ಐಹೊಳೆಯಲ್ಲಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನ.
ಐಹೊಳೆ ಅ.25
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಐಹೂಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಹೊಳೆ ಗ್ರಾಮದಲ್ಲಿ 2025-26 ನೇ. ಕಾರ್ಮಿಕರ ಕ್ರಿಯಾಯೋಜನೆ ತಯಾರಿಸುವ ನಿಟ್ಟಿನಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ಹಳ್ಳ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, ಕೂಲಿ ಕಾರ್ಮಿಕರಿಗೆ ವೈಯಕ್ತಿಕ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ಬೇಡಿಕೆ ಪಡೆಯಲಾಯಿತು. ಕಾಯಕ ಬಂಧುಗಳಿಗೆ QR ಕೋಡ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತಿಳಿಸಿ ಕೊಡಲಾಯಿತು. ಬಳಿಕ ಬಿಎಫ್ ಟಿ ರಾಜು ವಾಲಿಕಾರ್ ಮಾತನಾಡಿ, ಅರ್ಜಿ ಸಲ್ಲಿಸಿದ ಮೇಲೆ ಕಾಮಗಾರಿ ಆಯ್ಕೆ ವಿಧಾನವನ್ನು ತಿಳಿಸಿ ಕೊಟ್ಟರು. ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದ್ದು, ಗ್ರಾಮಸ್ಥರು ತಮ್ಮಗೆ ಬೇಕಾದ ಕಾಮಗಾರಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯಿತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಅಕೌಂಟೆಂಟ್ ಹನುಮಂತ ಕುರಿ, ಬಿಎಫ್ ಟಿ ರಾಜು ವಾಲಿಕಾರ್, ಕಾಯಕಮಿತ್ರ ಸುಮಂಗಲಾ ಮಾದರ, ಕಾಯಕ ಬಂಧುಗಳು ಉಪಸ್ಥಿತರಿದ್ದರು.