ಪತ್ರಕರ್ತ ವೆಂಕಟೇಶ ಸಂಪ ಅವರಿಗೆ “ಕಾವ್ಯ ಶ್ರೀ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ.
ಬೆಂಗಳೂರು ನ.04
ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ),ಕರ್ನಾಟಕ ನೀಡುವ ರಾಜ್ಯ ಮಟ್ಟದ “ಕಾವ್ಯಶ್ರೀ ರಾಜ್ಯೋತ್ಸವ” ಪ್ರಶಸ್ತಿಯನ್ನು ಪತ್ರಕರ್ತ, ಸಂಪದ ಸಾಲು ಪತ್ರಿಕೆ ಸಂಪಾದಕ, ವೆಂಕಟೇಶ ಎಸ್ ಸಂಪ ಅವರಿಗೆ ನವೆಂಬರ್ 3 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪ್ರಧಾನ ಮಾಡಲಾಯಿತು. ವೆಂಕಟೇಶ ಸಂಪ ಅವರು ಕಳೆದ 17 ವರ್ಷಗಳಿಂದ ಸಂಪದ ಸಾಲು ಪತ್ರಿಕೆ ನಡೆಸುತ್ತಿದ್ದು,ಇವರ ಸಾವಿರಾರು ಕತೆ, ಕವನ, ಲೇಖನಗಳು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟ ಗೊಂಡಿವೆ.
ಹಾಗೂ ಟಿ.ವಿ, ರೇಡಿಯೋಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದು, ಹಲವಾರು ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.ರಕ್ತದಾನ, ನೇತ್ರದಾನ, ಪರಿಸರ ಜಾಗೃತಿ ಅಭಿಯಾನ, ನೀರು ಉಳಿಸಿ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ವೆಂಕಟೇಶ ಸಂಪ ಅವರು, ಸಾವಯವ ಕೃಷಿಯಲ್ಲೂ ಸಾಧನೆ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಡಾ, ಆರೂಢ ಭಾರತೀ ಸ್ವಾಮಿಗಳು, ಡಾ, ಎಸ್ ರಾಮಲಿಂಗೇಶ್ವರ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ, ಜಿ ಶಿವಣ್ಣ, ಚಂದ್ರಶೇಖರ ಮಾಡಲಗೇರಿ, ಶಾಂತಿ ವಾಸು, ಸಾಹಿತಿ ಸುಬ್ಬು ಹೊಲೆಯಾರ್,ವಾದಿರಾಜ್,ಮಹೇಂದ್ರ ಮುನ್ನೋಟಾ ಇತರರು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ.