ಮೊಳಕಾಲ್ಮೂರು ತಾಲೂಕಿನ ಮಳೆ ಹಾನಿ ರೈತರಿಗೆ ನಷ್ಟ ಪರಿಹಾರ ಒದಗಿಸಿ ಕೊಡಬೇಕು ಎಂದು ಅಧಿಕಾರಿಗಳಿಗೆ – ಆಗ್ರಹ ಪಡಿಸಿದ ರೈತ ಸಂಘ.
ಮೊಳಕಾಲ್ಮುರು ಅ.25
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ದಶಕಗಳಿಂದ ಬಾರದ ಮಳೆರಾಯ ಅಕ್ಟೋಬರ್ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಾಗಿ ಮಳೆ ಬಂದು ಕೆರೆ ಕಟ್ಟೆಗಳು, ಚೆಕ್ ಡ್ಯಾಂಗಳು, ಹಳ್ಳ ಸರೋವರಗಳು ಮತ್ತು ತಾಲ್ಲೂಕಿನ ರಂಗಯ್ಯನದುರ್ಗ ಡ್ಯಾಂ ತುಂಬಿ ಹರಿಯುತ್ತಿದ್ದು, ಎಡೆ ಬಿಡದೇ ಬರುವ ಮಳೆಯಿಂದ ರೈತರ ಬೆಳೆಗಳು ಕೊಚ್ಚಿ ಹೋಗಿದೆ ಎಂದು, ಜಿಲ್ಲಾ ಪ್ರಾಧನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ ತಿಳಿಸಿದರು. ಪಟ್ಟಣದ ಆಡಳಿತ ಸೌಧ ಆವರಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು, ಕೈಗೆ ಬಂದ ಬೆಳೆಗಳು ರೈತರ ಕೈಗೆ ಸಿಗದೇ ಇರುವುದು ತಾಲ್ಲೂಕಿನಾದ್ಯಾಂತ ಹೆಚ್ಚಿನ ಮಳೆ ಯಾಗಿರುವದ ರಿಂದ ಮಾಳಿಗೆ ಮನೆಗಳು, ಸೀಟಿನ ಮನೆಗಳು ಶೆಡ್‌ಗಳು ನೀರಿನ ಒತ್ತಡಕ್ಕೆ ಬಿರುಕು ಬಿಟ್ಟು ಕುಸಿದು ಬಿದ್ದು ನೆಲ ಸಮ ವಾಗಿರುತ್ತವೆ. ರೈತರಿಗೆ ದಿಕ್ಕು ತೋಚದಂತಾಗಿದೆ. ಇಷ್ಟೆಲ್ಲಾ ಗೊತ್ತಿದ್ದರೂ ಸಹ ಜಿಲ್ಲಾ ಅಧಿಕಾರಿಗಳು ತಾಲೂಕು ಆಡಳಿತ ಅಧಿಕಾರಿಗಳು ಆಗಲಿ ಹಳ್ಳಿಗಳಿಗೆ ರೈತರ ಜಮೀನುಗಳಿಗೆ ಭೇಟಿ ಕೊಡದೆ ಬೆಜವಾಬ್ದಾರಿ ತನದ ವರ್ತನೆ ಆಗಿರುತ್ತದೆ. ಇದನ್ನು ಮನಗೊಂಡು ಮಾನ್ಯ ಕ್ಷೇತ್ರದ ಶಾಸಕರು ಸರ್ಕಾರಕ್ಕೆ ಒತ್ತಡ ಏರಿ ಇಲಾಖೆಯ ಅಧಿಕಾರಿಗಳಿಗೆ ಸಲಹೆ ಕೊಡ ಬೇಕು ರೈತರ ಸಮಸ್ಯೆಗಳನ್ನು ಪರಿಶೀಲಿಸಿ ನಷ್ಟ ಪರಿಹಾರವನ್ನು ಸೂಕ್ತವಾದ ಪರಿಹಾರ ರೈತರಿಗೆ ಸಿಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸುತ್ತದೆ ಎಂದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ನೇರ್ಲಳ್ಳಿ ರವಿಕುಮಾರ್ ಮಾತನಾಡಿ ತಾಲ್ಲೂಕಿ ನಾದ್ಯಾಂತ ಎಲ್ಲಾ ಕೆರೆಗಳು ಮತ್ತು ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿದ್ದು, ರೈತರ ಜಮೀನುಗಳಿಗೆ ಹೋಗುವ ಕಾಲುವೆಗಳು ಗಿಡ ಗಂಟೆಗಳು ಮತ್ತು ಉಳು ತುಂಬಿ ಕೊಂಡಿದ್ದು ಸಣ್ಣ ನೀರಾವರಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿ ಹಾಗೂ ತಾಲ್ಲೂಕು ಪಂಚಾಯಿತಿ ಇಲಾಖೆಗಳು ಈ ಕಾಲುವೆಗಳನ್ನು ದುರಸ್ಥಿ ಮಾಡಬೇಕೆಂದು ಒತ್ತಾಯಿಸಿ ಮೊಳಕಾಲ್ಮುರು ತಾಲ್ಲೂಕಿನದ್ಯಾಂತ ಕುರಿ, ಮೇಕೆ ಮತ್ತು ಧನ ಕರುಗಳು ನೀರಿನಲ್ಲಿ ಕೊಚ್ಚಿ ಹೋಗಿ, ಕೆರೆ ಕಟ್ಟೆಗಳ ಪಾಲಾಗಿರುತ್ತವೆ ಆದ್ದರಿಂದ ಸರ್ಕಾರ ತಕ್ಷಣವೇ ಪರಿಹಾರ ಕೊಡಿಸಬೇಕು ಎಂದು ತಿಳಿಸಿದರು. ರೈತರ ಬೆಳೆಗಳು ನಾಶವಾಗಿರುತ್ತವೆ. ರೈತರಿಗೆ ಸೂಕ್ತ ಪರಿಹಾರ ಮತ್ತು ಇನ್ಯೂರೆನ್ಸ್ ಕಟ್ಟಿದ ರೈತರಿಗೆ ಬೆಳೆ ಪರಿಹಾರವನ್ನು ರೈತರಿಗೆ ಕಂಪನಿವರು ಅಥವಾ ಸರ್ಕಾರದ ವರಾಗಲಿ ತಕ್ಷಣವೇ ಕೊಡಬೇಕು. ಮೊಳಕಾಲ್ಮುರು ಪಟ್ಟಣದಲ್ಲಿ ಬರುವ ಎಲ್ಲಾ ಚರಂಡಿ ನೀರು ಗುಡ್ಡ ಜೋಗು ನೀರು ಮತ್ತು ಶ್ರೀ ನುಂಕೆ ಮೇಲೆ ಬೆಟ್ಟದ ಮೇಲೆ ಕೆರೆ ಕಟ್ಟೆಗಳು ಕೋಡಿ ಬಿದ್ದು ನೀರು ಪಟ್ಟಣದ ಪಿ.ಟಿ ಹಟ್ಟಿ, ಸೋಮನಹಳ್ಳಿ, ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿರುತ್ತದೆ ಮತ್ತು ಇದಕ್ಕೆ ಸೂಕ್ತ ಪರಿಹಾರ, ಕೊಡಬೇಕು ಹೊಸ ಸಂತೆ ಮೈದಾನದಲ್ಲಿ ಜೋಗು ನೀರು ಬಂದು ಕೆಸರು ಗದ್ದೆಯಾಗಿ ರೈತರು ಮತ್ತು ವ್ಯಾಪಾರಸ್ಥರಿಗೆ ಬಹಳ ತೊಂದರೆಯಾಗಿ ಸಂತೆಯನ್ನು ರಸ್ತೆ ಬದಿಯಲ್ಲಿ ಮಾಡುತ್ತಿದ್ದಾರೆ. ಅದಕ್ಕೆ ಪಟ್ಟಣ ಪಂಚಾಯಿತಿಯವರು ಚರಂಡಿ, ರಸ್ತೆ ಮತ್ತು ಬೀದಿ ದೀಪ ಸೂಕ್ತ ವ್ಯವಸ್ಥೆ ಮಾಡಬೇಕು ಡಿ.ಸಿ ನಾಗರಾಜ, ರೈತ ಮುಖಂಡರು, ರಾಂಪುರ ಈ ಸಂದರ್ಭದಲ್ಲಿ ಬಸವರಾಜ, ಪಾಪಯ್ಯ, ರ‍್ಲಹಳ್ಳಿ ಅಜ್ಜಣ್ಣ, ಪಿ.ಟಿ. ಮುಕ್ಕಣ್ಣ, ತಿಪ್ಪೇಶಿ, ಈರಣ್ಣ, ಶಿವಪ್ಪ, ದೊಡ್ಡಸೂರಯ್ಯ, ರಾಮ, ಬಜ್ಜಪ್ಪ, ಸೂರಮ್ಮನಹಳ್ಳಿ ರಾಜಣ್ಣ, ಪ್ರಕಾಶ್, ಹೇಮಣ್ಣ, ಚೌಳಕೆರೆ ಬಸವರಾಜ, ತಿಪ್ಪೇರಯ್ಯನಹಟ್ಟಿ ಬಾಲರಾಜ್ ಪಿ.ಟಿ ವೆಂಕಟೇಶ್, ಉಮೇಶ್, ರ‍್ಲಹಳ್ಳಿ ದಡ್ಡಯ್ಯ, ಹೇಮಣ್ಣ, ರಾಯಪುರ ಮರಲಿಂಗಪ್ಪ,ಚಿತ್ರ ದಿ. 23 ಎಂ.ಎಲ್.ಕೆ 01 ಮೊಳಕಾಲ್ಮುರು ಪಟ್ಟಣದ ಆಡಳಿತ ಸೌಧ ಆವರಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್ ಜಗದೀಶ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು