ನಿಂಬಳಗೇರೆ ಶ್ರೀ ಬಿ.ಕೆ.ವಿ ಪ್ರೌಢ ಶಾಲೆಯಲ್ಲಿ – ವಿಜ್ಞಾನ ಮೇಳ.
ಕೊಟ್ಟೂರು ಫೆ .28

ಶ್ರೀ ಬಿ.ಕೆ.ವಿ ಪ್ರೌಢ ಶಾಲೆ ನಿಂಬಳಗೇರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮಹಾಂತೇಶ್ ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಜ್ಞಾನಿಗಳೊಂದಿಗೆ ಸಂವಾದ ಮತ್ತು ವಸ್ತು ಪ್ರದರ್ಶನ ನಡೆಸಲಾಯಿತು.ಜಯಸಿಂಹ.ಪಿ ವಿಜ್ಞಾನಿಗಳು ಯೋಜನಾ ನಿರ್ದೇಶಕರು ಯು.ಆರ್. ರಾವ್ ಉಡಾವಣಾ ಕೇಂದ್ರ ಇಸ್ರೋ ಬೆಂಗಳೂರು ಮಾತಾನಾಡಿದ ಅವರು ವಿಜ್ಞಾನಿಗಳಾಗಲು ಬಾಲ್ಯದಿಂದಲೇ ಆಸಕ್ತಿ ತೋರಿಸಿ ಗುರಿ ಸಾಧನೆಯತ್ತ ತಮ್ಮ ವಿದ್ಯಾಭ್ಯಾಸ ಕೇಂದ್ರೀಕರಿಸ ಬೇಕು ವಿಜ್ಞಾನ ತಂತ್ರಜ್ಞಾನದಲ್ಲಿ ಹೊಸ ವಿಚಾರಗಳು ಬರುತ್ತವೆ. ನ್ಯಾನೋ ಟೆಕ್ನಾಲಜಿ ವೇಗ ಪಡೆಯುತ್ತಿದೆ. ಗಿಡ-ಮರ ನಾಶವಾಗಿ ಮುಂದೊಂದು ದಿನ ಭೂಮಿ ಇಲ್ಲವಾಗುತ್ತದೆ, ಅಷ್ಟರೊಳಗೆ ವಾಸಕ್ಕೆ ಯೋಗ್ಯವಾದ ಬೇರೆ ಮನೆ ಪತ್ತೆ ಹಚ್ಚ ಬೇಕಾಗಿದೆ ಇನ್ನೊಮ್ಮೆ ಚಂದ್ರನ ಮೇಲೆ ಮಾನವರನ್ನು ಇಳಿಸಿ ವಾತಾವರಣ ಸೃಷ್ಟಿಸಿ ಅಲ್ಲಿನ ಖನಿಜ ವಾತಾವರಣ ಪರೀಕ್ಷೆಗೆ ಯೋಚನೆಗಳಾಗಿವೆ.

ಚಂದ್ರಯಾನ-3 ಯಶಸ್ಸು ಒಂದು ರೋಮಾಂಚನಕಾರಿ ಅನುಭವ ವಿಜ್ಞಾನಿಗಳಿಗೆ ಮಾತ್ರವಲ್ಲದೆ ದೇಶಕ್ಕೆ ವಿಶ್ವಕಪ್ ಗೆದ್ದಿದ್ದಕ್ಕಿಂತಲೂ ಹೆಚ್ಚಿನ ಸಂಭ್ರಮ ತಂದು ಕೊಟ್ಟಿತು. ಇದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾವು ವಿಜ್ಞಾನಿಗಳಾಗ ಬೇಕು ಅನ್ನೋ ಭಾವನೆ ಹುಟ್ಟಿಕೊಂಡಿದೆ ಎಂದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಪದ್ಮನಾಭ ಕರಣಂ ಮುಖ್ಯ ಗುರುಗಳಾದ ಫಕೀರಪ್ಪ ವಿಜ್ಞಾನ ಶಿಕ್ಷಕರಾದ ಪತ್ರೇಶ್ ಬಣಕಾರ್ ಮತ್ತು ಎಲ್ಲಾ ಸಹ ಶಿಕ್ಷಕರು, ಗ್ರಾಮ ಪಂಚಾಯಿತಿ ಪಿ.ಡಿ.ಓ ಪ್ರಶಾಂತ್, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಎಸ್.ಡಿ.ಎಂ.ಸಿ ಅಧ್ಯಕ್ಷರು ಸದಸ್ಯರುಗಳು ಊರಿನ ಮುಖಂಡರು ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು