ಇಪ್ಪತ್ತು ವರ್ಷಗಳು ಕಳೆದರೂ ಕಲಕೇರಿಗೆ ಬಸ್ ನಿಲ್ದಾಣದ ಭಾಗ್ಯ ಇಲ್ಲ – ಜಿಲ್ಲಾ ಉಸ್ತುವಾರಿ ಸಚಿವರು ಕಣ್ಣು ಹಾಯಿಸಿವರೋ…..?
ಕಲಕೇರಿ ಅ.26

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಬಸ್ ನಿಲ್ದಾಣದಕ್ಕೆ ಅಧಿಕಾರಿಗಳು ಸಂಜೆ 7 ಗಂಟೆಗೆ ವಿಜಯಪುರದ ಎ.ಡಬ್ಲ್ಯೂ ಅಧಿಕಾರಿಗಳು ಆದ ಮಲ್ಲಿಕಾರ್ಜುನ್ ಬಿರಾದಾರ್ ಇವರು ಬಸ್ ನಿಲ್ದಾಣದ ಕೆಲಸದ ಬಗ್ಗೆ ವಿವರಗಳನ್ನು ತಿಳಿಸಿದರು. ನೀವು ಸುದ್ದಿ ಮಾಡಿದ್ದನ್ನ ಅದನ್ನ ನಾನು ಮೇಲಾಧಿಕಾರಿಗಳಿಗೆ ಕಳಿಸಿದ್ದೇನೆ ಆದರೆ ಟೆಂಡರ್ ಪಾಸಾಗಿ ಬಂತು ಅಂದರೆ ಕಲ್ಕೇರಿ ಬಸ್ ನಿಲ್ದಾಣದ ಕೆಲಸ ಪ್ರಾರಂಭ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಅನೇಕ “ಊರಿನ ಗ್ರಾಮಸ್ಥರು ಸೇರಿದಂತೆ 20 ವರ್ಷಗಳ ಕಾಲ ಕಳೆದು ಹೋಯಿತು”. ಇಲ್ಲಿವರೆಗೂ ಹೀಗೆ ಇದೆ ಇದು ಬಸ್ ನಿಲ್ದಾಣದ ಪರಿಸ್ಥಿತಿ ಮಳೆ ಬಂದರೆ ಸಾಕು ಕೆಸರುಗದ್ದೆ ಆಗುತ್ತದೆ ಎಂದು ಅನೇಕ ಊರಿನ ಗ್ರಾಮಸ್ಥರು ತಿಳಿಸಿದರು.ಯಾವ ಅಧಿಕಾರಿಗಳು ಬಂದರೂ ಇದನ್ನೇ ಹೇಳುತ್ತಾರೆ ಹೋಗುತ್ತಾರೆ ಸರ್ ಆದರೆ ನಮ್ಮ ಕಲಕೇರಿ ಬಸ್ ನಿಲ್ದಾಣದ ಕೆಲಸ ಯಾವಾಗ ಪ್ರಾರಂಭ ಮಾಡುತ್ತೀರಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಕೇಳಿದರು.

ಆದರೆ ಅಧಿಕಾರಿಗಳು ಎಸ್ಟಿಮೇಟ್ ಕಾಫಿ ನಾನು ಮೇಲೆ ಅಧಿಕಾರಿಗಳಿಗೆ ಕಳಿಸಿದ್ದೇನೆ. ಅಪ್ರುಲ್ ಆಗಿ ಬಂತು ಅಂದ್ರೆ ನಾನು ಕೆಲಸ ಪ್ರಾರಂಭ ಮಾಡುತ್ತೇನೆ. ಎಂದು ಅಧಿಕಾರಿಗಳು ತಿಳಿಸಿದರು. ಈಗಲಾದರೂ ಅಧಿಕಾರಿಗಳು ಕಲಕೇರಿ ಬಸ್ ನಿಲ್ದಾಣ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ಈ ಬಸ್ ನಿಲ್ದಾಣದ ಒಳಗೆ ಸಿ.ಸಿ ಕ್ಯಾಮೆರಾ ಅಳವಡಿಸುವಂತೆ ಲಗೇಜ್ ಮತ್ತು ಇತರೆ ಅಮೂಲ್ಯ ವಸ್ತುಗಳ ಮೇಲೆ ನಿಗಾ ವಹಿಸುವಂತೆ ರೈತರು ಹಾಗೂ ಸಾರ್ವಜನಿಕರು ಅಧಿಕಾರಿಗಳಲ್ಲಿ ವಿನಂತಿಸಿ ಕೊಂಡರು. ಇನ್ನೂ ನಾಲ್ಕು ಟಾಯ್ಲೆಟ್ ರೂಮ್ ಮಾಡಬೇಕೆಂದು ಅಧಿಕಾರಿಗಳಲ್ಲಿ ಕೇಳಿ ಕೊಂಡರು. ರೈತ ಸಂಘದ ಅಧ್ಯಕ್ಷರಾದ ಮೈಬೂಬಬಾಷ ಮನಗೂಳಿ. ಸಂಜು ಉತಾಳ ಅಂಬೇಡ್ಕರ್ ಸೈನ್ಯ ಉಪಾಧ್ಯಕ್ಷರು.ರಾಮನಗೌಡ ಒಣಕ್ಯಾಳ. ಮೈಬೂಬ್ ಉಸ್ತಾದ್. ರಾಕೇಶ್ಮಸಾಕ್ ಭಗವಾನ್. ಪ್ರಕಾಶ್ ರಕ್ಕಸಿಗಿ. ಮತ್ತು ಕೌದಿ.ಇನ್ನೂ ಅನೇಕರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ