ನೈರುತ್ಯ ಪ್ರಾಂತ್ಯದಲ್ಲಿ ಮೈತ್ರಿ ಅಭ್ಯರ್ಥಿಗಳೇ ಪಾರುಪತ್ಯ ಸಾಧಿಸಲಿದ್ದಾರೆ – ಎಂ. ನರೇಂದ್ರ.
ತರೀಕೆರೆ ಜೂನ್.01

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಮುಂಬರುವ ದಿನಗಳಲ್ಲಿ ನಡೆಯಲಿರುವ ಎಲ್ಲಾ ಚುನಾವಣೆಗಳಲ್ಲಿಯೂ ಸೇರಿದಂತೆ ನೈರುತ್ಯ ಪ್ರಾಂತ್ಯದಲ್ಲಿ ನಡೆದಿರುವ ಲೋಕಸಭೆ ಮತ್ತು. ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲವು ಸಾಧಿಸಲಿದ್ದಾರೆ ಎಂದು. ತರೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ ನರೇಂದ್ರ ಅಭಿಪ್ರಾಯಸಿದರು.ಅವರು ತಾಲೂಕು ಜೆಡಿಎಸ್ ಜಯ ಪ್ರಕಾಶ್ ನಾರಾಯಣ ಕಾರ್ಯಾಲಯದಲ್ಲಿ ಕರೆದಿದ್ದ. ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ಈಗಾಗಲೇ ನೈರುತ್ಯ ಪ್ರಾಂತ್ಯದಲ್ಲಿ. ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಮಂಗಳೂರಿನಿಂದ ಚೌಟ. ಚಿಕ್ಕಮಂಗಳೂರಿನಿಂದ ಕೋಟ. ಕೊಡಗಿನಿಂದ ಎದುವೀರ್ ಶಿವಮೊಗ್ಗದಿಂದ ರಾಘವೇಂದ್ರ ರವರ ಗೆಲುವು ನಿಶ್ಚಿತ ಎಂದರುಜೂನ್ ಮೂರರಂದು ನಡೆಯಲಿರುವ ಪ್ರಜ್ಞಾವಂತ ಮತದಾರರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ತಮ್ಮ ಹಕ್ಕುಗಳ ಪರಿಹಾರಕ್ಕಾಗಿ ಎನ್.ಡಿ.ಎ ಒಕ್ಕೂಟದ ಅಭ್ಯರ್ಥಿಗಳಾಗಿರ ತಕ್ಕಂತ. ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರ ದ ಅಭ್ಯರ್ಥಿಗಳಾದಂತ ಎಸ್ ಎಲ್ ಭೋಜೇಗೌಡ ಹಾಗೂ ಡಾಕ್ಟರ್ ಧನಂಜಯ್ ಸರ್ಜಿ ಮತದಾರರು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.ಶಿಕ್ಷಕರ ಕ್ಷೇತ್ರದ ಹಾಗೂ ನೌಕರರ ಹೊಸ ಪಿಂಚಣಿ ಯೋಜನೆ. ನೌಕರರಿಗೆ ಮಾರಕವಾಗಿದ್ದು ಇದರ ವಿರುದ್ಧ ಹೋರಾಟ ಮಾಡಿ. ಹಳೆ ಪದ್ಧತಿಯನ್ನು ಮುಂದುವರಿಸಲು. ಹಾಗೂ ಪದವೀಧರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡಲು. ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ನೀತಿಯ ವಿರುದ್ಧ ಪ್ರಜ್ಞಾವಂತ ಮತದಾರರು ಮೈತ್ರಿಯ ಅಭ್ಯರ್ಥಿಗಳಿಗೆ ಮತ ಚಲಾಯಿಸಲಿದ್ದಾರೆಆದ್ದರಿಂದ ನಮ್ಮ ಅಭ್ಯರ್ಥಿಗಳ ಗೆಲುವು ಸುಲಭವಾಗಿದೆ ಎಂದರು.ಮುಂಬರುವ ದಿನಗಳಲ್ಲಿ ಮೈತ್ರಿಯ ಲೋಕಸಭಾ ಸದಸ್ಯರು ಶಾಸಕರು ಸೇರಿದಂತೆ ವಿಧಾನ ಪರಿಷತ್ತಿನ. ಸದಸ್ಯರುಗಳು ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯ ಸರ್ಕಾರದಜನ ವಿರೋಧಿ ಆಡಳಿತದ ವಿರುದ್ಧ ಹೋರಾಟ ಮಾಡಿ. ಅರ್ಹರಿಗೆ ನ್ಯಾಯ ದೊರಕಿಸಿಕೊಡಲು ಸನ್ನದ್ಧರಾಗಿರುವ ನಮ್ಮ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಮಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಚಂದ್ರಪ್ಪ ಕಾರ್ಯದರ್ಶಿ. ಎಂ.ಡಿ. ದೇವೇಗೌಡ ಓಬಿಸಿ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್.ತರೀಕೆರೆ.ಚಿಕ್ಕ ಮಗಳೂರು.