ಜಂಗಮ ಸಮಾಜ ಸಂಸ್ಥೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ.
ಕೂಡ್ಲಿಗಿ ಅ.26

ಜಂಗಮ ಸಮಾಜ ಸಂಸ್ಥೆ, (ರಿ) ಕೂಡ್ಲಿಗಿ ವತಿಯಿಂದ ಅ, 27 ರಂದು ಭಾನುವಾರ ಬೆಳಿಗ್ಗೆ 10:30 ಕ್ಕೆ ಜಂಗಮ ಸಮಾಜ ಸಂಸ್ಥೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಖಾನಾ ಹೊಸಹಳ್ಳಿ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಜಂಗಮ ಸಮಾಜ ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾಲೂಕು ಜಂಗಮ ಸಮಾಜ ಸಂಸ್ಥೆ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ಕಾರ್ಯಕ್ರಮದ ಸಾನಿಧ್ಯವನ್ನು ಶೀ ಮ.ನಿ.ಪ್ರ ಶಂಕರ ಸ್ವಾಮಿಗಳು, ಕ್ರಿಯ ಮೂರ್ತಿಗಳು, ಮಹಲ್ ಮಠ, ಕೊಟ್ಟೂರು ಇವರು ಸಾನಿಧ್ಯವನ್ನು ವಹಿಸುವರು. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ, ಶ್ರೀನಿವಾಸ್ ಎನ್.ಟಿ. ಅವರು ಉದ್ಘಾಟಿಸುವರು, ಎಚ್.ಎಂ ಗಂಗಾಧರ ಸ್ವಾಮಿ ಅಧ್ಯಕ್ಷರು ತಾಲೂಕು ಜಂಗಮ ಸಮಾಜ ಸಂಸ್ಥೆ ಕೂಡ್ಲಿಗಿ, ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಕೆ.ಎಂ ಶಶಿಧರ್ ಸ್ವಾಮಿ ಮಾಜಿ ಜಿ.ಪಂ ಸದಸ್ಯರು, ಐ.ದಾರುಕೇಶ್ ಉಪಾಧ್ಯಕ್ಷರು ಬಿಡಿಸಿಸಿ ಬ್ಯಾಂಕ್ ಹೊಸಪೇಟೆ, ಕೆ.ಎಂ ವೀರೇಶ್ ಕಾರ್ಯದರ್ಶಿ ಬಾಪೂಜಿ ವಿದ್ಯಾ ಸಂಸ್ಥೆ ಚಿತ್ರದುರ್ಗ, ಕೆ.ಎಂ ಮಂಜಕ್ಕ ಗ್ರಾ.ಪಂ ಸದಸ್ಯರು ಹೊಸಹಳ್ಳಿ, ಚಿದಾನಂದ ಸ್ವಾಮಿ ನಿವೃತ್ತ ಬಿಡಿಸಿಸಿ ಬ್ಯಾಂಕ್ ಸೂಪರಿಟೆಂಡೆಂಟ್, ವೈ ಎಂ ವೀರೇಶ್ವರಯ್ಯ ಅಧ್ಯಕ್ಷರು ಆರ್.ಎಸ್.ಎಸ್.ಎನ್ ಇಮಾಡಪುರ, ಕಾಶೀನಾಥಯ್ಯ ಜಿಲ್ಲಾಧ್ಯಕ್ಷರು ಜಂಗಮ ಸಮಾಜ ಸಂಸ್ಥೆ ವಿಜಯನಗರ, ಎಂ.ಒ ಮಂಜುನಾಥಯ್ಯ ಜಿಲ್ಲಾ ಉಪಾಧ್ಯಕ್ಷರು, ಮುಖ್ಯ ಭಾಷಣಕಾರರು ಎನ್.ಎಂ ರವಿಕುಮಾರ್ ಕವಿಗಳು, ಸಾಹಿತಿಗಳು ಎಂ.ಬಿ ಅಯ್ಯನಹಳ್ಳಿ, ಸೇರಿದಂತೆ ಜಂಗಮ ಸಮಾಜ ಸಂಸ್ಥೆಯ ತಾಲೂಕಿನ ಕಾರ್ಯದರ್ಶಿ, ಪದಾಧಿಕಾರಿಗಳು ಮತ್ತು ಜಂಗಮ ಸಮಾಜದ ಬಂಧುಗಳು, ಇತರೆ ಸಮುದಾಯದ ಮುಖಂಡರು ಭಾಗವಹಿಸುವರು ಎಂದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ