ಮುಖ್ಯ ಶಿಕ್ಷಕರಾದ ಕೆ.ಹೆಚ್. ಜಗನ್ನಾಥ್ ರವರಿಗೆ – ಬೀಳ್ಕೊಡುಗೆ ಸಮಾರಂಭ.
ಚಳ್ಳಕೆರೆ ಆ.23

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಿಹಳ್ಳಿಯಲ್ಲಿ ಇಂದು ಕೆ.ಏಚ್ ಜಗನ್ನಾಥ್ ರವರಿಗೆ ಗ್ರಾಮದ ಮುಖಂಡರು, ಎಸ್.ಡಿ.ಎಂ.ಸಿ ಹಾಗೂ ಎಲ್ಲಾ ಹಳೇಯ ವಿದ್ಯಾರ್ಥಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ಹಮ್ಮಿ ಕೊಳ್ಳಲಾಗಿತ್ತು. ಶ್ರೀಯುತ ಕೆ. ಹೆಚ್. ಜಗನ್ನಾಥ್ ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಹಳ್ಳಿ ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕಮ್ಮನಹಳ್ಳಿ ಶಾಲೆಗೆ ವರ್ಗಾವಣೆ ಆದ ಪ್ರಯುಕ್ತ ಇಂದು ಬೀಳ್ಕೊಡುಗೆ ಸಮಾರಂಭ ನಡೆಯಿತು,

ಈ ಸಂದರ್ಭದಲ್ಲಿ ಮಾತನಾಡಿ ಈ ಗ್ರಾಮದ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತುಂಬಾ ಶ್ರಮ ವಹಿಸಿ ಕಾರ್ಯ ನಿರ್ವಹಿಸಿದ್ದೇನೆ, ಅದೇ ರೀತಿ ಕೋಡಿಹಳ್ಳಿ ಗ್ರಾಮದ ಜನರ ಸಹಕಾರ, ಅಭಿಮಾನ, ಪೋಷಕರ ಸಹಕಾರ ತುಂಬಾ ಚೆನ್ನಾಗಿತ್ತು, ಆದರೆ ಅನಿವಾರ್ಯ ಕಾರಣಾಂತರಗಳಿಂದ ನಾನು ಬೇರೆ ಶಾಲೆಗೆ ವರ್ಗಾವಣೆ ಆಗಿ ಹೋಗುತ್ತಿದ್ದೇನೆ, ಈ ಶಾಲೆಯು ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿ ಮಾದರಿ ಶಾಲೆಯಾಗಿ ಕೋಡಿಹಳ್ಳಿ ಗ್ರಾಮಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು, ಈ ಶಾಲೆಯ ಎಲ್ಲ ಸಹ ಶಿಕ್ಷಕರ ಸಹಕಾರ,ಪ್ರೀತಿ ವಿಶ್ವಾಸ, ಬಿಸಿಯೂಟ ತಯಾರಕ ಸಿಬ್ಬಂದಿ ವರ್ಗ ಹಾಗೂ ಈ ಗ್ರಾಮದ ಜನರ ಸ್ನೇಹ ಸಂಗಮ, ಬಾಂಧವ್ಯ, ಮಮತೆ, ಪ್ರೀತಿ ವಿಶ್ವಾಸ, ಗುರುಗಳಿಗೆ ನೀಡುವ ಗೌರವ, ಸಹೋದರತೆ, ಸಮಾನತೆ, ಭ್ರಾತೃತ್ವ ಇವೆಲ್ಲವನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ, ಹಾಗೆ ಇವೆಲ್ಲವೂ ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳು ಎಂದು ಭಾವುಕರಾದರು.ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾಗರಾಜ್ ಡಿ, ಉಪಾಧ್ಯಕ್ಷರಾದ ಶಿವಾರೆಡ್ಡಿ, ಮತ್ತು ಎಲ್ಲ ಸದಸ್ಯರು, ಬಂಜಗೆರೆ ಕ್ಲಸ್ಟರ್ ನ ಶಾಲೆಗಳ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಕೋಡಿಹಳ್ಳಿ ಗ್ರಾಮದ ಪ್ರಮುಖ ಮುಖಂಡರಾದ ದೊಡ್ಡ ಓಬಯ್ಯ ಸಣ್ಣಓಬಣ್ಣ, ಬಸವರಾಜ್, ಲಿಂಗರಾಜ್.ಡಿ, ತಿಪ್ಪೇರುದ್ರಪ್ಪ, ಮುಂತಾದವರು ಭಾಗವಹಿಸಿದ್ದರುಶ್ರೀಯುತ ಕೆ.ಹೆಚ್ ಜಗನ್ನಾಥ್ ಮುಖ್ಯೋಪಾಧ್ಯಾಯರು ಇವರನ್ನು ಗೌರವದಿಂದ ಸನ್ಮಾನ ಮಾಡಲಾಯಿತು,

ಎಲ್ಲ ಗ್ರಾಮದ ಮುಖಂಡರಿಗೆ ಹಾಗೂ ಎಸ್.ಡಿ.ಎಂ.ಸಿ ಸದಸ್ಯರಿಗೆ ಸನ್ಮಾನಿಸಲಾಯಿತು, ಇದೆ ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ರತ್ನಮ್ಮ ಇವರಿಗೆ ಸೇವಾ ಅನುಭವ ಮತ್ತು ಜ್ಯೇಷ್ಠತೆ ಆಧಾರದ ಮೇಲೆ ಈ ಶಾಲೆಯ ಮುಂದಿನ ಪ್ರಭಾರಿ ಮುಖ್ಯ ಶಿಕ್ಷಕರಾಗಿ ಮುಂದು ವರಿಯುವಂತೆ ಜವಾಬ್ದಾರಿ ವಹಿಸಲಾಯಿತು, ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಸುಶೀಲಮ್ಮ , ಬಸವರಾಜ ಜಿ.ಟಿ ಹಾಗೂ ಸುಪ್ರಿಯಾ ಹಾಜರಿದ್ದರು ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲ ಗ್ರಾಮಸ್ಥರಿಗೆ, ಹಿರಿಯರಿಗೆ,ಯುವಕರಿಗೆ, ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ, ಊಟದ ವ್ಯವಸ್ಥೆ ಮಾಡಲಾಗಿತ್ತು, ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ.