ಅನುದಾನ ದುರುಪಯೋಗ, ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಮನವಿ.

ಇಂಡಿ ಫೆಬ್ರುವರಿ.9

ಇಂಡಿ,ಚಡಚಣ, ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ನಡೆಯುವ ವಸತಿ ನಿಲಯಗಳ ನಿವ೯ಣೆಗಾಗಿ ಬಂದಿರುವ ಅನುದಾನ ದುರುಪಯೋಗ ವಾಗಿದ್ದು, ಅದನ್ನು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕೇಂದು -ದಲಿತ ರಕ್ಷಣಾ ವೇದಿಕೆ ಸಮಿತಿಯ ಪದಾಧಿಕಾರಿಗಳು ಇಂದು ಪಟ್ಟಣದ ಪ್ರವಾಸಿ ಮಂದಿರ ದಿಂದ ತಮಟೆ ಬಾರಿಸುತ್ತ ಟಿಪ್ಪು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತಗಳ ಮುಖಾಂತರ ಹಾದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಎಲ್ಲರೂ ಮಿನಿ ವಿಧಾನ ಸೌಧಕ್ಕೆ ಆಗಮಿಸಿದರು.ನಂತರ ಪ್ರತಿಭಟನೆಯ ಸಭೆ ಯನ್ನುದ್ದೇಶಿಸಿ ದಲಿತ ರಕ್ಷಣಾ ವೇದಿಕೆ ಸಮಿತಿಯ ಜಿಲ್ಲಾಧ್ಯಕ್ಷರಾದ ಧಮ೯ರಾಜ ಎಸ್ ಸಾಲೋಟಗಿ ಮಾತನಾಡಿ ಇಂಡಿ, ಚಡಚಣ ತಾಲೂಕುಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸುವ ವಸತಿ ನಿಲಯಗಳ ಮೂಲಭೂತ ಸೌಕರ್ಯಗಳಿಲ್ಲದೆ ಬಿಕೋ ಎನ್ನುತ್ತಿವೆ . ವಸತಿ ನಿಲಯಗಳ ಮೂಲಭೂತ ಅಭಿವೃದ್ಧಿಗಾಗಿ ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆ ಯಾಗುತಿದ್ದರೂ ಇದನ್ನುಕೆಲವು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾಮ ಮಾರ್ಗದ ಮುಖಾಂತರ ದುರುಪಯೋಗುತ್ತಿದೆ, ಅಷ್ಟೇ ಅಲ್ಲದೆ ಸಂಬಂಧಿಸಿದ ಅಧಿಕಾರಿಗಳು ವಸತಿ ನಿಲಯಗಳಿಗೆ ಸರಿಯಾಗಿ ಭೇಟಿ ನೀಡದೇ ಕತ೯ವ್ಯ ಲೋಪ ಮಾಡುತ್ತಾರೆ.ಹಾಗೂ ತಾಲೂಕಿನ ವಿವಿಧ ಇಲಾಖೆಗಳಿಂದ ಎಸ್.ಸಿ.ಪಿ./ಟಿ.ಎಸ್.ಪಿ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳು ಎಸ್ಸಿ/ಎಸ್ಟಿ ಕೇರಿಗಳಲ್ಲಿ ಸರಿಯಾಗಿ ಆಗದೆ ಇರುವ ಕುರಿತು ಅಧಿಕಾರಿಗಳು ಪರಿಶೀಲನೆ ಮಾಡಿರುವುದಿಲ್ಲ.ಹೀಗೆ ದುರುಪಯೋಗವಾಗಿರುವ ಅನುದಾನದ ಕುರಿತು ಮೇಲಾಧಿಕಾರಿಗಳು ತನಿಖೆ ಮಾಡಿ ಪರಿಶೀಲಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದರವೇಸ ಪದಾಧಿಕಾರಿಗಳು ಇಂದು ಮಾನ್ಯ ಉಪ ವಿಭಾಗಾಧಿಕಾರಿಗಳು ಇಂಡಿ ಇವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಧರ್ಮರಾಜ ಎಸ್.ಸಾಲೋಟಗಿ.ಡಾ.ಭುವನೇಶ್ವರಿ ಕಾಂಬಳೆ ಮಹಿಳಾ ಹೋರಾಟಗಾರರು ವಿಜಯಪುರ.ಇಂದಿರಾಗಾಂಧಿ ಹೊಸಮನಿ ಒಡಲ ದನಿ ಮಹಿಳಾ ಒಕ್ಕೂಟದ ಅಧ್ಯಕ್ಷರು.ಮಹಾದೇವಿ ಶಿವಶರಣ.ಜ್ಯೋತಿ ಧನ್ಯಳ.ಜಯಶ್ರೀ ಸಿಂಧೆ.ಮಂಜುನಾಥ ಮೇಲಿನ ಕೇರಿ.ಜೈಭೀಮ ಕಾಂಬಳೆ.ಮಿಥುನ ಬನಸೋಡೆ.ಯಲ್ಲಪ್ಪ ಗಜಾಕೋಶ.ನಾಗರಾಜ ತಾಂಡಲವಾಡಿ.ಮಲ್ಲಿಕಾಜು೯ನ ಜೈ ಭೀಮ್.ಸಿದ್ಧಾರಾಮ ಶಿರಗೂರ.ಪ್ರದೀಪ ಹಳಗುಣಕಿ .ಹರೀಶ ಮಡ್ಡಿಮನಿ.ಷಣ್ಮೂಖ ಕಾಂಬಳೆ.ಮಹಾಂತೇಶ ಮೇಲಿನಮನಿ.ರಾಕೇಶ ಕ್ಷೇತ್ರಿ.ರಫೀಕ ಬಡಿಗೇರ.ಮಲಕಾರಿ ಕಾಂಬಳೆ.ಲಕ್ಷ್ಮಣ ಗುಂದ್ವಾನ.ರಾಜು ಶಿರಗೂರ.ವಿಕಾಸ ಬನಸೋಡೆ.ನಿತೀನ ಬನಸೋಡೆ‌.ಸುನೀಲ ಗಾಯಕವಾಡ.ಅಜಯ ಧರೇನವರ.ಶೆಟ್ಟೆಪ್ಪ ಶಿಪೂರ.ಪಯೂವ ಶಿರಗೂರ.ಇತರರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button