ಮಾನವೀಯತೆ ಮೆರೆದ ಸರ್ಕಾರಿ ಬಸ್ – ಚಾಲಕ ನಿರ್ವಾಹಕ.
ಖಾನಾ ಹೊಸಹಳ್ಳಿ ಅ.28
ಬೆಂಗಳೂರಿನಿಂದ ಚಿತ್ರದುರ್ಗದ ಮಾರ್ಗವಾಗಿ ಕಾರಟಗಿಗೆ ಸರ್ಕಾರಿ ಸಂಸ್ಥೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಯೊಬ್ಬರಿಗೆ ಹೆರಿಗೆ ನೋವು ಕಾಣಿಸಿ ಕೊಂಡಿದ್ದರಿಂದ ರಾಷ್ಟ್ರೀಯ ಹೆದ್ದಾರಿ 50 ರ ಖಾನಾ ಹೊಸಹಳ್ಳಿ ಸಮೀಪದ ಆಲೂರು ಆರೋಗ್ಯ ಕೇಂದ್ರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ರೊಂದಿಗೆ ಬಸ್ಸನ್ನು ಕೊಂಡೊಯ್ದು, ಹೆರಿಗೆ ನೋವು ಕಾಣಿಸಿ ಕೊಂಡ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲೆ ಮಾಡಿದರು. ದಾಖಲಿಸಿದ 10 ನಿಮಿಷದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ತಾಯಿ.ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ರಾಮನಗರ 14 ನೇ. ವಾರ್ಡ್ ನಿವಾಸಿ ಸುಲ್ತಾನ್ ಬಿ ಗಂಡ ರಾಜ ಭಕ್ಷಿ. ಗರ್ಭಿಣಿ ಮಹಿಳೆ ಯಾಗಿದ್ದಾಳೆ. ಸುಲ್ತಾನ್ ಬಿ ಅವರ ಪತಿ ರಾಜಭಕ್ಷಿಯು ಬೆಂಗಳೂರಿನ ಆಸ್ಪತ್ರೆಯಲ್ಲಿ ಕಿಡ್ನಿ ಸ್ಟೋನ್ ಚಿಕಿತ್ಸೆ ಗೊಳಗಾಗಿದ್ದ ರಿಂದ ಪತಿಯನ್ನು ನೋಡಿಕೊಂಡು ಶನಿವಾರ ತಮ್ಮ ಗ್ರಾಮಕ್ಕೆ ತೆರಳುವಾಗ ಚಿತ್ರದುರ್ಗ ದಿಂದ ಆಲೂರು ಮಧ್ಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಹೆರಿಗೆ ನೋವು ಕಾಣಿಸಿ ಕೊಂಡಿತ್ತು. ಈ ಮಹಿಳೆಯು ಹೆರಿಗೆ ನೋವಿನಿಂದ ನರಳುತ್ತಿರುವುದನ್ನು ಪ್ರಯಾಣಿಕರು ನೋಡಿ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಬಸ್ಸನ್ನು ತೆಗೆದು ಕೊಂಡು ಹೋಗಲು ಹೇಳಿದರು. ಇದೇ ಬಸ್ ನಲ್ಲಿ ತುರುವನೂರಿನ ನಾಗವೇಣಿ ಎಂಬ ನರ್ಸ್ ಈ ಮಹಿಳೆಯನ್ನು ಗಮನಿಸುತ್ತಿದ್ದು ರಾಷ್ಟ್ರೀಯ ಹೆದ್ದಾರಿ 50 ರ ಪಕ್ಕದಲ್ಲಿರುವ ಆಲೂರಿನ ಆರೋಗ್ಯ ಕೇಂದ್ರದ ನರ್ಸ್ ಆಗಿರುವ ಡಿ.ಸಿ ಶಿಲ್ಪ ಅವರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಆರೋಗ್ಯ ಕೇಂದ್ರಕ್ಕೆ ಕರೆದು ಕೊಂಡು ಬರುವಂತೆ ತಿಳಿಸಿದಾಗ ಸರ್ಕಾರಿ ಬಸ್ ಚಾಲಕ ಮತ್ತು ನಿರ್ವಾಹಕ ಬಸ್ಸಿನೊಂದಿಗೆ ಆಲೂರಿನ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಹೆರಿಗೆ ನೋವಿನಿಂದ ನೆರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಆರೋಗ್ಯ ವಾಗಿದ್ದಾರೆ. ಗರ್ಭಿಣಿ ಸ್ತ್ರೀಯನ್ನು ಆಸ್ಪತ್ರೆಗೆ ದಾಖಲೆ ಮಾಡಿ ಮಾನವೀಯತೆ ಮೆರೆದಿದ್ದ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಸಾರ್ವಜನಿಕರು ಮಹಿಳೆಯರು ಅಭಿನಂದನೆ ಸಲ್ಲಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ