ಪೊಲೀಸ್ ರಿಂದ ಅಂತರ್ ರಾಜ್ಯ ಕಳ್ಳರ ಬಂಧನ ಸುಮಾರು – 40 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ.

ಅಥಣಿ ನ.05

ಅಥಣಿ ಕಾಗವಾಡ ಮತ್ತು ಐಗಳಿ ಪೊಲೀಸ ಠಾಣಾ ಹದ್ದಿಗಳಲ್ಲಿ ನಡೆದ ಸ್ವತ್ತಿನ ಪ್ರಕರಣಗಳನ್ನು ಪತ್ತೆ ಮಾಡಲು ಶ್ರೀ ಭೀಮಾಶಂಕರ ಗುಳೇದ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ಹಾಗೂ ಶ್ರುತಿ.ಎನ್ ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಕಾ&ಸು) ಬೆಳಗಾವಿ ಜಿಲ್ಲೆ ಶ್ರೀ ಆರ್.ಬಿ ಬಸರಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಅಪರಾಧ ವಿಭಾಗ) ಬೆಳಗಾವಿ ಜಿಲ್ಲೆ ಶ್ರೀ ಪ್ರಶಾಂತ ಮುನ್ನೋಳಿ ಡಿ.ಎಸ್‌.ಪಿ ಅಥಣಿ ರವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ಸಂತೋಷ.ಡಿ ಹಳ್ಳೂರ ಸಿಪಿಐ ಅಥಣಿ ವೃತ್ತ ರವರ ನೇತೃತ್ವದಲ್ಲಿ ಕುಮಾರ ಹಾಡಕರ ಪಿಎಸ್‌ಐ ಐಗಳಿ, ರಾಕೇಶ ಬಗಲಿ ಪಿಎಸ್‌ಐ ಕಾಗವಾಡ, ಶ್ರೀ ಜಿ.ಎಸ್ ಉಪ್ಪಾರ ಪಿಎಸ್‌ಐ ಅಥಣಿ, ಶ್ರೀ ಎಮ್.ಬಿ ಬಿರಾದಾರ ಪಿಎಸ್‌ಐ ಅಥಣಿ, ಶ್ರೀ ಸಿ.ಬಿ ಸಾಗನೂರ ಪಿಎಸ್‌ಐ ಐಗಳಿ ಪೊಲೀಸ್ ಠಾಣೆ ಇವರ ಮುಂದಾಳತ್ವದಲ್ಲಿ ಅಪರಾಧ ತನಿಖಾ ತಂಡವನ್ನು ರಚಿಸಲಾಗಿತ್ತು.

ದಿನಾಂಕ-02.11.2024 ಮತ್ತು ದಿನಾಂಕ- 05.11.2024 ರಂದು ಮಹಾರಾಷ್ಟ್ರ ರಾಜ್ಯದ ಮೂರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿ ಅವರಿಂದ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ 522 ಗ್ರಾಂ ಚಿನ್ನಾಭರಣ ಮತ್ತು ಮೋಟರ ಸೈಕಲ್‌ನ್ನು ವಶ ಪಡಿಸಿ ಕೊಂಡು ಅಥಣಿ, ಕಾಗವಾಡ, ಐಗಳಿ ಮತ್ತು ಘಟಪ್ರಭಾ ಪೊಲೀಸ್ ಠಾಣೆಗಳ ವ್ಯಾಪ್ತಿಯ 01 ದರೋಡೆ, 01 ಸುಲಿಗೆ ಮತ್ತು 08 ಮನೆಗಳ್ಳತನ ಸೇರಿದಂತೆ ಒಟ್ಟು ಹತ್ತು ಕಳುವಿನ ಪ್ರಕರಣಗಳನ್ನು ಪತ್ತೆ ಮಾಡಿದ್ದು ಇರುತ್ತದೆ. ಸದರಿ ತನಿಖಾ ತಂಡದಲ್ಲಿ ಅಥಣಿ ವೃತ್ತದ ಪೊಲೀಸ್ ಠಾಣೆಗಳ ಸಿಬ್ಬಂದಿ ಜನರಾದ 1) ಪುರುಷೋತ್ತಮ ನಾಯಿಕ 2) ಮಹಾಂತೇಶ ಪಾಟೀಲ್ 3) ಅಣ್ಣಾಸಾಬ ಈರಕರ್ 4) ಸುರೇಶ ನಂದಿವಾಲೆ 5) ಬೀರಪ್ಪ ವರ್ತಕ 6) ಧರ್ಮೇಂದ್ರ ಶಾನವಾಡ 7) ಜಮೀರ ಪಟೇಗಾರ 8) ಜಮೀರ ಡಾಂಗೆ 9) ಮಹಾಂತೇಶ ಖೋತ 10) ಸಂಜುಕುಮಾರ ಸನಗೊಂಡ 11) ಶ್ರೀಧರ ಬಾಂಗಿ 13) ರಮೇಶ ಹಾದಿಮನಿ 14) ಹಸನ ಕರೋಶಿ 15) ಅಮೀರಖಾನ ಮೈಗೂರ 16) ವಿನೋದ ಟಕ್ಕಣ್ಣವರ ತಾಂತ್ರಿಕ ವಿಭಾಗ ಬೆಳಗಾವಿ ಇವರು ಇದ್ದರು. ಸದರಿ ಕಾರ್ಯವನ್ನು ಮಾನ್ಯ ಎಸ್‌.ಪಿ ಬೆಳಗಾವಿ ರವರು ಶ್ಲಾಘಿಸಿರುತ್ತಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button