ಬೀದಿ ವ್ಯಾಪಾರಿಗಳಿಗೆ ತೆರವು ಗೊಳಿಸಿದನ್ನು ಖಂಡಿಸಿ ಪ್ರತಿಭಟನೆ.
ಸಿಂದಗಿ ಅ.25

ನಗರದ ಬಸವೇಶ್ವರ ವೃತ್ತದ ಸಮೀಪ ಇರುವ ಬೀದಿ ಬದಿಯ ವ್ಯಾಪಾರಿಗಳಿಗೆ ತೆರವು ಗೊಳಿಸುವ ಕಾರ್ಯ ಆರಂಭಿಸಿರುವ ಪುರಸಭೆಯ ಅಧ್ಯಕ್ಷರಿಗೆ ಬೀದಿ ಬದಿಯ ವ್ಯಾಪಾರಿಗಳಿಗೆ ಬದಕಲು ಅವಕಾಶ ಮಾಡಿ ಕೊಡಬೇಕು ಮತ್ತು ಅವರಿಗೆ ಬದಕಲು ಅವಕಾಶ ಕೊಡಬೇಕೆಂದು ವಿನಂತಿ ಮಾಡಲಾಯಿತು. ಹೋರಾಟದ ನೇತೃತ್ವವನ್ನು ತಾಲ್ಲೂಕಿನ ಮಾಜಿ ಶಾಸಕರಾದ ರಮೇಶ ಭೂಸನೂರ ಅವರು ನೇತೃತ್ವದ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಡವರಿಗೆ ಕಿತ್ತಿಸುವುದು ಬಾಳ ಅನ್ಯಾಯ ಒಂದು ವೇಳೆ ನೀವು ತೆರವು ಕಾರ್ಯಾಚರಣೆ ಮುಂದುವರಿದರೆ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭ ಮಾಡಬೇಕಾತ್ತದೆ.

ಕೂಡಲೇ ತೆರವು ಕಾರ್ಯಾಚರಣೆ ನಿಲ್ಲಿಸಬೇಕು ಎಂದು ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷರಾದ ಸಂತೋಷ್ ಪಾಟೀಲ ಹಾಗೂ ಬಿಜೆಪಿ ಮುಖಂಡರಾದ, ಶ್ರೀಶೈಲ ಚಳ್ಳಗಿ ಪೀರು ಕೆರೂರ ಶಿವಕುಮಾರ್ ಬಿರಾದಾರ ಮಾತನಾಡಿದರು. ಶಿವಪುತ್ರ ಮಲ್ಲೇದ ಸೋಮು ಕೊಪ್ಪ ಸತೀಶ ದೇವರ ನಾವದಗಿ ಪೈಜನ್ ಮಾಲಗಂವಕಾರ ದತ್ತು ನಾಲ್ಕಮನ ಪ್ರಭು ಕಂಬಾರ ಶಕೀಲ್ ವಾಲೀಕಾರ ಹಾಗೂ ತಾರಾಬೀ ಗುಂದಗಿ, ಸಾಹೇಬಿ ಗೋಳಸಾರ, ಬಿಸಮಿಲ್ಲಾ, ಬಾಗವಾನ, ಅಂಜುಮಾ ಬಾಗವಾನ, ಈ ಹೋರಾಟದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ