ಭಾರತೀಯ ಸನ್ಯಾಸಿ. ಸ್ವಾಮಿ ವಿವೇಕಾನಂದರು 19 ನೇ. ಶತಮಾನದ ಭಾರತೀಯ ಅತೀಂದ್ರಿಯ ರಾಮಕೃಷ್ಣ ಪರಮಹಂಸರ ಮುಖ್ಯ ಶಿಷ್ಯರಾಗಿದ್ದರು. ಸ್ವಾಮಿ ವಿವೇಕಾನಂದರು ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಜಾಗತಿಕ ಪ್ರೇಕ್ಷಕರ ಹೃದಯವನ್ನು ಗೆದ್ದ ಮಹಾನ್ ನಾಯಕ ಮತ್ತು ತತ್ವಜ್ಞಾನಿ. ಅವರ ಬೋಧನೆಗಳು ಮತ್ತು ತತ್ವಶಾಸ್ತ್ರವು ಭಾರತೀಯ ಯುವಕರಿಗೆ ಮಾರ್ಗದರ್ಶಕ ಬೆಳಕು. ಎದ್ದೇಳು ನಿರ್ಭಿತನಾಗು, ಬಲಾಡ್ಯನಾಗು ಎಲ್ಲ ಹೊಣೆಗಾರಿಕೆಯನ್ನು ನಿನ್ನ ಹೆಗಲ ಮೇಲೆ ಹೊತ್ತುಕೋ. ನಿನ್ನ ಭವಿಷ್ಯದ ನಿರ್ಮಾತೃ ನೀನೇ ಎಂಬುದನ್ನು ತಿಳಿದಿರು. ನಿನಗೆ ಅಗತ್ಯವಿರುವ ಎಲ್ಲ ಶಕ್ತಿ – ಸಾಮರ್ಥ್ಯಗಳು ನಿನ್ನೊಳಗೆ ಇವೆ. ಆದ್ದರಿಂದ ನಿನ್ನ ಭವಿಷ್ಯ ನೀನೇ ರೂಪಿಸಿಕೋ ಎಂದು ಹೇಳಿದ ಸ್ವಾಮಿ ವಿವೇಕಾನಂದರ ಜನ್ಮ ದಿನದ ಶುಭಾಶಯಗಳು.

ಪ್ರತಿ ವರ್ಷ ಸ್ವಾಮಿ ವಿವೇಕಾನಂದರ ಜನ್ಮದಿನದಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಯುವಜನರಲ್ಲಿ ಜಾಗೃತಿ ಮೂಡಿಸುವ ದಿನವಾಗಿದೆ. ದೇಶಕ್ಕಾಗಿ ಯುವಕರು ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ಜಾಗೃತಿ ಹಾಗೂ ಜ್ಞಾನ ಮೂಡಿಸುವ ದಿನ ಇದಾಗಿದೆ. ಯುವಕರನ್ನು ಪ್ರೇರೇಪಿಸುವ ಮತ್ತು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಹರಡುವ ಮೂಲಕ ದೇಶಕ್ಕೆ ಉತ್ತಮ ಭವಿಷ್ಯವನ್ನು ರೂಪಿಸುವುದು ಈ ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರೀಯ ಯುವದಿನವು ಯುವ ದಿವಸ್‌ ಎಂದೂ ಖ್ಯಾತಿ ಪಡೆದಿದೆ.

ಸ್ವಾಮಿ ವಿವೇಕಾನಂದರು ಸಾರ್ವಕಾಲಿಕ ಶ್ರೇಷ್ಠ ಚಿಂತಕರಲ್ಲಿ ಒಬ್ಬರು. ಅವರ ಮಾತುಗಳು ಕಾಲಾತೀತ ಮತ್ತು ಆಳವಾದ ಬುದ್ಧಿವಂತಿಕೆಯಿಂದ ಕೂಡಿದೆ. ಬಹುಪಾಲು ಯುವಜನರ ಆದರ್ಶ ಸ್ವಾಮಿ ವಿವೇಕಾನಂದ. ಸಂಕಷ್ಟಗಳನ್ನು ಎದುರಿಸುತ್ತ ಮುದುಡಿದ ಮನಸ್ಸನ್ನು ಬಡಿದೆಬ್ಬಿಸಿ ಬದುಕಿಗೆ ಶಕ್ತಿ ತುಂಬಬಲ್ಲ ಶಕ್ತಿ ಸ್ವಾಮಿ ವಿವೇಕಾನಂದ. ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಯುವ ಜನತೆಯ ಬಗ್ಗೆ ಸ್ವಾಮಿ ವಿವೇಕಾನಂದರು ಹೇಳಿದ್ದೇನು..? ಯುವ ಜನರನ್ನು ಪ್ರೇರೇಪಿಸಲು ಸ್ವಾಮಿ ವಿವೇಕಾನಂದರು ಯಾವ ತತ್ವವನ್ನು ಅನುಸರಿಸಿದ್ದರು ಗೊತ್ತಾಯುವಕರ ಸ್ಫೂರ್ತಿಯಾದ ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಜನಿಸಿದರು. ವಿವೇಕಾನಂದರು ಕಲ್ಕತ್ತಾದ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಸ್ವಾಮಿ ವಿವೇಕಾನಂದರ ಚಿಂತನೆಗಳು ಎಲ್ಲಾ ವರ್ಗ, ಜಾತಿ, ಧರ್ಮದ ಜನರಿಗೆ ಸದಾ ಪ್ರೇರಣೆ ನೀಡುತ್ತವೆ. ಯುವಕರ ಮೇಲಿನ ಅವರ ಅಪಾರ ಚಿಂತನೆಗಳಿಂದಾಗಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ಸ್ವಾಮಿ ವಿವೇಕಾನಂದರ ಬೋಧನೆಗಳು ಇಂದಿಗೂ ವ್ಯಕ್ತಿಯ ಜೀವನವನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಲು ಸಹಕಾರಿಯಾಗಿದೆ. ನಾವು ಸ್ವಾಮಿ ವಿವೇಕಾನಂದರ ಯಾವೆಲ್ಲಾ ಬೋಧನೆಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದರೆ ನೀವು ಇತರರಿಗೆ ಸಹಾಯ ಮಾಡಿದರೆ, ನೀವು ನಿಜವಾದ ಯಶಸ್ಸನ್ನು ಸಾಧಿಸಿದ್ದೀರಿ ಎಂದರ್ಥ. ಹಾಗಾಗಿ ಅಗತ್ಯವಿರುವವರಿಗೆ ಸಹಾಯ ಮಾಡಿ, ನಿಸ್ವಾರ್ಥ ಮತ್ತು ಸಮರ್ಥ ಕೆಲಸವನ್ನು ಮಾಡುವವರೆಲ್ಲರೂ ನಿಜವಾದ ಅನ್ವೇಷಕರಾಗಿರುತ್ತಾರೆ. ನೀವು ಮಾಡುವ ಸೇವೆ ಯಾವಾಗಲೂ ನಿಸ್ವಾರ್ಥತೆಯನ್ನು ಹೊಂದಿರಲಿ, ಜ್ಞಾನವು ಆತ್ಮದ ಶಕ್ತಿಯಾಗಿದೆ. ಯಾವ ವ್ಯಕ್ತಿ ಜ್ಞಾನಿಯಾಗಿರುತ್ತಾನೋ ಅವನು ಆತ್ಮಾವಲೋಕವನ್ನು ಪಡೆದುಕೊಳ್ಳುತ್ತಾನೆ, ನಿಮ್ಮ ಬಗ್ಗೆ ನಿಮಗೆ ವಿಶ್ವಾಸವಿರಬೇಕು. ನೀವು ಅದನ್ನು ಹೊಂದಿಲ್ಲದಿದ್ದರೆ ನೀವು ಯಾವುದೇ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ, ಈ ರೀತಿಯ ಹಲವಾರು ತತ್ವಗಳು ಇವು ಸ್ವಾಮಿ ವಿವೇಕಾನಂದರ ಕೆಲವು ಅಮೂಲ್ಯ ಚಿಂತನೆಗಳಾಗಿದ್ದು, ಇವುಗಳು ಇಂದಿಗೂ ನಮಗೆ ಅರ್ಥಪೂರ್ಣ ಜೀವನಕ್ಕಾಗಿ ಮಾರ್ಗದರ್ಶನ ನೀಡುತ್ತವೆ. ಇವುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು, ಪ್ರಯತ್ನಿಸುವುದರ ಜೊತೆಗೆ ಯಶಸ್ಸು ಕಂಡುಕೊಳ್ಳಬೇಕು.

ಸ್ವಾಮಿ ವಿವೇಕಾನಂದರು ನಿಜಕ್ಕೂ ಸ್ಪೂರ್ತಿದಾಯಕ ವ್ಯಕ್ತಿತ್ವದವರು. ಅವರು ಪ್ರಸಿದ್ಧ ಸಮಾಜ ಸುಧಾರಕರು. ಅವರು ಇಡೀ ಜಗತ್ತಿಗೆ ಹಿಂದೂ ಧರ್ಮದ ಮಹತ್ವವನ್ನು ತಿಳಿಸಿಕೊಟ್ಟವರು . ಅವರು ತುಂಬಾ ಧಾರ್ಮಿಕ ವ್ಯಕ್ತಿ. ಅವರು ಸಂಸ್ಕೃತಿ ಮತ್ತು ಮಾತೃಭೂಮಿಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು. ಅವರು ಶಿಕ್ಷಣ ವ್ಯವಸ್ಥೆಯನ್ನು ಬೆಳಗಿಸಿದರು ಮತ್ತು ಶಿಕ್ಷಣವು ಉತ್ತಮ ಮಾನವರನ್ನು ಸೃಷ್ಟಿಸುತ್ತದೆ ಎಂದು ಹೇಳಿದರು. ಅವರು ಶ್ರೀ ರಾಮಕೃಷ್ಣರ ಅನುಯಾಯಿಯಾಗಿದ್ದರು ಮತ್ತು ಈ ಸಮಾಧಿಯ ನಂತರ ತಮ್ಮ ಕಾರ್ಯವನ್ನು ಸಾಧಿಸಿದರು. ಅವರು 1893 ರಲ್ಲಿ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ತಮ್ಮ ಅತ್ಯುತ್ತಮ ಭಾಷಣಕ್ಕಾಗಿ ಬಹಳ ಪ್ರಸಿದ್ಧರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಆಲೋಚನೆಗಳು ಬಹಳ ಅತ್ಯುತ್ತಮವಾಗಿವೆ ಮತ್ತು ನಮಗೆ ಸ್ಫೂರ್ತಿ ನೀಡುತ್ತವೆ. ವಿವೇಕಾನಂದರ ಪರಂಪರೆಯು ಅಸಂಖ್ಯಾತ ವ್ಯಕ್ತಿಗಳನ್ನು ಉದ್ದೇಶವನ್ನು ಹುಡುಕಲು, ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಸಮಾಜಕ್ಕೆ ಧನಾತ್ಮಕ ಕೊಡುಗೆ ನೀಡಲು ಪ್ರೇರೇಪಿಸಿದೆ. ಅವರ ಜೀವನ ಪಯಣ, ಆಧ್ಯಾತ್ಮಿಕ ಸತ್ಯದ ಅನ್ವೇಷಕರಿಂದ ಜಾಗತಿಕ ಸಾಮರಸ್ಯದ ರಾಯಭಾರಿಯವರೆಗೆ, ನಮ್ಮ ಮಿತಿಗಳನ್ನು ಮೀರಿ ಮತ್ತು ಹೆಚ್ಚಿನ ಒಳಿತಿಗಾಗಿ ಕೆಲಸ ಮಾಡಲು ನಮ್ಮನ್ನು ಪ್ರೋತ್ಸಾಹಿಸುತ್ತದೆ.

ಸ್ವಾಮಿ ವಿವೇಕಾನಂದರ ಜೀವನವು ಆಧ್ಯಾತ್ಮಿಕತೆ, ಸಹಾನುಭೂತಿ ಮತ್ತು ಸಾಮಾಜಿಕ ಸುಧಾರಣೆಯ ಸ್ವರಮೇಳವಾಗಿತ್ತು. ಅವರ ಬೋಧನೆಗಳು ಪ್ರಪಂಚದ ಮೇಲೆ ಅಳಿಸಲಾಗದ ಮುದ್ರೆಯನ್ನು ಬಿಟ್ಟಿವೆ, ವೈವಿಧ್ಯತೆಯಲ್ಲಿ ಏಕತೆಯ ಭಾವನೆಯನ್ನು ಬೆಳೆಸುತ್ತವೆ ಮತ್ತು ಉನ್ನತ ಆದರ್ಶಗಳ ಅನ್ವೇಷಣೆಯನ್ನು ಪ್ರೋತ್ಸಾಹಿಸುತ್ತವೆ. ಅವರ ಮಾತುಗಳು ಮತ್ತು ಕಾರ್ಯಗಳು ವ್ಯಕ್ತಿಗಳನ್ನು ಅಡೆತಡೆಗಳ ಮೇಲೆ ಏರಲು, ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸಲು ಮತ್ತು ಸಹಿಷ್ಣುತೆ, ಸಹಾನುಭೂತಿ ಮತ್ತು ಆಧ್ಯಾತ್ಮಿಕ ತಿಳುವಳಿಕೆಯು ಸರ್ವೋಚ್ಚವಾಗಿರುವ ಜಗತ್ತಿಗೆ ಶ್ರಮಿಸುವಂತೆ ಪ್ರೇರೇಪಿಸುತ್ತವೆ.

ಸ್ವಾಮಿ ವಿವೇಕಾನಂದರ ಜೀವನ ಮತ್ತು ವಿಚಾರಗಳ ಮೂಲಕ ಯುವಕರನ್ನು ಪ್ರೇರೇಪಿಸಿ, ಆ ಮೂಲಕ ದೇಶದ ಉತ್ತಮ ಭವಿಷ್ಯವನ್ನು ರೂಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ತಮ್ಮ ಸಂದೇಶಗಳ ಮೂಲಕ ಯುವಕರನ್ನು ಬಡಿದೆಚ್ಚರಿಸಿ, ದೇಶ ಕಟ್ಟುವ ಕಾಯಕದಲ್ಲಿ ತೊಡಗುವಂತೆ ವಿವೇಕಾನಂದರು ಕರೆ ನೀಡಿದ್ದರು. ಅವರ ತತ್ವಗಳನ್ನು ಪಾಲಿಸುವಂತೆ ಮಾಡುವುದು ಈ ದಿನ ಮುಖ್ಯ ಉದ್ದೇಶವಾಗಿದೆ.

ಕು. ಜ್ಯೋತಿ ಆನಂದ ಚಂದುಕರ ಬಾಗಲಕೋಟ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button