ವಕ್ಫ್ ಕಾಯ್ದೆ ರದ್ದಾಗಲಿ – ಹೇಮರಡ್ಡಿ ಮೇಟಿ.
ಮುದ್ದೇಬಿಹಾಳ ನ.09

ತಾಲೂಕಿನ ಬಡ ರೈತರ ಪಹಣಿಯಲ್ಲಿ ವಕ್ಪ್ ಬೋರ್ಡ್ ಅಧಿಕಾರ ಸಾಧಿಸಿರುವುದು ವಿಷಾದನೀಯ, ಕೂಡಲೇ ರೈತ ವಿರೋಧಿ ವಿಧೇಯಕವನ್ನು ತಕ್ಷಣ ಜಾರಿಗೆ ಬರುವಂತೆ ತಗೆದು ಹಾಕಬೇಕು ಎಂದು ಬಸರಕೋಡ ಜಿಲ್ಲಾ ಪಂಚಾಯತ ಮಾಜಿ ಸದಸ್ಯರು ಹೇಮರಡ್ಡಿ ಮೇಟಿ ಅಗ್ರಹಿಸಿದ್ದಾರೆ,ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು 1955 ರಲ್ಲಿ ಸಂವಿಧಾನ ಬಾಹಿರವಾಗಿ ನೆಹರು ಸರಕಾರದಲ್ಲಿ ಈ ಕಾಯ್ದೆ ಜಾರಿಗೆ ತಂದರು, ಮೂಲ ಸಂವಿಧಾನದಲ್ಲಿ ಡಾ, ಬಾಬಾಸಾಹೇಬ್ ಅಂಬೇಡ್ಕರ್ ಅವರು ವಕ್ಪ್ ಹೆಸರೇ ಬಳಸಿರಲಿಲ್ಲ ಆದರೆ ಅಲ್ಪಸಂಖ್ಯಾತರ ಓಲೈಕೆ ಮಾಡಲುವ ಕುತಂತ್ರಿ ಕಾಂಗ್ರೆಸ್ ಸರ್ಕಾರ ಕಾಯ್ದೆ ಜಾರಿ ಮಾಡಿ ಸಂವಿಧಾನಕ್ಕೆ ಅಪಚಾರ ಮಾಡಿತು, ಇದಕ್ಕೆ ಪುಷ್ಟಿ ನೀಡುವಂತೆ 2013 ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವಕ್ಪ್ ಬೋರ್ಡಿಗೆ ವಿಶೇಷ ಅಧಿಕಾರ ನೀಡಿತು, ಹೀಗಾಗಿ ದೇಶದ ಬಹುಪಾಲು ಭೂಮಿಯನ್ನು ವಕ್ಪ್ ಆವರಿಸಿದೆ, ಈಗ ಇದು ನಮ್ಮ ಕರ್ನಾಟಕದಲ್ಲಿ ಕೂಡ ಅಧಿಕಾರ ಸಾದಿಸುತ್ತಿದೆ, ವಿಜಯಪುರ ಜಿಲ್ಲೆಯಾದ್ಯಂತ ಸಾವಿರಾರು ರೈತರು ತಮ್ಮ ಪೂರ್ವಿಕರು ಸಂಪಾದಿಸಿದ ಭೂಮಿ ಕಳೆದು ಕೊಳ್ಳುವ ಭಯದಲ್ಲಿ ಇದ್ದಾರೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಕರ್ನಾಟಕದ ರೈತರ ನೆರವಿಗೆ ನಿಲ್ಲಬೇಕು ಎಂದು ಅಗ್ರಹಿಸಿದರು.ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದು ಬಿಟ್ಟು ರಾಜ್ಯ ಸರ್ಕಾರ ಶೀಘ್ರದಲ್ಲಿ ರೈತರ ಪಹಣಿಯಲ್ಲಿ ದಾಖಲಾಗಿರುವ ವಕ್ಪ್ ಹೆಸರನ್ನು ಕಡಿಮೆ ಮಾಡಬೇಕು ಮತ್ತು ಸರ್ಕಾರಿ ದಾಖಲೆಗಳನ್ನು ಯಥಾವತ್ತಾಗಿ ರೈತರ ಹೆಸರಿನಲ್ಲಿ ಭೂಮಿ ಇರುವಂತೆ ನೋಡಿ ಕೊಳ್ಳಬೇಕು ಎಂದು ಎಚ್ಚರಿಸಿದರು, ಇದೆ ರೀತಿ ರಾಜ್ಯ ಸರ್ಕಾರ ತನ್ನ ತುಷ್ಟೀಕರಣ ನೀತಿ ಮುಂದುವರಿಸಿದರೆ ವಿಜಯಪುರದ ಸಮಸ್ತ ರೈತರು ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ