ಅಂಬೇಡ್ಕರ್ ಪುತ್ತಳಿ ಪ್ರತಿಷ್ಟಾಪಿಸಲು ಸ್ಥಳಾವಕಾಶ ಕೋರಿ ಧರಣಿ ಸತ್ಯಾಗ್ರಹ.
ಕೊಪ್ಪ ನ.13
ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ರವರ ಪುತ್ತಳಿ ಪ್ರತಿಷ್ಠಾಪಿಸಲು ಸ್ಥಳಾವಕಾಶ ಕೊಡಬೇಕು ಎಂದು ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿ ಎಂ.ವಿ ಭವಾನಿ ಹೇಳಿದರು. ಅವರು ಇಂದು ಕೊಪ್ಪ ತಾಲೂಕು ಹಿರೇಗದ್ದೆ ಗ್ರಾಮ ಪಂಚಾಯಿತಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ರೀ.ನಂಬರ್ 386 /2020-21 ರ ಸಂಘಟನೆಯ ತುಪ್ಪೂರು ಗ್ರಾಮ ಶಾಖೆಯವರು ಏರ್ಪಡಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಕೊಪ್ಪ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು. ದಮನಿತರ, ಶೋಷಿತರ ಧ್ವನಿ ಡಾ, ಬಿ.ಆರ್ ಅಂಬೇಡ್ಕರ್ ರವರ ಪುತ್ತಳಿಗೆ ಸ್ಥಳಾವಕಾಶ ನೀಡದಿದ್ದರೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಧರಣಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು. ಮನವಿ ಸ್ವೀಕರಿಸಿದ ಕಾರ್ಯ ನಿರ್ವಹಣಾಧಿಕಾರಿಗಳು ಮಾತನಾಡಿ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಕಳುಹಿಸುತ್ತೇವೆ, ಪುತ್ತಳಿ ನಿರ್ಮಾಣಕ್ಕೆ ಜಾಗ ಗುರ್ತಿಸಿ ಕೊಡಲು ಸೂಕ್ತ ಕ್ರಮ ವಹಿಸುತ್ತೇವೆ ಎಂದು ಹೇಳಿದ ಮೇರೆಗೆ ಧರಣಿ ನಿರತ, ಕ.ದ.ಸಂ. ಸ.ಕಾರ್ಯಕರ್ತರು ಪ್ರತಿಭಟನೆ ಧರಣಿಯನ್ನು ಸ್ಥಗಿತ ಗೊಳಿಸಿದರು. ಪ್ರತಿಭಟನೆ ಧರಣಿಯ ನೇತೃತ್ವವನ್ನು ಎಂ.ವಿ ಭವಾನಿ ಹಾಗೂ ಗ್ರಾಮ ಸಂಚಾಲಕ ಚರಣ್, ಉಮೇಶ್,ಸುನಿಲ್, ಪ್ರಜಿತ್ ಸವಿತಾ, ಜಾನಕಿ ವಹಿಸಿದ್ದು. ಗ್ರಾಮಸ್ಥರೆಲ್ಲರೂ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ ಚಿಕ್ಕಮಗಳೂರು