ನೂತನ ಅಧ್ಯಕ್ಷ ಉಪಾಧ್ಯಕ್ಷರ ಪದಗ್ರಹಣ.
ಮರಿಯಮ್ಮನಹಳ್ಳಿ ಸ.07

ಪಟ್ಟಣ ಪಂಚಾಯಿತಿ 32 ತಿಂಗಳ ನಂತರ ಅಧ್ಯಕ್ಷ ಉಪಾಧ್ಯಕ್ಷ ಗಾದಿ ಆಗಸ್ಟ್ 30 ರಂದು ಅವಿರೋಧವಾಗಿ ಆಯ್ಕೆಯಾಗಿದ್ದು. ನೂತನ ಅಧ್ಯಕ್ಷ ಆದಿಮನಿ ಹುಸೇನ್ ಭಾಷ, ಉಪಾಧ್ಯಕ್ಷರಾದ ಲಕ್ಷ್ಮೀ ಆರ್ ಇವರು ಪಂಚಾಯಿತಿಯ ಸದಸ್ಯರೊಂದಿಗೆ ಮತ್ತು ಪಕ್ಷದ ಮುಖಂಡರ ಸಮ್ಮುಖದಲ್ಲಿ ಇಂದು ಅಧಿಕಾರ ವಹಿಸಿಕೊಂಡು ಪಟ್ಟಣ ಪಂಚಾಯಿತಿಗೆ ಪದಗ್ರಹಣ ಮಾಡಿದರು.ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಎರಡು ವರೆ ವರ್ಷಗಳ ಅವಧಿಗೆ ಆಯ್ಕೆಯಾಗಿದ್ದೇವೆ ಶಾಸಕರ ಎಲ್ಲಾ ಸದಸ್ಯರ ಮತ್ತು ಪಟ್ಟಣದ ಜನರ ಸಹಾರದೊಂದಿಗೆ ಅಭಿವೃದ್ಧಿ ಪಡಿಸ ಬೇಕೆನ್ನುವ ಗುರಿ ಹೊಂದಿದ್ದೇವೆ ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಸಹಕಾರ ಕೋರಿದರು.ಪಕ್ಷ ಯಾವುದಾದರೇನು ಶಾಸಕರು ನಮಗೂ ಶಾಸಕರೇ ಪಟ್ಟಣದ ಅಭಿವೃದ್ಧಿಗೆ ಶಾಸಕರೊಂದಿಗೆ ವಿಶ್ವಾಸದಿಂದಿದ್ದು ಅಭಿವೃದ್ಧಿ ಕೆಲಸ ಮಾಡಲು ನಾವು ಸದಾ ಸಹಕಾರಿ ಗಳಾಗಿದ್ದೇವೆ. ಅಭಿವೃದ್ಧಿಗೆ ಹೆಚ್ಚು ಹೊತ್ತು ಕೊಟ್ಟರೆ ನಮ್ಮ ಊರು ಬೆಳೆಯುತ್ತದೆ. ಅಭಿವೃದ್ಧಿಗಾಗಿ ನಾವೆಲ್ಲರೂ ಸಹ ಅವರ ಜೊತೆಗಿರುತ್ತೇವೆ. ಪಟ್ಟಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಅಗತ್ಯತೆ ಇದೆ 2024 ಮುಗಿಯುವುದ ರೊಳಗಾಗಿ ಪ್ರತಿಯೊಂದು ಮನೆಗೂ ತುಂಗಭದ್ರಾ ನದಿಯ ವಾಟರ್ ಕೊಡುವ ವ್ಯವಸ್ಥೆ ಮಾಡಲಾಗುವುದು. ಪಟ್ಟಣದ ತ್ಯಾಜ್ಯ ವಿಲೇವಾರಿಗಾಗಿ ನಂದಿಬಂಡಿ ಗ್ರಾಮ ವ್ಯಾಪ್ತಿಯಲ್ಲಿ 3.80 ಎ. ಭೂಮಿಯನ್ನು ಮತ್ತು ಅದರ ಅಭಿವೃದ್ಧಿಗಾಗಿ ಅಂದಾಜು 4 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಅದನ್ನು ತ್ವರಿತ ಗತಿಯಲ್ಲಿ ಟೆಂಡರ್ ಕರೆದು ಕಾರ್ಯ ರೂಪಕ್ಕೆ ತರಲಾಗುವುದು. ಮತ್ತು ಪ್ರತ್ಯೇಕವಾಗಿ ಪಟ್ಟಣ ಪಂಚಾಯತಿ ಕಾರ್ಯಾಲಯವನ್ನು ನಿರ್ಮಾಣ ಮಾಡಲಾಗುವುದು. ಮತ್ತು ಸಂತೆ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಫಾರಂ-3 ಸಮಸ್ಯೆ ಕುರಿತು ಕೇಳಿದಾಗ ಇಲ್ಲಿನ ಬಹುತೇಕರು ನಾಣಿಕೆರೆ ತುಂಗಭದ್ರ ಮುಳುಗಡೆಯಾದಾಗ ಮರಿಯಮ್ಮನಹಳ್ಳಿಗೆ ಶಿಫ್ಟ್ ಆಗಿರುವಂತವರು ಇಲ್ಲಿನವರಿಗೆ ಯಾವುದೇ ಮೂಲ ದಾಖಲೆಗಳು ಇರುವುದಿಲ್ಲ 18 ವಾರ್ಡುಗಳಲ್ಲಿ ಕೆಲವೊಂದು ವಾರ್ಡ್ ಗಳಿಗೆ ಮಾತ್ರ ಯಾಗಂಟಿ ಪಟ್ಟಗಳನ್ನು ಕೊಟ್ಟಿರುತ್ತಾರೆ, ಪಟ್ಟಣದಲ್ಲಿ 25 ಸಾವಿರ ವೋಟರ್ಸ್ ಗಳಿದ್ದು, ಸುಮಾರು 45 ಸಾವಿರ ಜನಸಂಖ್ಯೆ ಇದೆ ಇಂಥ ಸಂದರ್ಭದಲ್ಲಿ ಮೂಲ ದಾಖಲೆಗಳು ಎಲ್ಲಿಂದ ತರಲು ಸಾಧ್ಯವಾಗುತ್ತದೆ. ಹಾಗಾಗಿ ವಿಚಾರವನ್ನು ಮುಖ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಫಾರಂ -3 ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಪತ್ರಿಕೆಯೊಂದಿಗೆ ತಿಳಿಸಿದರು. ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷರಾದ ಲಕ್ಷ್ಮಿ ಆರ್ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ