ಯುವ ನಾಯಕರಾದ ಅಪ್ಪು ದೇಸಾಯಿ ಇವರ ಹುಟ್ಟು ಹಬ್ಬದ ನಿಮಿತ್ತವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಕಲಕೇರಿ ಜು.07

ಶ್ರೀ ಅಪ್ಪು ದೇಸಾಯಿ ಗೆಳೆಯರ ಬಳಗ ವತಿಯಿಂದ ಯುವ ನಾಯಕರಾದ ಶ್ರೀ ಅಪ್ಪು ದೇಸಾಯಿ ಇವರ ಹುಟ್ಟು ಹಬ್ಬದ ನಿಮಿತ್ಯವಾಗಿ ಕಲಕೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು. ಮತ್ತು ತುರಕನಗೇರಿ ಗ್ರಾಮದಲ್ಲಿ ಶ್ರೀ ಸಿದ್ದಗಂಗಾ ಅಕಾಡೆಮಿಯ ಸಂಸ್ಥೆಯ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಊರಿನ ಎಲ್ಲಾ ಯುವಕರು ಪಾಲ್ಗೊಂಡು ಅಪ್ಪು ದೇಸಾಯಿ ಇವರ ಹುಟ್ಟುಹಬ್ಬದ ನಿಮಿತ್ಯವಾಗಿ ಕಲಕೇರಿ ಗ್ರಾಮದ ಹಣಮಂತ ವಡ್ಡರ ಇವರು ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಿದರು.

ಸುಧಾಕರ್ ಅಡಿಕಿ ಇವರು ಕೂಡ ಅಪ್ಪು ದೇಸಾಯಿ ಇವರಲ್ಲಿ ಇದ್ದ ಗುಣಗಳು ಇವರಲ್ಲಿ ಜಾತಿ ಮತ ಯಾವುದು ಇಲ್ಲ ಎಲ್ಲರೂ ನನ್ನವರು ಎನ್ನುವ ಭಾವನೆಗಳು ಇವರಲ್ಲಿ ಇದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಸುರೇಶ್ ದೇಸಾಯಿ .ಅಶೋಕ ಭೋವಿ. ಪರಶುರಾಮ್ ವಡ್ಡರ. ಅಜೀಜ್ ಮುಲ್ಲಾ . ವಿನೋದ ವಡಿಗೇರಿ. ಪಂಚು ಮಠಪತಿ. ಮಲ್ಲಿಕಾರ್ಜುನ ಕಟ್ಟಿಮನಿ. ಮಹಮ್ಮದ ಯಾಳವಾರ. ಇನ್ನೂ ಅನೇಕರು ಈ ಹುಟ್ಟು ಹಬ್ಬದ ನಿಮಿತ್ಯವಾಗಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮತ್ತು ಶಾಲಾ ಮಕ್ಕಳಿಗೆ ನೋಟ್ಬುಕ್ಕು ವಿತರಣೆ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.