ವರುಣನ ಆರ್ಭಟಕ್ಕೆ ಬೆಳೆ ನಾಶ, ವಾಹನ ಸಂಚಾರ ಅಸ್ತವ್ಯಸ್ತ, ಸಾರ್ವಜನಿಕರ – ಗೋಳು ಕೇಳೋರ್ಯಾರು….?
ಕೊಟ್ಟೂರು ಅ.26

ಪಟ್ಟಣದ ಸನ್ನಿಧಿ ಕಾಲೇಜ್ ಮುಂಭಾಗ ನರಕ ಯಾತನೆ ಅನುಭವಿಸುತ್ತಿರುವ ವಾಹನ ಚಾಲಕರು, ಜೀವ ಕೈಯಲ್ಲಿ ಹಿಡಿದು ಸಂಚಾರ ನಡೆಸುತ್ತಿರುವ ಇಲ್ಲಿನ ಸಾರ್ವಜನಿಕರು ಸಂಬಂಧಪಟ್ಟ ಶಾಸಕರಿಗೂ ಹಾಗೂ ಇಲ್ಲಿನ ಅಧಿಕಾರಿಗಳಿಗೂ ಇಡೀ ಶಾಪ ಹಾಕುತ್ತಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಜಾಣ ಕುರುಡರಂತೆ ಕಂಡರೂ ಕಾಣದಂತೆ ತಿಳಿದರೂ ತಿಳಿಯದಂತೆ ದಿನ ನಿತ್ಯ ನಿರ್ಲಕ್ಷತನವೇ ಎದ್ದು ಕಾಣುತ್ತದೆ.

ಈ ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆಗಳು ನೆಲಕಚ್ಚಿ ರೈತರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ, ರೈತರು ಸಾಲ ಶೂಲ ಮಾಡಿ ಹೇಗೋ ಅಲ್ಪ ಸಲ್ಪ ಮೆಕ್ಕೆಜೋಳ ಈರುಳ್ಳಿ ರಾಗಿ ಮುಂತಾದ ದವಸಗಳನ್ನು ಕೊಂಡ್ಯೋಯ ಬೇಕಾದರೆ ಕೊಟ್ಟೂರು ಪಟ್ಟಣದ ರಸ್ತೆಗಳ ಗುಂಡಿಗಳಿಂದ ಬೇಸತ್ ಹೋಗಿದ್ದಾರೆ ಇದಕ್ಕೆ ಕಾರಣ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯತನವೇ ಆಗಿದೆ. ಇವರಿಗೆ ತಕ್ಕ ಪಾಠ ಕಲಿಸ ಬೇಕಾದ ಶಾಸಕರೇ ನೀವೇನು ಮಾಡುತ್ತಿದ್ದೀರಿ? ಹೆಸರಿಗೆ ಮಾತ್ರ ನೂತನ ತಾಲೂಕು ಕೊಟ್ಟೂರು ಆದರೆ ದಿನೇ ದಿನೇ ಸೋಲಾರ್ ಪ್ಲಾಂಟ್ ರಿಯಲ್ ಎಸ್ಟೇಟ್ ಹಾಗೂ ವಿಂಡೋ ಫ್ಯಾನ್ ಹೀಗೆ ಹಲವಾರು ಕಂಪನಿಗಳ ಕಾಟದಿಂದ ಮುಂದುವರಿತ್ತಲೇ ಬಂದಿದೆ.

ಆದರೆ ಕೊಟ್ಟೂರು ಪಟ್ಟಣದ ಸುತ್ತ ಮುತ್ತಲಿನ ರಸ್ತೆಗಳ ಕಥೆ ವ್ಯಥೆಗಳಾಗಿವೆ, ವರುಣನ ಆರ್ಭಟಕ್ಕೆ ಬೆಳೆಗಳು ನಾಶವಾಗಿ ರಸ್ತೆಗಳ ಸಂಚಾರ ಸ್ಥಗಿತ ಗೊಂಡಿವೆ. ಕೊಟ್ಟೂರುಗೆ ಸಂಬಂಧಪಟ್ಟ ಶಾಸಕರುಗಳಾದ ಕೆ ನೇಮಿರಾಜ್ ನಾಯ್ಕ್ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಮತ್ತು ಎನ್.ಟಿ ಶ್ರೀನಿವಾಸ್ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಸಾರ್ವಜನಿಕರಲ್ಲಿ ಮತ ಹಾಕಿಸಿ ಕೊಂಡು ಗೆದ್ದು ಕೇವಲ ಪ್ರಚಾರ ಪ್ರಿಯರಾಗಿದ್ದಾರೆ ಅಭಿವೃದ್ಧಿಯಲ್ಲಿ ಶೂನ್ಯ. ಪ್ರಚಾರಕ್ಕೆ ಬೇಕಾಗಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮನ ಬಂದಂತೆ ಕುಣಿದು ಕುಪ್ಪಳಿಸುವುದು ನೋಡುವುದಾಗಿದೆ.

ನಮ್ಮ ಪಾಡು ಕೇಳುವರ್ಯಾರು ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಸುಮಾರು ದಿನಗಳಿಂದ ಸುರಿದ ಮಳೆಗೆ ಬೆಳೆಗಳು ನಾಶವಾಗಿವೆ ಮತ್ತು ಕೊಟ್ಟೂರು ಪಟ್ಟಣದ ಸುತ್ತಲೂ ರಸ್ತೆಗಳು ಗುಂಡಿಗಳಾಗಿವೆ ಇಲ್ಲಿನ ಅಧಿಕಾರಿಗಳು ಹಾಗೂ ಜನನಾಯಕರಾಗಲಿ ಎಚ್ಚೆತ್ತು ಕೊಳ್ಳಬೇಕು ಇಲ್ಲವಾದರೆ ರಸ್ತೆಗಳನ್ನು ಬಂದು ಮಾಡಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ರೈತ ಮುಖಂಡರಾದ ಜೈಪ್ರಕಾಶ್ ನಾಯಕ್ ಹಾಗೂ ರೈತ ಸಂಘದ ಕೊಟ್ಟೂರು ತಾಲೂಕು ಸಮಿತಿಯ ಕಾರ್ಯದರ್ಶಿ ಗುಡಿಯರ್ ಮಲ್ಲಿಕಾರ್ಜುನ್ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು