ಸಂವಿಧಾನ ಸಂದರ್ಭೋಚಿತ ನುಡಿ ಮೀಸಲಾತಿ – ಹೋರಾಟಕ್ಕೆ ಮುನ್ನುಡಿ.
ಬಾಗಲಕೋಟೆ ಮಾ.19

ಈಗಿನ ಆಧುನಿಕ ಪ್ರಪಂಚದಲ್ಲಿ ಈ ಜನ ನನ್ನ ಕನಸುಗಳನ್ನು ಅವಲoಬಿಸುತ್ತಾರ, ಅಥವಾ ಬೇಕೋ ಬೇಡವೋ ಎಂಬ ಅನಿಸಿಕೆಯಲ್ಲಿ ದಿನ ಕಳೆಯುತ್ತಿದ್ದಾರೆ ಎಂಬ ಅಭಿಮತ ಅಂಬೇಡ್ಕರ್ ಅನುಯಾಯಿಗಳಿಗೆ ಸಹಜ ಅನಿಸುತ್ತಿದೆ. ನನ್ನ ಆತ್ಮದ ಬಗ್ಗೆ ನನಗೆ ನಂಬಿಕೆ ಇಲ್ಲ ಅದು ನಿಮ್ಮ ನೋಡುವುದು ಇಲ್ಲ ನನ್ನ ಸಂವಿಧಾನ ನಿಮಗೆ ಕಾವಲಾಗಿದೆ ಅದು ಕಾಯುತ್ತಿದೆ ಮತ್ತು ನೋಡುತ್ತಿದೆ ನನ್ನ ವಿಮೋಚನ ರಥ ನಿಮ್ಮ ಕಣ್ಣ ಮುಂದೆಯೇ ಇದೆ ಅದು ಆಗಾಗ ನಿಮ್ಮ ಮನೆ ಮುಂದೆ ಹಾದು ಹೋಗುತ್ತದೆ ಅದನ್ನು ಮುರಿದು ಸೌದೆ ಮಾಡಿಕೊಳ್ಳುತ್ತಿರೋ ಇಲ್ಲಾ……ಅದಕ್ಕೆ ನಿಮ್ಮ ಕೈ ಮತ್ತು ಹೆಗಲು ನೀಡಿ ಮುನ್ನಡೆಸುತ್ತಿರೋ…?ನೀವು ಬೀದಿಯಲ್ಲಿ ನಿಂತು ಬೇಡುವ ಬದಲು ಒಗ್ಗೂಡಿ ದುಡಿದಿದ್ದರೆ ನೀವು ಇಂದು ಯಾರನ್ನು ಬೇಡುವ ಹಾಗಿರಲಿಲ್ಲ ಕಣ್ಣ ಮುಂದೆ ನಿಮಗೆ ನಾನು ಕಾಣಿಸುತ್ತಲೇ ಇರುತ್ತೇನೆ.ನೀವು ಯಾರ್ಯಾರಿಗೋ ಸಲಾಂ ಹೊಡೆದು ಕಾಲಿಗೆ ಬಿದ್ದು ಬೂಟು ನೆಕ್ಕುತ್ತೀರಿ ನಿಮಗೆ ನನ್ನ ಹೋರಾಟದ ಅರಿವಿಲ್ಲ.ಸಮಯ ಸಾಧಕರಾಗಿ ನಿಮಗಾಗಿ ಬೇಡುತ್ತೀರಿ ಹಲ್ಲು ಕಿರಿದು ತಲೆ ಕೆರೆದು ಗುಲಾಮರಂತೆ ಅಡ್ಡಡ್ಡ ಬೀಳುತ್ತೀರಿ ನನ್ನ ನೆನಪು ಕನಸು ನಿಮಗೆ ಇನ್ನೂ ಅರಿವಾಗಿಲ್ಲ ಅರಿವಾದವರಂತೆ ಜನರೆದುರು ನಟಿಸುತ್ತೀರಿ ನಾಕೊಟ್ಟ ಓಟಿಗಾಗಿ ನನ್ನ ಜನರನ್ನೆ ಮೋಸ ಗೊಳಿಸುತ್ತೀರಿ. ನನ್ನ ಹೋರಾಟದ ಫಲವುಂಡು ಬಹುಪಾಲು ಮಂದಿ ಸಮಯ ಸಾಧಕರು ಸಮಯಕ್ಕೆ ತಕ್ಕಂತೆ ಒಬ್ಬರ ಜೊತೆ ಸೇರಿ ಕೊಳ್ಳುತ್ತಿರಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮಗೆ ಬೇಕಾದವರ ಜೊತೆ ಸೇರಿ ಕೊಳ್ಳುತ್ತಿರಿ ನಿಮ್ಮಂತೆ ನಾನಿದ್ದರೆ ನೀವೂ ಅದೇ ಜೀತಗಾರಿಕೆ ಪಾಳೇಗಾರಿಕೆಯ ಕೆಳಗೆ ನಿಂತಿರ ಬೇಕಿತ್ತು ಗೊತ್ತಿರಲಿ ನಿಮಗೆ ನನ್ನ ಹೆಸರೇಳಿ ಕೊಂಡು ನನಗೆ ಮೋಸ ಮಾಡಿದೆವರೆಲ್ಲ ನಶಿಸಿ ಹೋಗಿದ್ದಾರೆ. ಇದು ಬಾಬಾ ಸಾಹೇಬರ ಸಂವಿಧಾನದ ಅಚಲ ನುಡಿ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹುಲಗಿ.ಶಿರೂರು. ಬಾಗಲಕೋಟೆ