ಅಂಬೇಡ್ಕರ್ ಹೆಸರು ಐತಿಹಾಸಿಕ ಘಟನೆಗಳ ನಾಮಫಲಕದಲ್ಲಿ ಅಳವಡಿಸಬೇಕು – ಜಿತೇಂದ್ರ ಕಾಂಬಳೆ.

ವಿಜಯಪುರ ನ.11

ಡಾ, ಬಿ.ಆರ್ ಅಂಬೇಡ್ಕರ ರವರು ವಿಜಯಪುರಕ್ಕೆ ಆಗಮಿಸಿದ ವರ್ಷ ಮತ್ತು ದಿನಾಂಕವನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಯ ಐತಿಹಾಸಿಕ ಘಟನೆಗಳ ನಾಮಫಲಕದಲ್ಲಿ ಅಳವಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕ್ರಿ.ಶ. 1948 ಯಲ್ಲಿ ಬಾಗೇವಾಡಿ ತಾಲೂಕಿನ ಸಾಸನೂರದಲ್ಲಿ 14 ಜನ ದಲಿತರನ್ನು ಸುಟ್ಟ (ನರಮೇಧ) ದ ವಿಷಯಕ್ಕೆ ಸಂಬಂಧಿಸಿದಂತೆ ಅಂದು ಡಾ, ಬಿ.ಆರ್ ಅಂಬೇಡ್ಕರವರು ಸಾಸನೂರ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಂದಿನ ಪಿ.ಎಸ್.ಐ. ರವರು VCP (Village Crime part) ಯಲ್ಲಿ (ಹಸ್ತಾಕ್ಷರಗಳಲ್ಲಿ) ನಮೂದಿಸಿದ್ದಾರೆ. ಈಗಲೂ ಸಹ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ VCP ದೊರೆಯುತ್ತದೆ.ಸಂವಿಧಾನ ಶಿಲ್ಪಿ ಡಾ, ಬಿ.ಆರ್. ಅಂಬೇಡ್ಕರ್ ರವರು ವಿಜಯಪುರ ಜಿಲ್ಲೆಗೆ ಸಾಕಷ್ಟು ಬಾರಿ ಆಗಮಿಸಿದ ಬಗ್ಗೆ ಅಂದಿನ ವಿಜಯಪುರ ಜಿಲ್ಲೆಯ ಬೀಳಗಿಯ ಆರೋಪಿತ ಸೋಮನಗೌಡ ಪಾಟೀಲ ಕೊಲೆ ಪ್ರಕರಣದಲ್ಲಿ ವಿಜಯಪುರ ನ್ಯಾಯಾಲಯದಲ್ಲಿ ಅಂಬೇಡ್ಕರವರು ಈ ಪ್ರಕರಣದಲ್ಲಿ ವಾದಿಸಿದ್ದಾರೆ.ಹೀಗೆ ಅನೇಕಸಲ ಅಂಬೇಡ್ಕರ್ ರವರು ವಿಜಯಪುರಕ್ಕೆ ಬಂದಿರಬಹುದು, ಅವುಗಳನ್ನೆಲ್ಲ ಪರಿಶೀಲಿಸಿ ನಿಖರ ಮಾಹಿತಿ ಮತ್ತು ದಿನಾಂಕ ಹಾಗೂ ಯಾವ ಕಾರಣಕ್ಕೆ ಆಗಮಿಸಿದ್ದರೆಂದು ಜಿಲ್ಲಾಧಿಕಾರಿಗಳ ಐತಿಹಾಸಿಕ ಘಟನೆಗಳ ನಾಮಫಲಕದಲ್ಲಿ ನಮೂದಿಸಲು ಮನವಿ.

ಜಿತೇಂದ್ರ ಕಾಂಬಳೆ

ರಾಜ್ಯ ಕಾರ್ಯಾಧ್ಯಕ್ಷರು

ಆರ್.ಪಿ.ಐ (ಅಂಬೇಡ್ಕರ)

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ. ಬಿ.ಹರಿಜನ.ಇಂಡಿ.ವಿಜಯನಗರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button