ತಾಲೂಕ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸದಾಶಿವಪ್ಪ. ನಾಟಿಕಾರ – ನೇಮಕ.
ದೇವರ ಹಿಪ್ಪರಗಿ ನ.07

ದೇವರ ಹಿಪ್ಪರಗಿ ತಾಲೂಕ ದಲಿತ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಸದಾಶಿವಪ್ಪ. ನಾಟೀಕಾರ ರವರು ನೇಮಕ ಗೊಂಡಿದ್ದಾರೆ. ಅವರ ಕ್ರಿಯಾಶೀಲತೆಯನ್ನು ಗುರುತಿಸಿ ತಾಲೂಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜಾಲವಾದ ಹೈಸ್ಕೂಲಿನಲ್ಲಿ ಅಥಿತಿ ಶಿಕ್ಷಣಾಗಿ ಸೇವೆ ಸಲ್ಲಿಸಲಿದ್ದಾರೆ.

ದಲಿತ ಸಾಹಿತ್ಯ ಪರ ಚಟುವಟಿಕೆಗಳನ್ನು ಬಲ ವರ್ಧನೆ ಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕೋರಿ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಾ, ಬಸವರಾಜ ಸಾಲವಾಡಗಿ ಯವರು ನೇಮಕ ಗೊಳಿಸಿ ಸಂಘಟನೆಯನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ಯುವ ಜೊತೆಗೆ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪಹಚ್ಯಾಳ.ದೇವರ ಹಿಪ್ಪರಗಿ